(ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಆ. ೨೩: ಸೈನಿಕರ ನೆಲೆಬೀಡು ಎಂಬ ಹೆಗ್ಗಳಿಕೆ ಹೊಂದಿರುವ ಕೊಡಗು ಜಿಲ್ಲೆಯ ಅದರಲ್ಲೂ ವಿಶೇಷವಾಗಿ ಸೈನ್ಯಕ್ಕೆ ಅಪಾರ ಸಂಖ್ಯೆಯ ಸೈನಿಕರನ್ನು ನೀಡಿರುವ ದ.ಕೊಡಗಿನ ಟಿ.ಶೆಟ್ಟಿಗೇರಿ ಯಲ್ಲಿ ಯುದ್ಧ ಸ್ಮಾರಕ ಅನಾವರಣವು ತಾ.೨೮ ರಂದು ಲೋಕಾರ್ಪಣೆ ಗೊಳ್ಳಲಿದೆ. ಈ ಅಪರೂಪದ ವಿಶೇಷ ಕಾರ್ಯಕ್ರಮದಲ್ಲಿ ಸೇನೆಯ ನಿವೃತ್ತ ಅಧಿಕಾರಿಗಳು, ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಯುದ್ಧ ಸ್ಮಾರಕಕ್ಕೆ ಸುಮಾರು ೫ ಲಕ್ಷ ವೆಚ್ಚವಾಗಲಿದ್ದು, ಅಮೃತಶಿಲೆ ಯಲ್ಲಿದ್ದ ಯುದ್ಧ ಸ್ಮಾರಕ ಅನಾವರಣ ಗೊಳ್ಳುತ್ತಿದೆ. ಮಾಜಿ ಸೈನಿಕರ ಸಂಘವು ಈ ವಿನೂತನ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದ್ದು, ಸ್ಮಾರಕವನ್ನು ಪಟ್ಟಣದ ವೃತ್ತದಲ್ಲಿ ಅಳವಡಿಸಲಾಗಿದೆ. ಅತ್ಯಂತ ವಿಶೇಷ ರೀತಿಯಲ್ಲಿ ಸೇನೆಯ ಸೈನಿಕನ ಪ್ರತಿಮೆ ಇದಾಗಿದ್ದು, ಸೈನಿಕರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಇಂತಹ ಕಾರ್ಯಕ್ಕೆ ಸೈನಿಕರ ಸಂಘವು ಮುಂದಾಗಿದೆ.

ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘವು ಸೈನಿಕರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಕಳೆದ ಹಲವಾರು ವರ್ಷಗಳಿಂದ ಸಂಘದ ಅಧ್ಯಕ್ಷ ಕಟ್ಟೆರ ಎ.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಯೋಜನೆ ರೂಪಿಸಲಾಗಿತ್ತು. ದೇಶದ ಸೈನ್ಯಕ್ಕೆ ಅಪಾರ ಸಂಖ್ಯೆಯಲ್ಲಿ ಸೈನಿಕರನ್ನು ನೀಡಿದ ಹೆಗ್ಗಳಿಕೆ ದ.ಕೊಡಗಿಗಿದೆ. ಈ ಹಿನ್ನೆಲೆಯಲ್ಲಿ ಯುದ್ಧ ಸ್ಮಾರಕವನ್ನು ಟಿ.ಶೆಟ್ಟಿಗೇರಿ ಪಟ್ಟಣದಲ್ಲಿ ಸ್ಥಾಪಿಸಲು ಸಂಘವು ಒಮ್ಮತದ ನಿರ್ಧಾರ ಕೈಗೊಂಡಿತ್ತು.

೨೦೦೨ರಲ್ಲಿ ಆಗಿನ ಸ್ಥಾಪಕ ಅಧ್ಯಕ್ಷರಾಗಿದ್ದ ಚಟ್ಟಂಡ ಕಾರ್ಯಪ್ಪ (ಸಾಬು) ಅವರು ಮಾಜಿ ಸೈನಿಕರ ಸಂಘವನ್ನು ಅಸ್ತಿತ್ವಕ್ಕೆ ತಂದರು. ೨೦೧೧ರಲ್ಲಿ ಮಾಜಿ ಸೈನಿಕರ ಸಂಘವು ಅಧಿಕೃತವಾಗಿ ಸ್ಥಾಪನೆಗೊಂಡಿತ್ತು. ಮಾಜಿ ಸೈನಿಕರ ಪತ್ನಿಯರ ಸಹಿತ ಸುಮಾರು ೪೫೦ ಸದಸ್ಯರನ್ನೊಳ ಗೊಂಡ ಈ ಸೈನಿಕ ಸಂಘವು ಸದಸ್ಯರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದೆ. ಸೈನಿಕರ ಸಹಾಯದಿಂದ ತನ್ನದೆ ಆದ ಸ್ವಂತ ಕಟ್ಟಡವನ್ನು ಹೊಂದಿರುವ ಹೆಗ್ಗಳಿಕೆ ಸಂಘದ್ದಾಗಿದ್ದು ಸದಾ ಚಟುವಟಿಕೆ ಯಿಂದ ಕೂಡಿದೆ.

ಟಿ. ಶೆಟ್ಟಿಗೇರಿಯ ಮಾಜಿ ಸೈನಿಕರ ಸಂಘದಲ್ಲಿ ಪ್ರಸ್ತುತ ಅಧ್ಯಕ್ಷರಾಗಿ ಕಟ್ಟೇರ ಎ.ವಿಶ್ವನಾಥ್, ಉಪಾಧ್ಯಕ್ಷರಾಗಿ ಮನ್ನೇರ ಎ.ರಮೇಶ್, ಕಾರ್ಯದರ್ಶಿ ಯಾಗಿ ಚಂಗುಲAಡ ಎಂ.ಸತೀಶ್, ಖಜಾಂಜಿಯಾಗಿ ಚಟ್ಟಂಗಡ ಎಸ್. ವಿಜಯ ಕಾರ್ಯಪ್ಪ,

(ಮೊದಲ ಪುಟದಿಂದ) ಜಂಟಿ ಕಾರ್ಯದರ್ಶಿಯಾಗಿ ಅಪ್ಪಚಂಗಡ ಪಿ.ಮೋಟಯ್ಯ, ನಿರ್ದೇಶಕರುಗಳಾಗಿ ಮಿದೇರಿರ ಬಿ.ಸುರೇಶ್, ಮಂದಮಾಡ ಎ.ಬೆಳ್ಯಪ್ಪ, ಚೊಟ್ಟೆಯಂಡಮಾಡ ಯು.ಗೋಕುಲ, ಮಚ್ಚಮಾಡ ಎಸ್.ಮನುಕುಶಾಲಪ್ಪ, ಚಟ್ಟಂಗಡ ಸಿ.ಪುಣ್ಯವತಿ, ಕೈಬುಲಿರ ಬಿ.ಪಾರ್ವತಿ, ಕಾನೂನು ಸಲಹೆಗಾರರಾಗಿ ಮಂಡೇಟಿರ ಎನ್.ಸುಬ್ರಮಣಿ ಹಾಗೂ ಹಿರಿಯ ಸಲಹೆಗಾರರಾಗಿ ಕಾಳಿಮಾಡ ಮುತ್ತಣ್ಣ ಸೇವೆ ಸಲ್ಲಿಸುತ್ತಿದ್ದಾರೆ. ೪೫೦ ಸದಸ್ಯರನ್ನು ಒಳಗೊಂಡಿರುವ ಸಂಘದಲ್ಲಿ ದ.ಕೊಡಗಿನ ನಿವೃತ್ತ ಸೈನಿಕರು ಸಂಘದಲ್ಲಿ ಸದಸ್ಯತ್ವ ಹೊಂದಿದ್ದಾರೆ.

ದೇಶ ಸೇವೆಯಲ್ಲಿ ಹವಾಲ್ದಾರ್ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಂತರ ಕೈಬುಲಿರ ಬೋಪಯ್ಯ ತವರೂರಿಗೆ ಆಗಮಿಸಿ ಜೀವನ ನಡೆಸಿದ್ದರು. ಇದೀಗ ಇವರ ಸವಿನೆನಪಿನಲ್ಲಿ ಬೋಪಯ್ಯನವರ ಧರ್ಮಪತ್ನಿ ಕೈಬುಲಿರ ಪಾರ್ವತಿ ಬೋಪಯ್ಯನವರು ರೂ. ೩ ಲಕ್ಷ ಹಣವನ್ನು ನೀಡಿದ್ದಾರೆ.

ಮಾಜಿ ಸೈನಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ, ಸೈನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು, ಸಾಮಾಜಿಕ ಕಾರ್ಯಗಳು ಸಂಘದ ಉದ್ದೇಶಗಳಾಗಿವೆ. ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ಇಂದಿಗೂ ನಡೆಸಲಾಗುತ್ತಿದೆ ಎಂದು ಸಂಘದ ಜಂಟಿ ಕಾರ್ಯದರ್ಶಿ ಅಪ್ಪಚಂಗಡ ಪಿ. ಮೋಟಯ್ಯ ತಿಳಿಸಿದರು.

ಸಂಘವು ಅನುಷ್ಠಾನಕ್ಕೆ ಬಂದ ನಂತರ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಮಾಜಿ ಸೈನಿಕರ ಶ್ರೇಯೋಭಿವೃದ್ಧಿಗೆ ಸಂಘವು ಶ್ರಮಿಸುತ್ತಿದೆ. ಸಂಘದ ಸದಸ್ಯರ ವಂತಿಕೆಯಿAದ ಹಲವು ಸಾಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಗಡಿಯಲ್ಲಿ ಸೈನಿಕರು ದೇಶವನ್ನು ಕಾಯುತ್ತಿದ್ದಾರೆ. ಇವರ ಸ್ಮರಣಾರ್ಥ ಸಾರ್ವಜನಿಕರಲ್ಲಿ ಗೌರವ ಮೂಡಿಸುವಂತ ನಿಟ್ಟಿನಲ್ಲಿ ಯುದ್ಧ ಸ್ಮಾರಕವನ್ನು ನಿರ್ಮಿಸಬೇಕೆಂಬ ಉದ್ದೇಶ ನಮ್ಮದಾಗಿತ್ತು. ಆ ನಿಟ್ಟಿನಲ್ಲಿ ಯುದ್ಧ ಸ್ಮಾರಕವನ್ನು ನಿರ್ಮಾಣದಲ್ಲಿ ಸದಸ್ಯರಾದ ಕೈಬುಲಿರ ಪಾರ್ವತಿರವರ ಕೊಡುಗೆ ಅಪಾರವಾಗಿದೆ ಎಂದು ಸಂಘದ ಅಧ್ಯಕ್ಷ ಕಟ್ಟೇರ ಎ.ವಿಶ್ವನಾಥ್ ತಮ್ಮ ಅಭಿಪ್ರಾಯ ಹಂಚಿಕೊAಡರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆಕಾಶವಾಣಿ ಉದ್ಘೋಷಕಿ ಕೂಪದೀರ ಶಾರದಾ ನಂಜಪ್ಪ, ದಾನಿಗಳಾದ ಕೈಬುಲೀರ ಪಾರ್ವತಿ ಬೋಪಯ್ಯ, ಚಟ್ಟಂಗಡ ಪುಣ್ಯಾವತಿ ಚಿಣ್ಣಪ್ಪ, ಕಾನೂನು ಸಲಹೆಗಾರರಾದ ಮಂಡೇಟಿರ ಸುಬ್ರಮಣಿ,ಸಂಘದ ಹಿರಿಯ ಸದಸ್ಯರಾದ ಮಚ್ಚಮಾಡ ಮಾದಪ್ಪ, ಸಂಘದ ಮಾಜಿ ಕಾರ್ಯದರ್ಶಿ ಉಳುವಂಗಡ ಗಣಪತಿ ಹಾಗೂ ಚಂಗುಲAಡ ಅಶ್ವಿನಿ ಸತೀಶ್‌ರವರನ್ನು ಸನ್ಮಾನಿಸಲಾಗುವುದು. ಮಾಜಿ ಸೈನಿಕರ ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಯುದ್ಧ ಸ್ಮಾರಕವು ತಾ.೨೮ ರಂದು ಲೋಕಾರ್ಪಣೆಯಾಗಲಿದ್ದು, ಈ ವಿಶೇಷ ಕಾರ್ಯಕ್ರಮದಲ್ಲಿ ದಾನಿಗಳಾದ ಕೈಬುಲಿರ ಪಾರ್ವತಿ ಬೋಪಯ್ಯ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ವಿಶೇಷ ಅಹ್ವಾನಿತರಾಗಿ ಕೊಡಗು ಜಿಲ್ಲಾ ಸೈನಿಕರ ಸಂಘದ ಮಾಜಿ ಅಧ್ಯಕ್ಷ, ಮೇ.ಜ. ಬಾಚಮಂಡ ಕಾರ್ಯಪ್ಪ, ಜಿಲ್ಲಾಧಿಕಾರಿ ವೆಂಕಟ್‌ರಾಜ್, ಪೊಲೀಸ್ ಅಧೀಕ್ಷಕ