ಕಾವೇರಿ ವಿವಾದ : ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ನಿರ್ಧಾರ
ಬೆಂಗಳೂರು, ಆ. ೨೩: ಯಾವುದೇ ಕಾರಣಕ್ಕೂ ರಾಜ್ಯದ ರೈತರ ಹಿತ ಬಲಿ ಕೊಡುವುದಿಲ್ಲ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾವೇರಿ, ಮೇಕೆದಾಟು, ಅಪ್ಪರ್ ಕೃಷ್ಣ ಮತ್ತು ಮಹದಾಯಿ ವಿವಾದ ಸಂಬAಧ ಕೇಂದ್ರದ ಬಳಿಗೆ ಸರ್ವ ಪಕ್ಷಗಳ ನಿಯೋಗ ಕರೆದೊಯ್ಯಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ. ಇಂದು ಸರ್ವಪಕ್ಷ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಕರ್ನಾಟಕದ ನೀರಿನ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಇದಕ್ಕೆ ಸರ್ವ ಪಕ್ಷಗಳು ಸಹ ಸಮ್ಮತಿ ಸೂಚಿಸಿವೆ ಎಂದು ಸಿಎಂ ತಿಳಿಸಿದ್ದಾರೆ. ಸರ್ವಪಕ್ಷ ನಿಯೋಗ, ಕೇಂದ್ರ ಪರಿಸರ ಸಚಿವರನ್ನು ಸಹ ಭೇಟಿ ಮಾಡಲಿದ್ದು, ಮೇಕೆದಾಟು ಯೋಜನೆಗೆ ಅರಣ್ಯ ಪ್ರದೇಶದ ಕ್ಲಿಯರೆನ್ಸ್ ನೀಡಬೇಕೆಂದು ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಜಲ ವಿವಾದ, ಭಾಷೆ ಗಡಿ ಬಗ್ಗೆ ರಾಜ್ಯದ ನಿಲುವು ತೆಗೆದುಕೊಳ್ಳುವಾಗ ಯಾವುದೇ ರಾಜಕೀಯ ಮಾಡಿಲ್ಲ. ಸರ್ಕಾರ ರಾಜ್ಯದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿಲುವುಗಳಿಗೆ ಬೆಂಬಲವಿದೆ ಎಂದು ಸರ್ವ ಪಕ್ಷದ ನಾಯಕರು ಹೇಳಿದ್ದಾರೆ ಎಂದು ಸಿಎಂ ತಿಳಿಸಿದರು.
ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆ
ನವದೆಹಲಿ, ಆ. ೨೩: ೧೦ನೇ ತರಗತಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವ ಆಯ್ಕೆಯೊಂದಿಗೆ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಶಿಕ್ಷಣ ಸಚಿವಾಲಯದ ಹೊಸ ಪಠ್ಯಕ್ರಮದ ಚೌಕಟ್ಟಿನ ಪ್ರಕಾರ, ೧೧ ಮತ್ತು ೧೨ನೇ ತರಗತಿಯ ವಿದ್ಯಾರ್ಥಿಗಳು ಒಂದು ಭಾಷೆಯ ಬದಲಿಗೆ ಎರಡು ಭಾಷೆಗಳನ್ನು ಅಧ್ಯಯನ ಮಾಡಬೇಕು ಮತ್ತು ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಶಿಕ್ಷಣ ಸಚಿವಾಲಯದ ಅಧಿಕಾರಿಗಳ ಪ್ರಕಾರ, ೨೦೨೪ ರ ಶೈಕ್ಷಣಿಕ ವರ್ಷಕ್ಕೆ ಹೊಸ ಶಿಕ್ಷಣ ನೀತಿ(ಎನ್‌ಇಪಿ)ಯ ಪ್ರಕಾರ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ೧೧ ಮತ್ತು ೧೨ನೇ ತರಗತಿಗಳಲ್ಲಿ, ವಿದ್ಯಾರ್ಥಿಗಳು ಎರಡು ಭಾಷೆಗಳನ್ನು ಅಧ್ಯಯನ ಮಾಡಬೇಕಾಗುತ್ತದೆ ಮತ್ತು ಅವುಗಳಲ್ಲಿ ಒಂದು ಭಾರತೀಯ ಭಾಷೆಯಾಗಿರಬೇಕು ಎಂದು ಅಂತಿಮ ಎನ್‌ಸಿಎಫ್ (ರಾಷ್ಟಿçÃಯ ಪಠ್ಯಕ್ರಮ ಚೌಕಟ್ಟು) ವರದಿ ಹೇಳಿದೆ. ಪ್ರಸ್ತುತ ಇರುವ ಬೋರ್ಡ್ ಪರೀಕ್ಷೆಗಳನ್ನು ಸುಲಭ ಮಾಡಲು ಹಾಗೂ ಈ ಪರೀಕ್ಷೆಯು ತಿಂಗಳ ತರಬೇತಿ ಮತ್ತು ಕಂಠಪಾಠದ ಬದಲಿಗೆ ಸಾಮರ್ಥ್ಯಗಳ ಬಗ್ಗೆ ತಿಳುವಳಿಕೆ ಮತ್ತು ಸಾಧನೆಯನ್ನು ನಿರ್ಣಯಿಸುತ್ತದೆ ಎಂದು ವರದಿ ಹೇಳಿದೆ.
ರೈಲ್ವೆ ಮೇಲ್ಸೇತುವೆ ಕುಸಿತ - ೧೭ ಸಾವು
ಮಿಜೋರಾಂ, ಆ. ೨೩: ನಿರ್ಮಾಣ ಹಂತದ ರೈಲ್ವೆ ಮೇಲ್ಸೇತುವೆ ಕುಸಿದು ಕನಿಷ್ಟ ೧೭ ಕಾರ್ಮಿಕರು ಮೃತಪಟ್ಟಿರುವ ದುರಂತ ಮಿಜೋರಾಂನ ಸಾಯಿರಂಗ್ ಪ್ರದೇಶದಲ್ಲಿ ಬುಧವಾರ ಸಂಭವಿಸಿದೆ. ರಾಜಧಾನಿ ಐಜೋಲ್‌ನಿಂದ ೨೧ ಕಿ.ಮೀ. ದೂರದಲ್ಲಿರುವ ಸಾಯಿರಂಗ್‌ನಲ್ಲಿ ಬೆಳಿಗ್ಗೆ ೧೦ರ ವೇಳೆ ಘಟನೆ ನಡೆದಿದೆ. ಈ ಸಂದರ್ಭ ಸುಮಾರು ೩೫-೪೦ ಕಾರ್ಮಿಕರು ಕಾಮಗಾರಿ ಸ್ಥಳದಲ್ಲಿದ್ದರು. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಇಲ್ಲಿಯವರೆಗೆ ೧೭ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಹಲವರು ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸಂತಾಪ ಸೂಚಿಸಿರುವ ಪ್ರಧಾನ ಮಂತ್ರಿ ಕಾರ್ಯಾಲಯ, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿ ಎಕ್ಸ್(ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದೆ. ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನಿಡಿದ್ದು, ಮೃತರ ಕುಟುಂಬಕ್ಕೆ ತಲಾ ೧೨ ಲಕ್ಷ ಹಾಗೂ ಗಾಯಾಳುಗಳಿಗೆ - ೫೦ ಸಾವಿರ ನೆರವು ಘೋಷಿಸಿದೆ.
ಇ.ಡಿ. ಶೋಧಕ್ಕೆ ಕಾಂಗ್ರೆಸ್ ಅಸಮಾಧಾನ
ನವದೆಹಲಿ, ಆ. ೨೩: ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಫೇಲ್ ಅವರ ರಾಜಕೀಯ ಸಲಹೆಗಾರ ವಿನೋದ್ ವರ್ಮಾ ಅವರಿಗೆ ಸೇರಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ಶೋಧ ನಡೆಸಿರುವುದನ್ನು ಖಂಡಿಸಿರುವ ಕಾಂಗ್ರೆಸ್ ಪಕ್ಷ, ಬಿಜೆಪಿ ವಿರುದ್ಧ ಕಿಡಿಕಾರಿದೆ. ಬಿಜೆಪಿಯ ಇಂತಹ ಕೀಳು ತಂತ್ರಗಳು ಹಾಗೂ ಬೆದರಿಕೆಗಳಿಗೆ ಛತ್ತೀಸಗಢ ಸರ್ಕಾರ ಬಗ್ಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ವರ್ಮಾ ಅವರು ಮುಖ್ಯಮಂತ್ರಿ ಬಫೇಲ್ ಅವರ ವಿಶೇಷ ಕರ್ತವ್ಯಾಧಿಕಾರಿಯೂ (ಒಎಸ್‌ಡಿ) ಆಗಿದ್ದು, ಯಾವ ಪ್ರಕರಣಕ್ಕೆ ಸಂಬAಧಿಸಿ ಇ.ಡಿ ಈ ಶೋಧ ನಡೆಸಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಮುಂಬರುವ ಚುನಾವಣೆಯಲ್ಲಿ ಛತ್ತೀಸಗಢದಲ್ಲಿ ಬಿಜೆಪಿ ದೂಳಿಪಟವಾಗಲಿದೆ ಎಂಬ ಕೆಲ ಚುನಾವಣೆಪೂರ್ವ ಸಮೀಕ್ಷೆಗಳು ಹೇಳಿವೆ. ಈ ವರದಿಗಳಿಂದ ಧೃತಿಗೆಟ್ಟಿರುವ ಬಿಜೆಪಿ, ಜಾರಿ ನಿರ್ದೇಶನಾಲಯದಿಂದ (ಇ.ಡಿ) ದಾಳಿ ನಡೆಸಿ ಬೆದರಿಕೆ ಒಡ್ಡುತ್ತಿದೆ' ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ.
ಸಿ.ಆರ್. ರಾವ್ ಇನ್ನಿಲ್ಲ
ಬೆಂಗಳೂರು, ಆ. ೨೩: ಅಮೆರಿಕದಲ್ಲಿ ನೆಲೆಸಿದ್ದ ಕರ್ನಾಟಕ ಮೂಲದ ಖ್ಯಾತ ಗಣಿತ ಮತ್ತು ಸಂಖ್ಯಾಶಾಸ್ತçಜ್ಞ ಸಿ.ಆರ್. ರಾವ್ ಅವರು ಬುಧವಾರ ಬೆಳಿಗ್ಗೆ ನಿಧನರಾಗಿದ್ದು, ಅವರಿಗೆ ೧೦೨ ವರ್ಷ ವಯಸ್ಸಾಗಿತ್ತು. ‘ಪದ್ಮವಿಭೂಷಣ' ಪ್ರಶಸ್ತಿ ವಿಜೇತ ಸಿ.ಆರ್. ರಾವ್ ಅವರು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಜನಿಸಿದ್ದರು. ಗಣಿತ ಮತ್ತು ಸಂಖ್ಯಾ ಶಾಸ್ತ್ರ ಕ್ಷೇತ್ರದಲ್ಲಿ ಅವರು ಮಾಡಿರುವ ಅಪಾರ ಸಾಧನೆಗಾಗಿ ದೇಶದ ಅತ್ಯುನ್ನತ ಪ್ರಶಸ್ತಿ 'ಪದ್ಮವಿಭೂಷಣ' ನೀಡಿ ಗೌರವಿಸಲಾಗಿದೆ.
ಬ್ರಿಕ್ಸ್ ವಿಸ್ತರಣೆಗೆ ಭಾರತ ಬೆಂಬಲ
ಜೋಹಾನಸ್‌ಬರ್ಗ್, ಆ. ೨೩: ಸದಸ್ಯ ರಾಷ್ಟçಗಳ ಒಮ್ಮತದ ಮೇರೆಗೆ ಬ್ರಿಕ್ಸ್ ವಿಸ್ತರಣೆಗೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇರಾನ್, ಸೌದಿ ಅರೇಬಿಯಾ, ಯುಎಇ ಸೇರಿದಂತೆ ೨೩ ದೇಶಗಳು ಬ್ರಿಕ್ಸ್ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ಮೋದಿ ಅವರು ಸದಸ್ಯತ್ವ ಸಂಖ್ಯೆ ವಿಸ್ತರಿಸಲು ಇಂಗಿತ ವ್ಯಕ್ತಪಡಿಸಿ ನೀಡಿರುವ ಹೇಳಿಕೆಯು ಮಹತ್ವ ಪಡೆದಿದೆ. ಜೋಹಾನ ಸ್‌ಬರ್ಗ್ನಲ್ಲಿ ಬುಧವಾರ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, 'ಸದ್ಯ ಭಾರತ ಸೇರಿದಂತೆ ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ಈ ವೇದಿಕೆಯಡಿ ಒಗ್ಗೂಡಿವೆ. ಭವಿಷ್ಯದಲ್ಲಿ ಸದಸ್ಯ ರಾಷ್ಟçಗಳ ಸಂಖ್ಯೆ ಹೆಚ್ಚಿಸಲು ಅಗತ್ಯ ಬೆಂಬಲ ನೀಡಲು ಬದ್ಧ ಎಂದು ಘೋಷಿಸಿದರು. ಜೊತೆಗೆ, ಬ್ರಿಕ್ಸ್ ಬೆಂಬಲದೊAದಿಗೆ 'ಜಿ೨೦ ಆಫ್ರಿಕನ್ ಒಕ್ಕೂಟದ ಸೇರ್ಪಡೆಗೂ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.
ಗ್ರೀಸ್‌ನಲ್ಲಿ ಕಾಡಿಚ್ಚು - ೧೮ ಮಂದಿ ಸಾವು
ಅಥೆನ್ಸ್, ಆ. ೨೩: ಉತ್ತರ ಗ್ರೀಸ್‌ನ ಇವೋರ್ಸ್ ಪ್ರಾಂತ್ಯದಲ್ಲಿ ಕಾಡ್ಗಿಚ್ಚಿಗೆ ಬಲಿಯಾದ ೧೮ ಮಂದಿಯ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ವಶಕ್ಕೆ ಪಡೆದಿದ್ದು, ಇವರು ವಲಸಿಗರಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲೆಕ್ಸಾಂಡೋ ಪೊಲೀಸ್ ನಗರದಲ್ಲಿ ಕಳೆದ ನಾಲ್ಕು ದಿನದಿಂದ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಮೃತದೇಹಗಳು ದಾದಿಯಾ ಅರಣ್ಯದಲ್ಲಿ ಪತ್ತೆಯಾಗಿವೆ. ಈ ಪ್ರದೇಶದಲ್ಲಿ ಕಾಣೆಯಾದವರ ವರದಿಯಾಗಿಲ್ಲ. ಸಾವಿಗೂ ಮುನ್ನ ಇವರು ಹೇಗೆ ದೇಶಕ್ಕೆ ಪ್ರವೇಶಿಸಿದರು ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಗ್ರೀಸ್‌ನ ಅಗ್ನಿಶಾಮಕ ಇಲಾಖೆಯ ವಕ್ತಾರ ಯೆಯನ್ನೀಸ್ ಆರ್ಟೋಪಿಯೋಸ್ ತಿಳಿಸಿದ್ದಾರೆ. ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಟರ್ಕಿ ಗಡಿಭಾಗವಾದ ಈ ಪ್ರದೇಶದಿಂದ ಸಾವಿರಾರು ವಲಸಿಗರು ಯುರೋಪ್‌ಗೆ ವಲಸೆ ಹೋಗುತ್ತಿರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ಗಾಳಿ ವೇಗವಾಗಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ನಡೆಸಿದ ಪ್ರಯತ್ನ ವ್ಯರ್ಥವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.