ಗೋಣಿಕೊಪ್ಪಲು, ಆ. ೨೪: ಗೋವಾ ರಾಜ್ಯದ ವರ್ಣ ಎಂಬಲ್ಲಿನ ಪಡ್ರೆ ಇಂಜಿನಿಯರಿAಗ್ ಕಾಲೇಜಿನ ೩೪ನೇ ಘಟಿಕೋತ್ಸವದಲ್ಲಿ ಮೂಲತಃ ಜಿಲ್ಲೆಯ ವೆಸ್ಟ್ ನೆಮ್ಮಲೆಯ ನಿಶಿಕಾ ರಘು ಮಾಣೀರ ಅವರು ಎಲೆಕ್ಟಾçನಿಕ್ಸ್ ಮತ್ತು ಟೆಲಿಕಮ್ಯೂನಿಕೇಷನ್ ಬಿ.ಇ ಇಂಜಿನಿಯರಿAಗ್ನಲ್ಲಿ ಅತ್ಯಧಿಕ ಅಂಕಗಳಿಸಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಭಾರತದ ರಾಷ್ಟçಪತಿ ದ್ರೌಪದಿ ಮುರ್ಮು ಅವರ ಉಪಸ್ಥಿತಿಯಲ್ಲಿ ನಿಶಿಕಾ ಚಿನ್ನದ ಪದಕ ಸ್ವೀಕರಿಸಿದರು.
ವೆಸ್ಟ್ ನೆಮ್ಮಲೆಯ ಮಾಣೀರ ರಘು ನಂಜಪ್ಪ ಮತ್ತು ರೂಪ (ತಾಮನೆ ಕೊಣಿಯಂಡ) ದಂಪತಿ ಪುತ್ರಿ ನಿಶಿಕಾ ತಾ. ೨೩ರಂದು ಗೋವಾ ರಾಜಭವನದಲ್ಲಿ ಜರುಗಿದ ೩೪ನೇ ಘಟಿಕೋತ್ಸವದಲ್ಲಿ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಉಪಕುಲಪತಿ ಫ್ರೋ. ಹರಿಲಾಲ್ ಬಿ. ಮೆನೆನ್ ಹಾಗೂ ರಿಜಿಸ್ಟಾçರ್ ಫ್ರೋ. ವಿಷ್ಣು ನಾಡಕರ್ಣಿ ಅವರ ಸಮ್ಮುಖದಲ್ಲಿ ದಿವಂಗತ ಸುಶೀಲಬಾಯಿ ವಸಂತ್ ಸಿನಾಯಿ ಖಾಂಡೆಪಾರ್ಕರ್ ಚಿನ್ನದ ಪದಕವನ್ನು ಸ್ವೀಕರಿಸಿದರು.