ಬೆಂಗಳೂರು, ಆ. ೨೩: ಇಡೀ ದೇಶವೇ ಇಂದು ರಾಜಕೀಯ ರಹಿತವಾಗಿ, ಜಾತಿ ಭೇದÀ ಮರೆತು ಪೂಜೆ ಪುನಸ್ಕಾರಗಳಲ್ಲಿ ತೊಡಗಿತ್ತು. ಆದರೆ, ಪೂಜೆಗಳು ಸ್ವಯಂ ಪ್ರಾಪ್ತಿಗಲ್ಲ. ಬದಲಿಗೆ ಭಾರತೀಯ ಬಾಹ್ಯಾಕಾಶ

ಸಂಸ್ಥೆ ಇಸ್ರೋ ಕೈಗೊಂಡ ಚಂದ್ರಯಾನ-೩ ಯಶಸ್ವಿಯಾಗಲೆಂದು. ಸಂಜೆ ೫:೨೦ ರಿಂದ ೬ ಗಂಟೆ ೩ ನಿಮಿಷಗಳವರೆಗೂ ದೂರದರ್ಶನ, ಸಾಮಾಜಿಕ ಜಾಲತಾಣಗಳ ಮೂಲಕ ಐತಿಹಾಸಿಕ ಚಂದ್ರಯಾನ-೩ ಯೋಜನೆಯ ಕೊನೆಯ ಹಂತದ ಚಲನ-ವಲನಗಳ ವೀಕ್ಷಣೆಯಲ್ಲಿ ಮಗ್ನರಾಗಿದ್ದ ಕೋಟ್ಯಂತರ ಭಾರತೀಯರು ಯೋಜನೆಯ ಯಶಸ್ವಿ ಸುದ್ದಿ ಕೇಳಿ ಮುಗಿಲುಮುಟ್ಟಿದರು. ಭಾರತವು ಚಂದ್ರನೆಲದಲ್ಲಿ ಲ್ಯಾಂಡರ್ ಅನ್ನು ಸುಭದ್ರವಾಗಿ ಇಳಿಸಿದ ೪ನೇ ರಾಷ್ಟç ಎಂಬ ಹಿರಿಮೆಗೆ ಪಾತ್ರವಾಯಿತಲ್ಲದೆ ನೂರಾರು ಗುಂಡಿ (ಕ್ರೇಟರ್) ಗಳಿರುವ ಕ್ಲಿಷ್ಟಕರವಾದ ಮೇಲ್ಮೆöÊ ಹೊಂದಿರುವ ಚಂದ್ರನ ದಕ್ಷಿಣ ಧ್ರುವದ ಮೇಲೆ ಸುರಕ್ಷಿತವಾಗಿ ಲ್ಯಾಂಡರ್ ಇಳಿಸಲು ಭಾರತವು ಮೊದಲ ರಾಷ್ಟç ಎಂಬ ಹಗ್ಗಳಿಕೆಗೆ ಪಾತ್ರವಾಯಿತು. ಬೆಂಗಳೂರಿನಲ್ಲಿನ ಇಸ್ರೋದ ಟೆಲಿಮೆಟ್ರಿ ಕೇಂದ್ರದಲ್ಲಿ ಇಸ್ರೋ ವಿಜ್ಞಾನಿಗಳು, ತಾಂತ್ರಿಕ ತಜ್ಞರು ಯೋಜನೆಯ ನಿಯಂತ್ರಣ ಸೇರಿದಂತೆ ಆಗುಹೋಗುಗಳ ಬಗ್ಗೆ ತಿಳಿದುಕೊಂಡರು. ನಿಗದಿತ ಸಮಯ ಸಂಜೆ ೬ ಗಂಟೆ ೪ ನಿಮಿಷ ಸಮಯಕ್ಕೆ ೧ ನಿಮಿಷ ಮುಂಚಿತವಾಗಿ, ಅಂದರೆ ೬ ಗಂಟೆ ೩ ನಿಮಿಷಕ್ಕೆ ಚಂದ್ರನ ಪದರವನ್ನು ವಿಕ್ರಂ ಲ್ಯಾಂಡರ್ ಸ್ಪರ್ಶಿಸಿ ಐತಿಹಾಸಿಕ ಕ್ಷಣಕ್ಕೆ ಕಾರಣವಾಯಿತು. ಇಸ್ರೋ ಸಿಬ್ಬಂದಿ ಸೇರಿ ಇಡೀ ದೇಶವೇ ಹರ್ಷೋದ್ಗಾರದಲ್ಲಿ ಮುಳುಗಿತು. ಯೂರೋಪ್ ಹಾಗೂ ಅಮೇರಿಕಾ ಬಾಹ್ಯಾಕಾಶ ಸಂಸ್ಥೆಗಳು ಕೂಡ ವಿಕ್ರಂ ಚಲನ-ವಲನವನ್ನು ಟ್ರಾö್ಯಕ್ ಮಾಡಲು ಸಹಕರಿಸಿತು.

೪ ಹಂತಗಳಲ್ಲಿ ಲ್ಯಾಂಡಿAಗ್ ಪ್ರಕ್ರಿಯೆ - ಸಂಪೂರ್ಣ ಸ್ವಯಂಚಾಲಿತ

ಜುಲೈ ೧೪ ರಂದು ಶ್ರೀಹರಿಕೋಟಾದ ಸತೀಶ್ ಧವಾನ್ ಬಾಹ್ಯಾಕಾಶ ಕೇಂದ್ರದಿAದ ಎಲ್.ವಿ.ಎಂ-೩ ರಾಕೆಟ್ ಮೂಲಕ ಪಯಣ ಬೆಳೆಸಿದ ಚಂದ್ರಯಾನ-೩ ನೌಕೆಯು ಭೂಮಿಯ ಸುತ್ತ ಹಲವಾರು ಬಾರಿ ಪ್ರದಕ್ಷಿಣೆ ಮಾಡಿದ ಬಳಿಕ ಆಗಸ್ಟ್ ೧ ರಂದು ಸರಾಸರಿ ೩ ಲಕ್ಷ ೮೪ ಸಾವಿರ ಕಿ.ಮೀ ದೂರದಲ್ಲಿರುವ ಚಂದ್ರನೆಡೆಗೆ ಸಾಗಲಾರಂಭಿಸಿತು. ಚಂದ್ರನ

ಕಕ್ಷೆಯನ್ನು ೫ನೇ ತಾರೀಕು ಸೇರಿದ ಬಳಿಕ ತಾ.೨೦ ರಂದು ಪ್ರೊಪಲ್ಶನ್ ಮಾಡ್ಯೂಲ್‌ನಿಂದ ಬೇರ್ಪಟ್ಟ ಪ್ರಗ್ಯಾನ್ ರೋವರ್ ಅನ್ನು ಒಳಗೊಂಡ ವಿಕ್ರಂ ಲ್ಯಾಂಡರ್, ತಾ.೨೩ ರಂದು ಚಂದ್ರನೆಲಕ್ಕೆ ಹಂತ ಹಂತವಾಗಿ ಇಳಿಯಲಾರಂಭಿಸಿತು. ಈ ಎಲ್ಲಾ ಹಂತಗಳಲ್ಲಿನ ಪ್ರಕ್ರಿಯೆಯನ್ನು ನೌಕೆಯು ಸ್ವಯಂಚಾಲಿತವಾಗಿಯೇ ನಡೆಸಿದ್ದು, ಮಧ್ಯಾಹ್ನ ಸುಮಾರು ೩:೪೫ ರೊಳಗಾಗಿಯೇ ಎಲ್ಲಾ ೪ ಹಂತಗಳಲ್ಲಿ ನೌಕೆಯು ಕೈಗೊಳ್ಳಬೇಕಿದ್ದ ಚಲನೆ ಪ್ರಕ್ರಿಯೆಗಳ ಮಾಹಿತಿಯನ್ನು ಬೆಂಗಳೂರಿನ ಕೇಂದ್ರದಿAದ ನೌಕೆಗೆ ನೀಡಲಾಗಿತ್ತು.

ರಫ್ ಬ್ರೇಕಿಂಗ್ ಹಂತ

ಸAಜೆ ಸುಮಾರು ೫:೪೪ ಕ್ಕೆ ಈ ಹಂತ ಪ್ರಾರಂಭವಾಯಿತು. ಚಂದ್ರನ ಸುತ್ತದ ಕಕ್ಷೆಯಲ್ಲಿ ಸುಮಾರು ೩೦ ಕಿ.ಮೀ ಎತ್ತರದಲ್ಲಿ ಪ್ರದಕ್ಷಿಸುತ್ತಿದ್ದ ವಿಕ್ರಂ, ಸುಮಾರು ೬೯೦ ಸೆಕೆಂಡುಗಳ ಕಾಲಾವಧಿಯಲ್ಲಿ ಚಂದ್ರನ ಮೇಲ್ಮೆöÊಯಿಂದ ಕೇವಲ ೭.೪ ಕಿ.ಮೀ ಎತ್ತರದಲ್ಲಿತ್ತು. ಇದೇ ಅವಧಿಯಲ್ಲಿ ಒಟ್ಟು ಅಡ್ಡಲಾಗಿ ೭೧೩ ಕಿ.ಮೀ ಚಲಿಸಿತ್ತು. ಈ ಅವಧಿಯಲ್ಲಿ ಸೆಕೆಂಡಿಗೆ ೧,೬೮೦ ಮೀಟರ್ ದೂರ ವೇಗದಲ್ಲಿ ಅಡ್ಡಲಾಗಿ ಚಲಿಸುತ್ತಿದ್ದ ವಿಕ್ರಂ ಅದರ ವೇಗವನ್ನು ಸೆಕೆಂಡಿಗೆ ೩೫೮ ಮೀಟರ್‌ಗೆ ಇಳಿಸಿತು.

ಆಲ್ಟಿಟ್ಯೂಡ್ ಹೋಳ್ಡ್ ಹಂತ

ಕೇವಲ ೧೦ ಸೆಕೆಂಡುಗಳ ಕಾಲಾವಧಿಯ ಈ ಹಂತದಲ್ಲಿ ಚಂದ್ರನ ಮೇಲ್ಮೆöÊಯಿಂದ ೭.೪ ಕಿ.ಮೀ ಎತ್ತರದಲ್ಲಿದ್ದ ವಿಕ್ರಂ, ೬.೮ ಕಿ.ಮೀ ಎತ್ತರಕ್ಕೆ ಇಳಿಯಿತು. ಈ ವೇಳೆ ಅದರ ೨ ಇಂಜಿನ್‌ಗಳನ್ನು ನಿಷ್ಕಿçಯ ಗೊಳಿಸಲಾಯಿತು.

ಫೈನ್ ಬ್ರೇಕಿಂಗ್ ಹಂತ

(ಮೊದಲ ಪುಟದಿಂದ) ಈ ಹಂತದಲ್ಲಿ ಅಡ್ಡಲಾಗಿದ್ದ ವಿಕ್ರಂ, ತಿರುಗಿ ಚಂದ್ರನ ಪದರಕ್ಕೆ ನೇರವಾಗತೊಡಗಿತು. ೩ ನಿಮಿಷಗಳ ಕಾಲಾವಧಿಯಲ್ಲಿ ನಡೆದ ಈ ಹಂತದಲ್ಲಿ ವಿಕ್ರಂ, ಚಂದ್ರನ ಪದರದಿಂದ ಕೇವಲ ೮೦೦ ಮೀಟರ್ ಅಷ್ಟೆ ಎತ್ತರ ತಲುಪಿತು.

ಟರ್ಮಿನಲ್ ಡಿಸೆಂಟ್ ಹಂತ

ಇದು ಕೊನೆಯ ಹಂತವಾಗಿದ್ದು, ಈ ಸಂದರ್ಭ ವಿಕ್ರಂ ಅಡ್ಡವಾಗಿ ಚಲಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿತು. ನೇರವಾಗಿ ಚಂದ್ರ ಪದರಕ್ಕೆ ಗುರುತ್ವಾಕರ್ಷಣೆಯಿಂದಲೇ ಇಳಿದ ವಿಕ್ರಂ ಸುಮಾರು ೧೫೦ ಮೀಟರ್ ದೂರವಿರುವಾಗ ಚಂದ್ರನ ಪದರದಲ್ಲಿ ಏನಾದರು ಗುಂಡಿ ಅಥವಾ ಕಲ್ಲುಗಳು ಇದೆಯೇ ಎಂಬುದಾಗಿ ಸ್ಕಾö್ಯನ್ ಮಾಡಿತು. ಒಂದು ವೇಳೆ ಈ ಅಡೆತಡೆಗಳಿದ್ದಲ್ಲಿ, ಮತ್ತೆ ಸ್ವಲ್ಪ ದೂರ ಅಡ್ಡಲಾಗಿ ಚಲಿಸಿ ಲ್ಯಾಂಡ್ ಆಗುವ ಸಾಮರ್ಥ್ಯ ಹೊಂದಿತ್ತಾದರೂ ಈ ಸನ್ನಿವೇಶ ಎದುರಾಗಿಲ್ಲ. ಯಾವುದೇ ಅಡೆತಡೆಗಳಿಲ್ಲದೆ ನಿಗದಿತ ೬:೦೪ ಗಂಟೆಗೆ ಒಂದು ನಿಮಿಷ ಮುಂಚಿತವಾಗಿಯೇ ಯಶಸ್ವಿಯಾಗಿ ಚಂದ್ರ ಪದರಕ್ಕೆ ಇಳಿಯಿತು.

ನವ ಭಾರತದ ಸಂಕೇತ - ಪ್ರಧಾನಿ ಮೋದಿ ಹರ್ಷ

ಸೌತ್ ಆಫ್ರಿಕಾದ ಜೊಹ್ಯಾನೆಸ್ ಬರ್ಗ್ನಿಂದ ವಿಕ್ರಂ ಲ್ಯಾಂಡ್ ಆಗುವ ಕೆಲವೇ ಕೆಲವು ನಿಮಿಷಗಳ ಮುನ್ನ ಆನ್‌ಲೈನ್ ಮೂಲಕ ಲ್ಯಾಂಡಿAಗ್ ಪ್ರಕ್ರಿಯೆಯನ್ನು ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿಕ್ರಂ ಲ್ಯಾಂಡ್ ಆದ ಕ್ಷಣವನ್ನು ನೋಡಿದವರ ಜೀವನ ಸಾರ್ಥಕವಾಗಿದೆ.

ಗೆಲುವಿನ ಚಂದ್ರಪಥದ ಮೇಲೆ ಸಾಗುವುದು ನವ ಭಾರತದ ಸಂಕೇತವಾಗಿದೆ. ಸ್ವಾತಂತ್ರö್ಯದ ಅಮೃತ ಕಾಲದಲ್ಲಿ ಹೊಸ ವಿಶ್ವಾಸ, ಹೊಸ ಚೇತನಕ್ಕೆ ಇಸ್ರೋ ವಿಜ್ಞಾನಿಗಳು ಸಾಕ್ಷಿಯಾಗಿದ್ದಾರೆ. ಚಂದಮಾಮ ಈಗ ದೂರವಿಲ್ಲ. ಇನ್ನಷ್ಟು ಕ್ಲಿಷ್ಟಕರ ಬಾಹ್ಯಾಕಾಶ ಯೋಜನೆಗಳಿಗೆ ಈ ಕ್ಷಣ ಸಹಕಾರಿಯಾಗಲಿದೆ ಎಂದು ಹೇಳಿ ಚಂದ್ರಯಾನ-೩ ಯಶಸ್ವಿಗೆ ಕಾರಣಕರ್ತರಾದ ಎಲ್ಲರನ್ನೂ ಶ್ಲಾಘಿಸಿದರು.

“ಭಾರತವು ಇದೀಗ ಚಂದ್ರನ ಮೇಲಿದೆ”

ವಿಕ್ರಂ ಲ್ಯಾಂಡ್ ಆದ ಕೂಡಲೆ ಪ್ರಧಾನಿಯನ್ನುದ್ದೇಶಿಸಿ ‘ಇಂಡಿಯಾ ಇಸ್ ನೌ ಆನ್ ದ ಮೂನ್’ (ಭಾರತವು ಇದೀಗ ಚಂದ್ರನ ಮೇಲಿದೆ) ಎಂದು ಹರ್ಷದಿಂದ ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಹೇಳಿದರು. ಇದೇ ಸಂದರ್ಭ ಕೋಟ್ಯಂತರ ಭಾರತೀಯರ ಸತತ ಪ್ರಾರ್ಥನೆಗೆ ಧನ್ಯವಾದಗಳನ್ನು ಹೇಳಿದರು. ಯೋಜನಾ ನಿರ್ದೇಶಕ ವೀರ ಮುತ್ತುವೇಲ್, ಯೋಜನಾ ಸಹ ನಿರ್ದೇಶಕಿ ಕಲ್ಪನಾ, ಮುಖ್ಯಸ್ಥ ಶ್ರೀಕಾಂತ ಹಾಗೂ ಶಂಕರನ್ ಅವರುಗಳು ಮಾತನಾಡಿದರು. ಮುಂದೆ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದು, ಮಂಗಳ ಗ್ರಹದ ಮೇಲೆ ನೌಕೆಯನ್ನು ಇಳಿಸುವುದು ಹಾಗೂ ಶುಕ್ರನ ಸುತ್ತ ಕಕ್ಷೆಯನ್ನು ಕಳುಹಿಸುವುದು ನಮ್ಮ ಗುರಿಯಾಗಿದೆ ಎಂಬುದಾಗಿ ಶಂಕರನ್ ಮಾಹಿತಿ ಇತ್ತರು.ವಿಕ್ರಂ ಲ್ಯಾಂಡರ್ ಒಳಗಿನಿಂದ ಪ್ರಗ್ಯಾನ್ ರೋವರ್ ಹೊರ ಇಳಿದು ಚಂದ್ರನ ಮೇಲ್ಮೆöÊ ಅನ್ನು ಅನ್ವೇಷಿಸಲಿದೆ. ಇದರ ಬಗ್ಗೆ ಇನ್ನಷ್ಟೆ ಇಸ್ರೋ ಮಾಹಿತಿ ನೀಡಬೇಕಿದೆ. - ಪಿ.ಜಿ.ಆರ್