ವೀರಾಜಪೇಟೆ, ಆ. ೨೨: ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ರುವ ಸ್ವಾಮಿ ವಿವೇಕಾನಂದ ರ ದಿವ್ಯ ಲೀಲಾಕ್ಷೇತ್ರ ಡಿವೈನ್ ಪಾರ್ಕ್ ಟ್ರಸ್ಟಿನ ಅಂಗಸAಸ್ಥೆಗಳಾದ ವಿವೇಕ ಜಾಗೃತ ಬಳಗಗಳಾದ ವೀರಾಜಪೇಟೆ ಮತ್ತು ಶ್ರೀಮಂಗಲ ವತಿಯಿಂದ ೨೦ನೇ “ಯೋಗ ಪರ್ಯಟನ’ ಕಾರ್ಯಕ್ರಮ ವೀರಾಜಪೇಟೆಯ ಕೊಡವ ಸಮಾಜದಲ್ಲಿ ನಡೆಯಿತು. “ಯೋಗ ಪರ್ಯಟನ’ ವಿಶೇಷ ಸತ್ಸಂಗ ಕಾರ್ಯಕ್ರಮಕ್ಕೆ ಆಗಮಿಸಿದ ಡಿವೈನ್ ಪಾರ್ಕ್ನ ಟ್ರಸ್ಟಿಗಳಲ್ಲಿ ಒಬ್ಬರಾದ ಡಾ. ವಿವೇಕ ಉಡುಪ ಅವರನ್ನು ಕಲಶದೊಂದಿಗೆ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ಯೋಗಧಾರತಿಯೊಂದಿಗೆ ಶ್ರೀ ರಾಮರಕ್ಷಾ ಸ್ತೋತ್ರ ಪಠಣ ದೊಂದಿಗೆ ಡಾ. ವಿವೇಕ ಉಡುಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಡಿವೈನ್ ಪಾರ್ಕ್ನ ಅಧಿಕಾರಿ ಯಶವಂತ್ ಡಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ವಿವೇಕ ಉಡುಪ ಅವರ ಪರಿಚಯ ಮಾಡುವುದ ರೊಂದಿಗೆ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಬಳಿಕ ಮಾತನಾಡಿದ ಡಾ. ವಿವೇಕ ಉಡುಪ ಅವರು, ಇಂದು ೧೬ ರಿಂದ ೩೦ ವರ್ಷದೊಳಗಿನ ಯುವಸಮೂಹ ಹೆಚ್ಚಾಗಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಇದಕ್ಕೆಲ್ಲಾ ನಮ್ಮಲ್ಲಿನ ಆಲೋಚನೆಗಳು ಉತ್ತಮ ಹಾಗೂ ಪರಿಶುದ್ಧ ವಾಗದಿರುವುದೇ ಕಾರಣವಾಗಿದೆ. ಮನಸ್ಸು ಜಾಗೃತವಾಗಿದ್ದರೇ ಮಾತ್ರ ನಾವು ಯಶಸ್ಸಿನ ಕಡೆಗೆ ಸಾಗಲು ಸಾಧ್ಯವೆಂದು ಹೇಳಿದರು. ಕಾಂತಿ ಸತೀಶ್ ಅವರು ತಮ್ಮ ಅನುಭವವನ್ನು ಹಂಚಿಕೊAಡರು. ವೇದಿಕೆಯಲ್ಲಿ ವಿವೇಕ ಜಾಗೃತ ಬಳಗಗಳ ಅಧಿಕಾರಿಗಳಾದ ಡಿ.ಎಸ್. ಯಶವಂತ್, ವೀರಾಜಪೇಟೆ ಬಳಗದ ಅಧ್ಯಕೆÀ್ಷ ಶಶಿಕಲಾ ಭಾಸ್ಕರ್, ಶ್ರೀಮಂಗಲ ಬಳಗದ ಅಧ್ಯಕೆÀ್ಷ ಸುಮಿತ್ರ ಹಾಗೂ ಸ್ವಾತಿ ಬಿದ್ದಪ್ಪ ಉಪಸ್ಥಿತರಿದ್ದರು. ಡಿವೈನ್ ಪಾರ್ಕ್ನ ಮಧ್ಯವಲಯದ ಅಧಿಕಾರಿಗಳಾದ ಶರತಕುಮಾರ್, ಪ್ರಕಾಶ್‌ಕುಮಾರ್ ಶೆಟ್ಟಿ, ಪ್ರೇಮ ಪ್ರಭಾಕರ್ ಸೇರಿದಂತೆ ಎರಡು ವಿವೇಕ ಜಾಗೃತ ಬಳಗಗಳ ಅಧಿಕಾರಿಗಳು, ಪದಾಧಿಕಾರಿಗಳು, ಸದಸ್ಯರು ಇತರ ಬಳಗಗಳಿಂದ ಬಂದ ಕಾರ್ಯಕರ್ತರು ಉಪಸ್ಥಿತರಿದ್ದರು. ರಶ್ಮಿ ದೇವಯ್ಯ ಸ್ವಾಗತಿಸಿ, ಶಶಿಕಲಾ ಭಾಸ್ಕರ್ ವಂದಿಸಿ, ಹೆಚ್.ಡಿ. ಲೋಕೇಶ್ ನಿರೂಪಿಸಿದರು.