ಪೊನ್ನಂಪೇಟೆ, ಆ. ೨೨: ೭೭ನೇ ಸ್ವಾತಂತ್ರೊö್ಯÃತ್ಸವದ ಅಂಗವಾಗಿ ಕೊಂಡAಗೇರಿಯ ಬುಲ್ಲೆಟ್ ಫ್ರೆಂಡ್ಸ್ ತಂಡದ ಆಶ್ರಯದಲ್ಲಿ ನಡೆದ ೫ನೇ ವರ್ಷದ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟದ ಫುಟ್ಬಾಲ್ ಪಂದ್ಯಾವಳಿ ಯಲ್ಲಿ ಕುಂಜಿಲ ಚಾಲೆಂಜರ್ಸ್ ಮತ್ತು ವಾಲಿಬಾಲ್ ಪಂದ್ಯಾವಳಿಯಲ್ಲಿ ಎಮ್ಮೆಮಾಡಿನ ಆರ್. ವೈ. ಸಿ. ತಂಡ ಚಾಂಪಿಯನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿತು.
ಕೊAಡAಗೇರಿಯ ಅಮ್ಮತ್ತಿ ರಸ್ತೆಯಲ್ಲಿರುವ ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ ಅವರ ಭತ್ತದ ಗದ್ದೆಯಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಕ್ರೀಡಾಳುಗಳು ದಿನವಿಡೀ ಕೆಸರಿನಲ್ಲಿ ಮಿಂದೆದ್ದು, ಕೆಸರುಗದ್ದೆ ಕ್ರೀಡಾಕೂಟವನ್ನು ಮತ್ತಷ್ಟು ರಂಗೇರಿಸುವಲ್ಲಿ ಯಶಸ್ವಿಯಾದರು.
ವಿನ್ನರ್ಸ್ ಪ್ರಶಸ್ತಿ ಪಡೆಯುವ ತವಕದಲ್ಲಿ ಪ್ರಬಲ ಸ್ಪರ್ಧೆಯೊಡ್ಡಿದ ಅತಿಥಿಯ ಕೊಂಡAಗೇರಿಯ ಬುಲ್ಲೆಟ್ ಫ್ರೆಂಡ್ಸ್ ತಂಡ ಫುಟ್ಬಾಲ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದರೆ, ಬಾಣಂಗಾಲದ ಸಿಗ್ನೇಚರ್ ತಂಡ ವಾಲಿಬಾಲ್ ಪಂದ್ಯಾವಳಿಯಲ್ಲಿ ಎದುರಾಳಿ ತಂಡದೆದುರು ಶರಣಾಗಿ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಸಂಜೆ ಕತ್ತಲಾಗುವವರೆಗೂ ರೋಚಕವಾಗಿ ನಡೆದ ವಾಲಿಬಾಲ್ ಪಂದ್ಯಾವಳಿಯ ಫೈನಲ್ಸ್ನಲ್ಲಿ ಮೊದಲ ಸೆಟ್ಟಿನಲ್ಲಿ ಬಾಣಂಗಾಲ ಸಿಗ್ನೇಚರ್ ತಂಡ ಮೇಲುಗೈ ಸಾಧಿಸಿತು. ೨ನೇ ಸೆಟ್ನಲ್ಲಿ ಜಯಗಳಿಸುವ ಮೂಲಕ ಎಮ್ಮೆಮಾಡು ಆರ್.ವೈ.ಸಿ. ತಂಡ ಸೇಡು ತೀರಿಸಿಕೊಂಡಿತು. ನಂತರ ೩ನೇ ಸೆಟ್ಟಿನಲ್ಲಿ ಎಮ್ಮೆಮಾಡು ಆರ್.ವೈ.ಸಿ. ತಂಡ ಮತ್ತೆ ಮೇಲುಗೈ ಸಾಧಿಸಿದ್ದರಿಂದ ವಿಜಯದ ಮಾಲೆಯನ್ನು ತನ್ನ ಕೊರಳಿಗೇರಿಸಿಕೊಂಡಿತು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ನಲ್ಲಿ ಬಾಣಂಗಾಲದ ಸಿಗ್ನೇಚರ್ ತಂಡ ಅತಿಥಿಯ ಕೊಂಡAಗೇರಿ ಬುಲ್ಲೆಟ್ ಫ್ರೆಂಡ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದರೆ, ೨ನೇ ಸೆಮಿಫೈನಲ್ನಲ್ಲಿ ಎಮ್ಮೆಮಾಡು ಆರ್.ವೈ.ಸಿ. ತಂಡ ಗುಂಡಿಕೆರೆ ಫ್ರೆಂಡ್ಸ್ ತಂಡವನ್ನು ನೇರ ಎರಡು ಸುತ್ತುಗಳಲ್ಲಿ ಸೋಲಿಸಿ ಫೈನಲ್ಸ್ಗೆ ಅರ್ಹತೆ ಪಡೆದಿತ್ತು.
ಸೇರಿದ್ದ ಅಪಾರ ಸಂಖ್ಯೆಯ ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕೆಸರುಗದ್ದೆ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆರಂಭದಿAದಲೂ ಉತ್ತಮ ಪ್ರದರ್ಶನ ನೀಡಿದ ಕುಂಜಿಲ ಚಾಲೆಂಜರ್ಸ್ ತಂಡ ಸಹಜವಾಗಿಯೇ ಚಾಂಪಿಯನ್ ಪಟ್ಟಕ್ಕೇರಿತು. ವಿನ್ನರ್ಸ್ ಪ್ರಶಸ್ತಿ ಪಡೆಯುವ ಕನಸಿನಲ್ಲಿದ್ದ ಅತಿಥಿಯ ಕೊಂಡAಗೇರಿ ಬುಲ್ಲೆಟ್ ಫ್ರೆಂಡ್ಸ್ ತಂಡ ಎಷ್ಟೇ ಹೋರಾಟ ನಡೆಸಿದರೂ ಎದುರಾಳಿ ತಂಡದ ವಿರುದ್ಧ ಸೋಲೊಪ್ಪಿಕೊಳ್ಳಬೇಕಾ ಯಿತು. ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ನಲ್ಲಿ ಕೂಫಾ ಚಾಲೆಂಜರ್ಸ್ ತಂಡವನ್ನು ಮಣಿಸಿ ಕೊಂಡAಗೇರಿ ಬುಲ್ಲೆಟ್ ಫ್ರೆಂಡ್ಸ್ ತಂಡ ಫೈನಲ್ ಪ್ರವೇಶಿಸಿದರೆ, ೨ನೇ ಸೆಮಿ ಫೈನಲ್ನಲ್ಲಿ ಕುಂಜಿಲ ಸ್ನೇಹ ಫ್ರೆಂಡ್ಸ್ ತಂಡವನ್ನು ಸೋಲಿಸಿ ಕುಂಜಿಲ ಚಾಲೆಂಜರ್ಸ್ ತಂಡ ಅಂತಿಮ ಹಂತದ ಸ್ಪರ್ಧೆಗೆ ಅರ್ಹತೆ ಪಡೆಯಿತು.
ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಣಂಗಾಲ ಸಿಗ್ನೇಚರ್ ತಂಡದ ನವೀನ್ ಅತ್ಯುತ್ತಮ ಆಟಗಾರನಾಗಿ ವಿಶೇಷ ಪ್ರಶಸ್ತಿ ಪಡೆದರೆ, ಎಮ್ಮೆಮಾಡು ಆರ್.ವೈ.ಸಿ. ತಂಡದ ಶರೀಫ್ ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿ ಗಳಿಸಿದರು. ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊಂಡAಗೇರಿ ಬುಲ್ಲೆಟ್ ಫ್ರೆಂಡ್ಸ್ ತಂಡದ ಎಸ್.ಎಂ. ಜಮಾಲ್ ಬೆಸ್ಟ್ ಶೂಟರ್ ಪ್ರಶಸ್ತಿ ಪಡೆದರೆ, ಕುಂಜಿಲ ಚಾಲೆಂಜರ್ಸ್ ತಂಡದ ನಿಜಾಮ್ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ತನ್ನದಾಗಿಸಿದರು.
ಬೆಳಿಗ್ಗೆ ನಡೆದ ೩ನೇ ತರಗತಿಯಿಂದ ೬ನೇ ತರಗತಿವರೆಗಿನ ಬಾಲಕರ ಓಟದ ಸ್ಪರ್ಧೆಯಲ್ಲಿ ಕೊಂಡAಗೇರಿಯ ಎ.ಎಸ್.ಸಿ. ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅಫ್ನಾನ್ ಪ್ರಥಮ ಬಹುಮಾನ ಪಡೆದರೆ, ಕೊಂಡAಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಆಫ್ರಿದ್ ದ್ವಿತೀಯ ಬಹುಮಾನ ಗಳಿಸಿದರು. ೭ರಿಂದ ೯ನೇ ತರಗತಿವರೆಗಿನ ಬಾಲಕರ ಓಟದ ಸ್ಪರ್ಧೆಯಲ್ಲಿ ಕೊಂಡAಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮಿದ್ಲಾಜ್ ಪ್ರಥಮ ಸ್ಥಾನ ಮತ್ತು ಕೊಂಡAಗೇರಿಯ ಎ.ಎಸ್.ಸಿ. ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅನ್ಸಾದ್ ದ್ವಿತೀಯ ಬಹುಮಾನಗಳಿಸಿದರು.
ಸ್ಥಳೀಯ ಗ್ರಾ.ಪಂ. ಸದಸ್ಯರಾದ ಅಬ್ದುಲ್ ರಹಿಮಾನ್ (ಅಂದಾಯಿ) ಅವರ ಅಧ್ಯಕ್ಷತೆಯಲ್ಲಿ ಸಂಜೆ ನಡೆದ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಪಿ. ಎ. ಹನೀಫ್, ಸಹೋದರತೆಯ ಸಂಕೇತವಾಗಿ ಜರುಗುವ ಕ್ರೀಡಾಕೂಟಗಳು ಕ್ರೀಡಾಪಟುಗಳಲ್ಲಿ ಮತ್ತು ಪ್ರೇಕ್ಷಕರಲ್ಲಿ ಪರಸ್ಪರ ಆತ್ಮೀಯತೆಯನ್ನು ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿದ್ದ ಪೊನ್ನಂಪೇಟೆಯ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ ಅಧ್ಯಕ್ಷ ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ, ಹಾಲುಗುಂದ ಗ್ರಾ ಪಂ. ಅಧ್ಯಕ್ಷರಾದ ಪಂದಿಕAಡ ದಿನೇಶ್ (ಕುಶ), ನಿವೃತ್ತ ಸೇನಾಧಿಕಾರಿ ಕ್ಯಾ. ಮುಕ್ಕಾಟಿರ ಮಾದಪ್ಪ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಕೋಳುಮಂಡ ರಫೀಕ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಆಲೀರ ಎಂ. ರಶೀದ್ ಕೆದಮುಳ್ಳೂರು ಗ್ರಾ.ಪಂ. ಸದಸ್ಯ ಎಂ.ಎA. ಇಸ್ಮಾಯಿಲ್, ಬೈರಂಬಾಡದ ಕಾಫಿ ಬೆಳೆಗಾರ ಮುಕ್ಕಾಟಿರ ನಂದ, ಕೊಂಡAಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಎ.ಎಂ. ಅಬ್ದುಲ್ಲಾ, ನಿವೃತ್ತ ಸೈನಿಕರಾದ ಕೆ.ಎಂ. ಮೊಹಮ್ಮದ್, ಕೊಂಡAಗೇರಿ ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ಪಿ.ಎಚ್. ಝಕರಿಯಾ, ದೈಹಿಕ ಶಿಕ್ಷಕ ಪಿ.ಎ. ಮುಜೀಬ್ ಮೊದಲಾದವರು ಪಾಲ್ಗೊಂಡು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದ ಆಯೋಜಕರಾದ ಶಾಮೀರ್, ಹನೀಫ್, ರಫೀಕ್ ಮೊದಲಾದವರು ಉಪಸ್ಥಿತರಿದ್ದರು. ಸಲಾಂ ವೀಕ್ಷಕ ವಿವರಣೆ ನೀಡಿದರು.
ಚಿತ್ರ ವರದಿ: ರಫೀಕ್ ತೂಚಮಕೇರಿ