ನಾಪೋಕ್ಲು, ಆ. ೨೨: ಇಲ್ಲಿಗೆ ಸಮೀಪದ ಕುಂಜಿಲ- ಕಕ್ಕಬೆ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿಲ್ಪ ಪಿ.ಎಲ್. ಅಧ್ಯಕ್ಷರಾಗಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬೀನಾ ಸುಚಿತ್ರ ಎಂ.ಪಿ. ಉಪಾಧ್ಯಕ್ಷರಾಗಿ ಆಯ್ಕೆ ಯಾದರು.

ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಶಿಲ್ಪ ಪಿ.ಎಲ್. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ತುಕ್ಕಡಿ ಸಫಿಯ ವಿರುದ್ಧ ೭-೬ ಮತಗಳ ಅಂತರದಿAದ ಗೆಲುವು ಸಾಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬೀನಾ ಸುಚಿತ್ರ ಎಂ.ಪಿ. ಬಿಜೆಪಿ ಬೆಂಬಲಿತ ಅಭ್ಯರ್ಥಿ ನಂಬುಡುಮAಡ ಶೈಲ ನೀಲಮ್ಮ ವಿರುದ್ಧ ೭-೬ ಮತಗಳ ಅಂತರ ದಿಂದ ಗೆಲುವು ಸಾಧಿಸಿದರು. ಪಂಚಾಯಿತಿಯಲ್ಲಿ ಒಟ್ಟು ೧೪. ಸದಸ್ಯರ ಬಲವಿದ್ದು, ಸದಸ್ಯ ಪ್ರಕಾಶ್ ಚುನಾವಣೆಯಲ್ಲಿ ಗೈರು ಹಾಜರಾಗಿದ್ದರು. ೧೩ ಮಂದಿ ಮತ ಚಲಾಯಿಸಿದರು. ಚುನಾವಣಾ ಅಧಿಕಾರಿಯಾಗಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮಿಲನ್ ಭರತ್ ಕಾರ್ಯನಿರ್ವಹಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಉಪಸ್ಥಿತರಿದ್ದರು. ಈ ಮೊದಲು ಕಾಂಗ್ರೆಸ್ ಬೆಂಬಲಿತರಿAದ ಅಧಿಕಾರದಲ್ಲಿದ್ದ ಗ್ರಾಮ ಪಂಚಾಯಿತಿ ಇದೀಗ ರೋಚಕ ತಿರುವು ಪಡೆದು ಬಿಜೆಪಿ ಬೆಂಬಲಿತರು ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ಒಟ್ಟು ೧೪ ಸದಸ್ಯರು ಇರುವ ಪಂಚಾಯಿತಿಯಲ್ಲಿ ೯ ಸದಸ್ಯರು ಕಾಂಗ್ರೆಸ್ ಬೆಂಬಲಿತವಾಗಿದ್ದು, ಐದು ಸದಸ್ಯರು ಬಿಜೆಪಿಯ ಬೆಂಬಲಿತರಾಗಿದ್ದರು.