ಮಡಿಕೇರಿ, ಆ. ೨೩: ಭತ್ತ ಹಾಗೂ ಮೆಕ್ಕೆ ಜೋಳಕ್ಕೆ ಸಂಬAಧಿಸಿದAತೆ ಕೃಷಿ ಇಲಾಖೆಯಿಂದ ಈ ಬಾರಿ ೩೨೫೭೦ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಈ ಪೈಕಿ ಈಗಾಗಲೇ ೧೯೯೦೧ ಹೆಕ್ಟೇರ್ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ಕೃಷಿ ಇಲಾಖೆಯ ಉಪನಿರ್ದೇಶಕ ಹಾಗೂ ಪ್ರಬಾರ ಜಂಟಿ ನಿರ್ದೇಶಕರಾದ ಡಾ. ಬಾಲರಾಜ್ ರಂಗರಾವ್ ಅವರು ಈ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಮೆಕ್ಕೆ ಜೋಳವನ್ನು ೩೫೦೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಹೊಂದಲಾಗಿದ್ದು, ಈ ಪೈಕಿ ೨೯೨೬ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ೨೯೦೦೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬಿತ್ತನೆ ಮಾಡಲು ಗುರಿಯಿದ್ದು, ಇದರಲ್ಲಿ ೧೬,೯೭೫ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಆ ಮೂಲಕ ಮೆಕ್ಕೆ ಜೋಳ ಹಾಗೂ ಭತ್ತ ಸೇರಿ ಶೇ. ೬೧ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂದು ಡಾ. ಬಾಲರಾಜ್ ರಂಗರಾವ್ ಹೇಳಿದರು.
(ಮೊದಲ ಪುಟದಿಂದ) ಪ್ರಸಕ್ತ ಸಾಲಿನಲ್ಲಿ ಇವತ್ತಿನವರೆಗೆ ೮೩.೦೭ ಇಂಚು ಮಳೆಯಾಗಬೇಕಿತ್ತು. ಆದರೆ ಕೇವಲ ೪೬.೩೭ ಇಂಚು ಮಾತ್ರ ಮಳೆ ಸುರಿದಿದ್ದು, ಶೇ. ೪೪ರಷ್ಟು ಕೊರತೆ ಉಂಟಾಗಿದೆ. ಪ್ರಸ್ತುತ ಮಳೆ ಕೊರತೆಯಿಂದ ತೊಂದರೆ ಇಲ್ಲವಾದರೂ ಮಳೆ ಕೊರತೆ ಇದೇ ರೀತಿ ಮುಂದುವರೆದರೆ ತೊಂದರೆ ಉಂಟಾಗುವ ಸಂಭವವಿದೆ ಎಂದು ಅವರು ಅಭಿಪ್ರಾಯಪಟ್ಟರು. ಕನಿಷ್ಟ ಒಂದು ವಾರದ ಒಳಗಾದರೂ ಮಳೆಯ ಅಗತ್ಯವಿದೆ ಎಂದರು.
ಕೃಷಿ ಇಲಾಖೆಯಿಂದ ಹೆರವನಾಡುವಿನ ನಿವೃತ್ತ ಮುಖ್ಯ ಶಿಕ್ಷಕ ಕೆ.ಎಸ್. ಪುಟ್ಟಯ್ಯ ಅವರ ಭತ್ತದ ಗದ್ದೆಯಲ್ಲಿ ಐದು ವಿವಿಧ ತಳಿಯ ಭತ್ತವನ್ನು ಸುಮಾರು ಐದು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಬೀದರ್ ಮೂಲದವರಾದ ಡಾ. ಬಾಲರಾಜ್ ರಂಗರಾವ್ ಮಾಹಿತಿ ನೀಡಿದ್ದಾರೆ.