ವೀರಾಜಪೇಟೆ, ಆ. ೨೩: ಕಾವೇರಿ ಪದವಿ ಪೂರ್ವ ಕಾಲೇಜಿನ ೨೦೨೩-೨೪ನೇ ಸಾಲಿನ ವಿದ್ಯಾರ್ಥಿ ಕ್ಷೇಮಾಭಿ ವೃದ್ಧಿ ಸಂಘದ ಚುನಾವಣೆ ನಡೆದು ಪದಾ ಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಡೈನ ಸೋಮಯ್ಯ ಅವರ ನೇತೃತ್ವ ದಲ್ಲಿ ನಡೆದ ಚುನಾವಣೆಯಲ್ಲಿ ಸಂಘದ ಕಾರ್ಯದರ್ಶಿಯಾಗಿ ಜಲೀಲ್ ಯು (ಕಲಾ ವಿಭಾಗ), ಜಂಟಿ ಕಾರ್ಯದರ್ಶಿಗಳಾಗಿ ಮೊಹಮ್ಮದ್ ಅನಾಸ್ ಹಾಗೂ ಹಸೀನಾ (ವಿಜ್ಞಾನ ವಿಭಾಗ), ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ದೀಪು ಎಸ್. (ವಿಜ್ಞಾನ ವಿಭಾಗ) ಹಾಗೂ ಕ್ರೀಡಾ ಕಾರ್ಯದರ್ಶಿಯಾಗಿ ಪ್ರಣವ್ ಪಿ. (ವಾಣಿಜ್ಯ ವಿಭಾಗ) ಆಯ್ಕೆಯಾಗಿದ್ದಾರೆ.