ನಾಪೋಕ್ಲು, ಆ. ೨೩ : ನಾಪೋಕ್ಲು ಪ್ರಾಥಮಿಕ ಕೃಪಿ ಪತ್ತಿನ ಸಹಕಾರ ಸಂಘವು ೨೦೨೨-೨೩ ನೇ ಸಾಲಿನಲ್ಲಿ ರೂ. ೪೩.೫೫ ಲಕ್ಷ ನಿವ್ವಳ ಲಾಭಗಳಿಸಿ ಎ ಶ್ರೇಣಿಯಲ್ಲಿದೆ ಎಂದು ಸಂಘದ ಅಧ್ಯಕ್ಷ ಕಾಂಡAಡ ಸಿ. ಕರುಂಬಯ್ಯ ತಿಳಿಸಿದರು.

ಸಂಘದ ಸಂಭಾAಗಣದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಘದಲ್ಲಿ ಒಟ್ಟು ೨೪೪೧ ಸದಸ್ಯರಿದ್ದಾರೆ. ಸಂಘದಲ್ಲಿ ಪಾಲು ಬಂಡವಾಳ ೧.೧೯ ಕೋಟಿ ರೂ.ಇದೆ. ಸದಸ್ಯರು ೩೫ ಕೋಟಿ ರೂ.ಗಳನ್ನು ಠೇವಣಿ ಇರಿಸಿದ್ದು ಸದಸ್ಯರಿಗೆ ೩೦.೫೫ ಕೋಟಿ ರೂ.ಗಳನ್ನು ಸಾಲ ರೂಪದಲ್ಲಿ ನೀಡಲಾಗಿದೆ. ದುಡಿಯುವ ಬಂಡವಾಳ ೪೫.೮೪ ಕೋಟಿ ಇದ್ದು, ಸಂಘವು ಪ್ರಸಕ್ತ ೨೦೨೨-೨೩ ಸಾಲಿನಲ್ಲಿ ಒಟ್ಟು ೧೭೧ ಕೋಟಿ ರೂ.ಗಳ ವಹಿವಾಟು ನಡೆಸುವುದರ ಮೂಲಕ ೪೩.೫೫.೧೩೦ ನಿವ್ವಳ ಲಾಭ ಗಳಿಸಿ ಎ ಶ್ರೇಣಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಸದಸ್ಯರಿಗೆ ಈ ವರ್ಷ ೧೪% ಡಿವಿಡೆಂಟ್ ನೀಡಲಾಗುವುದು. ಸಂಘದಲ್ಲಿ ನಿರಖು ಠೇವಣಿದಾರರಿಗೆ ಶೇ. ೭.೫೦ ಹಿರಿಯ ನಾಗರಿಕರಿಗೆ ಶೇ. ೮.೦೦ ಹಾಗೂ ಹಿರಿಯ ನಾಗರಿಕರಲ್ಲಿ ಮಾಜಿ ಸೈನಿಕರಿಗೆ ಶೇ. ೮.೦೧ ಹೆಚ್ಚುವರಿ ಬಡ್ಡಿ ನೀಡಲಾ ಗುವುದು ಎಂದು ತಿಳಿಸಿದರು.

ಸದಸ್ಯರ ಅನುಕೂಲಕ್ಕಾಗಿ ಆಧುನಿಕ ಅಕ್ಕಿ ಗಿರಣಿ, ಟ್ರಾಕ್ಟರ್, ರಾಸಾಯನಿಕ ಗೊಬ್ಬರ, ಕೀಟನಾಶಕ, ಕೃಷಿ ಉಪಕರಣಗಳನ್ನು ಮಾರಾಟ ಮಾಡಲಾಗುತ್ತಿದೆ. ಅದರೊಂದಿಗೆ ಇ-ಸ್ಟಾಂಪ್, ಮೋದಿಕೇರ್ ಗೃಹೋಪ ಯೋಗಿ ವಸ್ತುಗಳ ಮಾರಾಟ ಮತ್ತು ಜೆರಾಕ್ಸ್ ಸೇರಿದಂತೆ ಇನ್ನಿತರ ಸೌಲಭ್ಯವನ್ನೂ ಒದಗಿಸಲಾಗಿದೆ ಎಂದರು.

ಸAಘದ ವಾರ್ಷಿಕ ಮಹಾ ಸಭೆಯು ತಾ. ೨೬ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ನಾಪೋಕ್ಲು ಕೊಡವ ಸಮಾಜದಲ್ಲಿ ನಡೆಯಲಿದ್ದು, ಸದಸ್ಯರು ತಪ್ಪದೆ ಸಭೆಯಲ್ಲಿ ಪಾಲ್ಗೊಂಡು ಸಂಘದ ಶ್ರೇಯೋಭಿವೃದ್ಧಿಗೆ ಸಲಹೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಬಿದ್ದಾಟಂಡ ಜಿ. ರಾಧಾ, ನಿರ್ದೇಶಕರಾದ ಕೇಟೋಳಿರ ಎಸ್. ಹರೀಶ್ ಪೂವಯ್ಯ, ಎನ್.ಎಸ್. ಉದಯಶಂಕರ್ , ಅರೆಯಡ ಎಂ. ಅಶೋಕ್, ಪಾಡಿಯಮ್ಮಂಡ ಕೆ. ಮುರಳಿಧರ , ಹೆಚ್.ಎ. ಬೊಳ್ಳು, ಕೇಲೇಟಿರ ಜಿ. ಮುತ್ತಮ್ಮ , ಕುಂಡ್ಯೋಳAಡ ಎಂ .ಕವಿತಾ, ಚೀಯಕಪೂವಂಡ ಎನ್. ದೇವಯ್ಯ, ಚೋಕಿರ ಬಿ. ಪೂವಪ್ಪ, ಕುಂದೈರಿರ ಸಿ. ಕಿರಣ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಚಾಳಿಯಂಡ ಎ. ಪೂಣಚ್ಚ ಉಪಸ್ಥಿತರಿದ್ದರು.