ಮಡಿಕೇರಿಯಲ್ಲಿ...

ಮಡಿಕೇರಿ, ಆ. ೨೧: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಲ್ಲಿ ನಡೆದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸಹಸಂಚಾಲಕ ಸತೀಶ್ ದಾವಣಗೆರೆ ಅವರನ್ನು ಬಂಧಿಸಿರುವುದನ್ನು ಖಂಡಿಸಿ ನಗರದಲ್ಲಿ ಹಿಂದೂಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಘೋಷಣೆ ಕೂಗಿ ಸರಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಕಿಡಿಕಾರಿದರು.

‘ಒಂದು ಕೋಮು ಹೆಚ್ಚಿರುವ ಪ್ರದೇಶ ಸೂಕ್ಷö್ಮ ಪ್ರದೇಶವಾಗಿರುತ್ತದೆ’ ಎಂದು ಹೇಳಿರುವುದಕ್ಕಾಗಿ ಬಂಧಿಸಿರುವುದು ಖಂಡನೀಯ. ಇದು ಸರಕಾರದ ಹಿಂದೂ ವಿರೋಧಿ ನೀತಿ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್, ಪ್ರಾಂತ ಸಹ ಸಂಚಾಲಕ ಮಹೇಶ್ ಕಡಗದಾಳು, ಜಿಲ್ಲಾ ಕಾರ್ಯಕಾರಿಣಿಗಳಾದ ವಿನಯ್ ಮಡಿಕೇರಿ, ಕುಮಾರ್ ಮೇಕೇರಿ, ಶಾಂತೆಯAಡ ತಿಮ್ಮಯ್ಯ, ತಾಲೂಕು ಸಹಸಂಯೋಜಕ ದುರ್ಗೇಶ್ ಭಜರಂಗಿ, ತಾಲೂಕು ಸ್ವಾವಲಂಬನ ಧನಂಜಯ ಶಾಂ, ಮಡಿಕೇರಿ ನಗರ ಸಂಯೋಜಕ ದಾಮೋದರ್ ರಾಮ್, ನಗರಸಭಾ ಸದಸ್ಯರುಗಳಾದ ಕಾಳಚಂಡ ಅಪ್ಪಣ್ಣ, ಎಸ್.ಸಿ. ಸತೀಶ್, ಬಿಜೆಪಿ ನಗರಾಧ್ಯಕ್ಷ ಮನುಮಂಜುನಾಥ್, ಉಪಾಧ್ಯಕ್ಷ ಬಿ.ಕೆ. ಜಗದೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ವೀರಾಜಪೇಟೆಯಲ್ಲಿ...

ವೀರಾಜಪೇಟೆ, ಆ. ೨೧: ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಹ ಸಂಚಾಲಕ ಸತೀಶ್ ದಾವಣಗೆರೆ ಅವರನ್ನು ಬಂಧಿಸಿರುವುದನ್ನು ಖಂಡಿಸಿ ವೀರಾಜಪೇಟೆ ತಾಲೂಕು ಹಿಂದು ಜಾಗರಣಾ ವೇದಿಕೆ ವತಿಯಿಂದ ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಇದೇ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ತಾಲೂಕು ಅಧ್ಯಕ್ಷ ಗಣೇಶ್ ಬಿಟ್ಟಂಗಾಲ, ಜಿಲ್ಲಾ ಸಹ ಸಂಚಾಲಕ ಅನಿಲ್ ಸಿದ್ದಾಪುರ, ವಿಎಚ್‌ಪಿ ತಾಲೂಕು ಕಾರ್ಯದರ್ಶಿ ಯತೀಶ್, ಹಿಂದೂ ಪರ ವಿವಿಧ ಸಂಘಟನೆ ಪ್ರಮುಖರಾದ ಪಟ್ಟಡ ಪ್ರಕಾಶ್, ಜಹೇಶ್, ಕುಮಾರ್, ಸುನಿಲ್ ಸಿದ್ದಾಪುರ ಮತ್ತಿತರರು ಉಪಸ್ಥಿತರಿದ್ದರು.