ವೀರಾಜಪೇಟೆ, ಆ. ೨೧: ವೀರಾಜಪೇಟೆ ನ್ಯಾಯಾ ಲಯದ ಮುಂದೆ ಸಾರ್ವ ಜನಿಕ ಆಸ್ಪತ್ರೆಯ ರಸ್ತೆಯಲ್ಲಿ ವಾಹನಗಳು ಎರಡು ಬದಿ ನಿಲುಗಡೆಗೊಳಿಸಿದ್ದರಿಂದ ಸೋಮವಾರ ಬೆಳಿಗ್ಗೆ ಒಂದು ತಾಸಿಗೂ ಹೆಚ್ಚು ಕಾಲ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಸಮಸ್ಯೆ ಎದುರಾಯಿತು.
ವಾರದ ಮೊದಲ ದಿನವಾಗಿದ್ದರಿಂದ ವೀರಾಜಪೇಟೆ ಪಟ್ಟಣದಲ್ಲಿ ವಾಹನ ಸಂಚಾರ ಅಧಿಕವಾಗಿತ್ತು. ನ್ಯಾಯಾಲಯಕ್ಕೆ ಹಾಜರಾಗುವವರು, ಆಸ್ಪತ್ರೆಗೆ ಬರುವವರು ಸೇರಿದಂತೆ ಆಸ್ಪತ್ರೆಯ ರಸ್ತೆ ಸಂಪೂರ್ಣ ದಟ್ಟಣೆ ಉಂಟಾಗಿತ್ತು.
ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಬರುವವರಿಗೆ ಇದರಿಂದ ತುಂಬಾ ಅನಾನುಕೂಲ ಉಂಟಾಗುತ್ತಿದ್ದು ಸಂಬAಧಿಸಿದ ಇಲಾಖೆಯವರು ಈ ಬಗ್ಗೆ ಸ್ಪಂದಿಸಿ ಇದಕ್ಕೊಂದು ಪರಿಹಾರವನ್ನು ಕಲ್ಪಿಸಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.