ಹೆಬ್ಬಾಲೆ, ಆ. ೨೧: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಮೌಲ್ಯಯುತ ಶಿಕ್ಷಣ ತುಂಬ ಅಗತ್ಯವಾಗಿದೆ ಎಂದು ತೊರೆನೂರು ಸೂರ್ಯೋದಯ ಪುರುಷರ ಸ್ವ ಸಹಾಯ ಸಂಘದ ಅಧ್ಯಕ್ಷ ಟಿ.ಬಿ.ಜಗದೀಶ್ ಹೇಳಿದರು.
ಸಮೀಪದ ತೊರೆನೂರು ಸೂರ್ಯೋದಯ ಪುರುಷರ ಸ್ವ ಸಹಾಯಕ ಸಂಘದ ವತಿಯಿಂದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ, ಶೇಕಡಾ ನೂರು ಫಲಿತಾಂಶ ತರಲು ಶ್ರಮಿಸಿದ ಶಿಕ್ಷಕ ವೃಂದಕ್ಕೆ ಗುರು ವಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತೊರೆನೂರು ಸರ್ಕಾರಿ ಪ್ರೌಢಶಾಲೆ ಕಳೆದ ಐದು ವರ್ಷಗಳಿಂದ ಶೇಕಡಾ ನೂರು ಫಲಿತಾಂಶ ತಂದಿದ್ದು, ಉತ್ತಮ ಫಲಿತಾಂಶ ತರಲು ಶ್ರಮಿಸಿದ ಶಿಕ್ಷಕರ ಕಾರ್ಯ ಶ್ಲಾಘನೀಯ. ಅದೇ ರೀತಿ ಮುಂದೆ ಕೂಡ ಉತ್ತಮ ಫಲಿತಾಂಶ ತಂದು ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ.ಎಸ್.ಕೃಷ್ಣೇಗೌಡ ಮಾತನಾಡಿ, ಪುರುಷರ ಸ್ವಸಹಾಯ ಸಂಘ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ದೈನಂದಿನ ಕೆಲಸಗಳ ಒತ್ತಡದಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯತ್ತ ಗಮನಹರಿಸಲು ಪೋಷಕರಿಗೆ ಸಮಯ ದೊರೆಯು ವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕ ವೃಂದ ವಿಶೇಷ ಕಾಳಜಿ ವಹಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ. ಶೈಕ್ಷಣಿಕವಾಗಿ ಉತ್ತಮ ಫಲಿತಾಂಶಕ್ಕೆ ಕಾರಣರಾದ ಶಿಕ್ಷಕ ವೃಂದವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸAಘದ ಸದಸ್ಯ ಟಿ.ಕೆ. ಪಾಂಡುರAಗ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಸಹಾಯ ಸಂಘದ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ಒದಗಿಸಿದರು.
ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ರೂಪಾ ಮಹೇಶ್, ಸಂಘದ ಕಾರ್ಯದರ್ಶಿ ಟಿ.ಎಚ್. ಸೋಮಾಚಾರ್, ಸದಸ್ಯರಾದ ಎಚ್.ಬಿ. ಚಂದ್ರಪ್ಪ, ಟಿ.ಪಿ. ಮಂಜುನಾಥ್, ಟಿ.ಎಸ್. ರಾಜಶೇಖರ್, ಟಿ.ಬಿ.ಚಿದಾನಂದ, ಡಿ.ಆರ್.ಪ್ರೇಮ್ ಕುಮಾರ್, ಟಿ.ಜೆ. ಶೇಷಪ್ಪ, ಟಿ.ಸಿ.ತ್ರಿನೇಶ್, ಟಿ.ಪಿ. ಸೋಮಶೇಖರ್, ಪ್ರೌಢಶಾಲಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಕಾಮಾಕ್ಷಿ, ಸತ್ಯನಾರಾಯಣ, ಗ್ರಾ.ಪಂ. ಸದಸ್ಯೆ ಕುಸುಮಾ, ಶಿವಕುಮಾರ್, ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಣ್ಣಯ್ಯ, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಸೇರಿದಂತೆ ಶಿಕ್ಷಕ ವೃಂದದವರು ಇದ್ದರು.
ನಿವೃತ್ತ ಶಿಕ್ಷಕರು, ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು ಸೇರಿದಂತೆ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸೋಮಾಚಾರಿ, ಸೋಮಶೇಖರ್, ಅಂತರಾಷ್ಟಿçÃಯ ಕ್ರೀಡಾಪಟು ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.