ಮಡಿಕೇರಿ, ಆ. ೨೧: ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿ ಯೋರ್ವರನ್ನು ರಿವಾಲ್ವರ್ ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಆರೋಪಿಗೆ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮರಗೋಡು ಗ್ರಾಮ ನಿವಾಸಿ ಮುಂಡೋಡಿ ನಾಣಯ್ಯ(ನಂದ) ಶಿಕ್ಷೆಗೊಳಗಾಗಿರುವ ಆರೋಪಿ.
೧-೧೦-೨೦೧೮ರಂದು ಸಂಜೆ ೬.೩೦ ಗಂಟೆ ವೇಳೆಗೆ ಮರಗೋಡು ವಿಜಯ ಬ್ಯಾಂಕ್ ಬಳಿ ಇರುವ ಕ್ಯಾಂಟೀನ್ ಬಳಿ ನಾಣಯ್ಯ ಹಾಗೂ ಕಾನಡ್ಕ ತಿಲಕ್‌ರಾಜ್ ಎಂಬವರುಗಳ ನಡುವೆ ಮಾತಿನ ಚಕಮಕಿ ನಡೆದು ನಂದ ತನ್ನ ಬಳಿಯಿದ್ದ ರಿವಾಲ್ವರ್‌ನಿಂದ ತಿಲಕ್‌ರಾಜ್‌ನ ಎದೆಗೆ ಗುಂಡು ಹಾರಿಸಿ ಹತ್ಯೆಗೈದಿದ್ದ. ಈ ಪ್ರಕರಣದ ಸಂಬAಧ ವಿಚಾರಣೆ ನಡೆಸಿದ ಇಲ್ಲಿನ ೧ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಾ. ೧೮ ರಂದು ತೀರ್ಪು ಪ್ರಕಟಿಸಿ ಶಿಕ್ಷೆ ಕಾಯ್ದಿರಿಸಿತ್ತು.
(ಮೊದಲ ಪುಟದಿಂದ) ಇಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶರು ಆರೋಪಿ ನಾಣಯ್ಯಗೆ ಕಲಂ ೩೦೨ ಐಪಿಸಿ ಅಡಿ ಜೀವಾವಧಿ ಶಿಕ್ಷೆ ಮತ್ತು ೨೫ ಸಾವಿರ ದಂಡ, ಕಲಂ ೩ ೨೫(೧) (ಃ)(ಂ), ೫ ಮತ್ತು ೨೭(೧) ಭಾರತೀಯ ಶಸ್ತಾçಸ್ತç ಕಾಯ್ದೆ ಅಡಿ ೩ ವರ್ಷ ಶಿಕ್ಷೆ ಮತ್ತು ರೂ. ೮ ಸಾವಿರ ದಂಡ, ಕಲಂ ೩೦ ಶಸ್ತಾçಸ್ತç ಕಾಯ್ದೆ ಅಡಿ ೬ ತಿಂಗಳು ಶಿಕ್ಷೆ ವಿಧಿಸಿದ್ದಾರೆ. ಸರಕಾರದ ಪರ ಸರಕಾರಿ ಅಭಿಯೋಜಕ ಎನ್.ಪಿ. ದೇವೇಂದ್ರ ವಾದ ಮಂಡಿಸಿದರು.
ಘಟನೆ ಹಿನ್ನೆಲೆ
೨೦೧೫ರಲ್ಲಿ ನಡೆದ ಮರಗೋಡು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿAದ ನಂದ ಹಾಗೂ ಬಿಜೆಪಿಯಿಂದ ತಿಲಕ್ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ತಿಲಕ್ ನಾಲ್ಕು ಮತಗಳ ಅಂತರದಲ್ಲಿ ನಂದ ವಿರುದ್ಧ ಸೋಲು ಅನುಭವಿಸಿದ್ದರು. ನಂತರ ೨೦೧೮ರ ವಿಧಾನಸಭಾ ಚುನಾವಣೆ ಸಂದರ್ಭ ನಂದ ಜೆಡಿಎಸ್ ಪರ ಹಾಗೂ ಬಿಜೆಪಿ ಸ್ಥಾನೀಯ ಸಮಿತಿ ಕಾರ್ಯದರ್ಶಿ ಆಗಿದ್ದ ತಿಲಕ್ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಇವರಿಬ್ಬರ ನಡುವೆ ಮಾತುಕತೆ ನಡೆದು ಪರಸ್ಪರ ತಳ್ಳಾಟ ಕೂಡ ನಡೆದಿತ್ತು.
ತಾ.೧-೧೦-೧೮ರಂದು ಸಂಜೆ ಮರಗೋಡಿನ ವಿಜಯ ಬ್ಯಾಂಕ್ ಬಳಿ ಇರುವ ಕ್ಯಾಂಟೀನ್‌ನ ಪ್ಯಾಸೇಜ್‌ನಲ್ಲಿದ್ದ ತಿಲಕ್‌ರಾಜ್ ಬಳಿ ನಂದ ಬಂದು ಬೆದರಿಕೆ ಹಾಕಿ ರಿವಾಲ್ವರ್‌ನಿಂದ ಎದೆಗೆ ಗುಂಡು ಹಾರಿಸಿದ್ದ. ಕೂಡಲೇ ಸ್ನೇಹಿತರು ಘಾಸಿಗೊಂಡ ತಿಲಕ್‌ನನ್ನು ಮಡಿಕೇರಿ ಆಸ್ಪತ್ರೆಗೆ ಸಾಗಿಸಿದರಾದರೂ ಆ ವೇಳೆಗಾಗಲೇ ಸಾವನ್ನಪ್ಪಿದ್ದರು.
ಇತ್ತ ಗುಂಡು ಹಾರಿಸಿದ್ದ ಆರೋಪಿ ನಂದ ಸ್ಥಳದಿಂದ ಪರಾರಿಯಾಗಿದ್ದ. ವಿಷಯ ತಿಳಿದ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ ಪಣ್ಣೇಕರ್ ನೇತೃತ್ವದ ತಂಡ ಕೃತ್ಯ ನಡೆದ ಆರು ಗಂಟೆಯ ಅವಧಿಯಲ್ಲಿ ಮಡಿಕೇರಿ ಬಳಿ ಬಂಧಿಸಿದ್ದರು.