ಮಡಿಕೇರಿ, ಆ. ೨೧: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸೋಮವಾರ ಮುಂಜಾನೆ ಯಾರೂ ಊಹಿಸದ ಮಾದರಿಯ ದುರಂತವೊAದು ನಡೆದುಹೋಗಿದೆ. ನಗರದ ಚಿಕ್ಕಪೇಟೆಯಲ್ಲಿ ಜನರಲ್ ತಿಮ್ಮಯ್ಯ ವೃತ್ತ ಹಾಗೂ ಪದ್ಮಭೂಷಣ ಕೆ.ಎಸ್. ತಿಮ್ಮಯ್ಯ ಅವರ ಕಂಚಿನ ಪ್ರತಿಮೆಯಿರುವುದು ಇಡೀ ಜಿಲ್ಲೆಯ ಜನತೆಗೆ ಒಂದು ಪ್ರೌಡಿಮೆ ಎಂಬದರಲ್ಲಿ ಎರಡು ಮಾತಿಲ್ಲ. ಈ ಕಂಚಿನ ಪ್ರತಿಮೆ ನಿರ್ಮಾಣಗೊಂಡು ಐವತ್ತು ವರ್ಷಗಳೇ ಕಳೆದಿವೆ. ಬಹುತೇಕ ಜಿಲ್ಲೆಯ ವಿವಿಧ ಆಗು-ಹೋಗುಗಳು, ವಿವಿಧ ಪ್ರತಿಭಟನೆಗಳು ಇತ್ಯಾದಿ ವಿಚಾರಗಳು ಜನರಲ್ ತಿಮ್ಮಯ್ಯ ಪ್ರತಿಮೆಯ ಎದುರಿನಲ್ಲೇ ನಡೆಯುವುದು ಜಿಲ್ಲಾ ಕೇಂದ್ರದಲ್ಲಿ ಸಾಮಾನ್ಯವಾಗಿದೆ. ಆದರೆ ಇಂದು ಜಿಲ್ಲೆಯಲ್ಲಿ ಭಾವನಾತ್ಮಕವಾದ ಸಂಬAಧವನ್ನೂ ಹೊಂದಿರುವ ಈ ಮಹಾನ್ ವ್ಯಕ್ತಿಯ ಪ್ರತಿಮೆ ಬೆಳ್ಳಂಬೆಳಿಗ್ಗೆ... ಧರೆಗುರುಳಿ ಹೋಗಿದೆ. ಈ ಆಘಾತಕಾರಿ ಸುದ್ದಿ ಬಹುತೇಕರಲ್ಲಿ ಛೇ... ಇದೇನಾಯಿತಪ್ಪಾ ಎಂಬ ಉದ್ಘಾರಕ್ಕೆ ಕಾರಣವಾಗಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಬೆಳಿಗ್ಗೆ ಸುಮಾರು ೫.೩೦ರ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡು ಈ ಪ್ರತಿಮೆ ಇದ್ದ ಸ್ತಂಭಕ್ಕೆ ಅಪ್ಪಳಿಸಿದೆ. ಓಂಕಾರೇಶ್ವರ ರಸ್ತೆಯಿಂದ ಹಳೆಯ ಮರ್ಕರಾ ನರ್ಸಿಂಗ್ ಹೋಂಗಾಗಿ ತಿಮ್ಮಯ್ಯ ವೃತ್ತ ಸೇರುವ ರಸ್ತೆಯ ಮೂಲಕ ಪಿಕ್‌ಅಪ್ ವಾಹನವೊಂದು ದಿಢೀರ್ ಆಗಿ ಮುಖ್ಯರಸ್ತೆಗೆ ಬಂದಿದೆ ಎನ್ನಲಾಗಿದೆ. ಈ ಸಂದರ್ಭ ಬಸ್ ಚಾಲಕ ನಿಯಂತ್ರಣ ತಪ್ಪಿದ್ದು ಬಸ್ ನೇರವಾಗಿ ಪ್ರತಿಮೆಗೆ ಡಿಕ್ಕಿಯಾಗಿದೆ. ಘಟನೆಯಿಂದ ತಿಮ್ಮಯ್ಯ ಅವರ ಪ್ರತಿಮೆ ಕೆಳಭಾಗದ ಸ್ತಂಭ ಮುರಿದು ಬಿದ್ದಿದ್ದು ಪ್ರತಿಮೆ ಧರೆಗುರುಳಿದೆ.
ಮಡಿಕೇರಿ ಕೆ.ಎಸ್.ಆರ್.ಟಿ.ಸಿ. ಡಿಪೋಕ್ಕೆ ಸೇರಿದ ಬಸ್ ಇದಾಗಿದೆ. ಮಡಿಕೇರಿ ಡಿಪೋಕ್ಕೆ ಸೇರಿರುವ ಚಾಲಕ ಕೊಟ್ರೇಗೌಡ ಎಂಬವರು ಈ ಬಸ್ ಅನ್ನು ಚಲಾಯಿಸುತ್ತಿದ್ದರು. ಡಿಪೋದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮಂಗಳೂರಿಗೆ ತೆರಳುವ ತರಾತುರಿಯ ನಡುವೆ ಈ ಘಟನೆ ನಡೆದಿದೆ.
ವಿಷಯ ತಿಳಿದ ತಕ್ಷಣ ನಗರ ಸಂಚಾರಿ ಪೊಲೀಸರು ಸೇರಿದಂತೆ ಸಾರ್ವಜನಿಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಧರೆಗುರುಳಿದ್ದ ಸೇನಾನಿಯ ಕಂಚಿನ ಪ್ರತಿಮೆಗೆ ಹೆಚ್ಚಿನ ಹಾನಿಯಾಗದಿದ್ದರೂ ಸ್ಥಳದಲ್ಲಿದ್ದ ಗ್ರಿಲ್ಗಳು ತಾಗಿ ಸ್ವಲ್ಪ ಜಖಂಗೊAಡಿದೆ. ಬಳಿಕ ಇದನ್ನು ಕ್ರೇನ್ ಮೂಲಕ ಮೇಲತ್ತ ಲಾಗಿದ್ದು ಸದ್ಯಕ್ಕೆ ಜನರಲ್ ತಿಮ್ಮಯ್ಯ ಸ್ಮಾರಕ ಭವನ (ಸನ್ನಿಸೈಡ್) ಆವರಣದಲ್ಲಿ ಇಡಲಾಗಿದೆ.
(ಮೊದಲ ಪುಟದಿಂದ) ಘಟನೆಯ ಬಗ್ಗೆ ಚೆÀಯ್ಯಂಡ ಸತ್ಯ ಅವರು ಪೊಲೀಸರಿಗೆ ದೂರು ನೀಡಿದ್ದು ಎಫ್.ಐ.ಆರ್. ದಾಖಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು ಸಿ.ಸಿ. ಟಿವಿ ಫೂಟೇಜ್‌ಗಳನ್ನು ಅವಲೋಕಿಸಿ ಮುಂದಿನ ಕ್ರಮ ಜರುಗಿಸುತ್ತಿದ್ದಾರೆ. ಸದ್ಯಕ್ಕೆ ಚಾಲಕ ಕೊಟ್ರೇಗೌಡ ಪೊಲೀಸರ ವಿಚಾರಣೆ ಎದುರಿಸುತ್ತಿದ್ದು ಬಸ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.ತ್ವರಿತವಾಗಿ ಮರು ನಿರ್ಮಾಣ ಆಗಬೇಕು
ತಿಮ್ಮಯ್ಯ ಅವರು ವಿಚಾರ ಭಾವನಾತ್ಮಕವಾದದ್ದು, ಇವರ ಪ್ರತಿಮೆ ಈ ರೀತಿಯಾಗಿ ಬೀಳುವಂತಾಗಿದ್ದು ನೋವಿನ ವಿಚಾರವಾಗಿದೆ ಎಂದು ಫಿ.ಮಾ. ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತAಡ ಸಿ. ಸುಬ್ಬಯ್ಯ ಪ್ರತಿಕ್ರಿಯಿಸಿದ್ದಾರೆ. ಈ ಪ್ರತಿಮೆಯನ್ನು ತ್ವರಿತವಾಗಿ ಮರು ಸ್ಥಾಪನೆ ಮಾಡಬೇಕಿದ್ದು ಸಂಬAಧಿಸಿದ ಆಡಳಿತ ವರ್ಗ ಮುತುವರ್ಜಿ ವಹಿಸಬೇಕು ಎಂದಿದ್ದಾರೆ.
ಸAಸ್ಥೆಗೆ ವಿವರ
ಘಟನೆಯ ಬಗ್ಗೆ ವಿವರವನ್ನು ಕೆ.ಎಸ್.ಆರ್.ಟಿ.ಸಿ. ಸಂಸ್ಥೆಗೆ ಕಳುಹಿಸಲಾಗುವುದು. ಈ ಬಗ್ಗೆ ಅಂದಾಜು ಪಟ್ಟಿ ಒದಗಿಸಲು ನಗರಸಭೆ ಆಯುಕ್ತರಿಗೆ ತಿಳಿಸಲಾಗಿದೆ. ಇದನ್ನು ಕೇಂದ್ರ ಕಚೇರಿಗೆ ರವಾನಿಸಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ. ಡಿಪೋ ವ್ಯವಸ್ಥಾಪಕಿ ಗೀತಾ ಅವರು ತಿಳಿಸಿದ್ದಾರೆ. ಈ ಬಗ್ಗೆ ಎಫ್.ಐ.ಆರ್. ಆಗಿದೆ. ಚಾಲಕ ಕೊಟ್ರೇಗೌಡ ಅವರು ಬಸ್ ಚಲಾಯಿಸುತ್ತಿದ್ದರು. ಘಟನೆಯಿಂದ ನಿರ್ವಾಹಕ ಪುಟ್ಟಸ್ವಾಮಿ ಅವರಿಗೆ ಪೆಟ್ಟಾಗಿದ್ದು ಜಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಎಫ್.ಐ.ಆರ್.ನಂತೆ ಸಂಸ್ಥೆಯಿAದ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಂಸ್ಥೆಗೆ ವಿವರ
ಘಟನೆಯ ಬಗ್ಗೆ ವಿವರವನ್ನು ಕೆ.ಎಸ್.ಆರ್.ಟಿ.ಸಿ. ಸಂಸ್ಥೆಗೆ ಕಳುಹಿಸಲಾಗುವುದು. ಈ ಬಗ್ಗೆ ಅಂದಾಜು ಪಟ್ಟಿ ಒದಗಿಸಲು ನಗರಸಭೆ ಆಯುಕ್ತರಿಗೆ ತಿಳಿಸಲಾಗಿದೆ. ಇದನ್ನು ಕೇಂದ್ರ ಕಚೇರಿಗೆ ರವಾನಿಸಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ. ಡಿಪೋ ವ್ಯವಸ್ಥಾಪಕಿ ಗೀತಾ ಅವರು ತಿಳಿಸಿದ್ದಾರೆ. ಈ ಬಗ್ಗೆ ಎಫ್.ಐ.ಆರ್. ಆಗಿದೆ. ಚಾಲಕ ಕೊಟ್ರೇಗೌಡ ಅವರು ಬಸ್ ಚಲಾಯಿಸುತ್ತಿದ್ದರು. ಘಟನೆಯಿಂದ ನಿರ್ವಾಹಕ ಪುಟ್ಟಸ್ವಾಮಿ ಅವರಿಗೆ ಪೆಟ್ಟಾಗಿದ್ದು ಜಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಎಫ್.ಐ.ಆರ್.ನಂತೆ ಸಂಸ್ಥೆಯಿAದ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ಚಾಲಕನ
ವಿರುದ್ಧ ಪ್ರಕರಣ
ಬಸ್ ಚಾಲಕ ಕೊಟ್ರೇಗೌಡ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಚಾಲಕನನ್ನು ಬಂಧಿಸಲಾಗಿದ್ದು ಬಸ್ ವಶಪಡಿಸಿಕೊಳ್ಳಲಾಗಿದೆ ಎಂದು ಸಂಚಾರಿ ಠಾಣೆಯ ಎಸ್.ಐ. ಶ್ರೀಧರ್ ತಿಳಿಸಿದ್ದಾರೆ.ಫೋರಂ
ಸಹ ಸಿದ್ಧ
ಈ ಬಗ್ಗೆ ಫಿ.ಮಾ. ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕ. ಸುಬ್ಬಯ್ಯ ಅವರೊಂದಿಗೆ ಚರ್ಚಿಸಲಾಗುವುದು. ಪ್ರತಿಮೆಗೆ ಆಗಿರುವ ಹಾನಿಯನ್ನು ಸರಿಪಡಿಸಿ ಮತ್ತೆ ಅದೇ ಸ್ಥಳದಲ್ಲಿ ಅಳವಡಿಸಲಾಗುವುದು. ಫೋರಂನ ಬಳಿಯೂ ಒಂದಷ್ಟು ಹಣ ಇರುವದಾಗಿ ಸಂಚಾಲಕ ಬಿದ್ದಂಡ ಮೇಜರ್ ನಂಜಪ್ಪ ತಿಳಿಸಿದ್ದಾರೆ.