ಕೂಡಿಗೆ, ಆ. ೨೧: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ನಾಗರಪಂಚಮಿ ಅಂಗವಾಗಿ ಸರ್ಪಶಾಂತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ ನಡೆದವು.
ದೇವರಿಗೆ ಬೆಳಿಗ್ಗೆ ೭ಗಂಟೆಯಿAದಲೇ ವಿಶೇಷ ಅಭಿಷೇಕ, ಪೂಜೆ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆದು ಮಹಾಮಂಗಳಾತಿ ನಡೆಯಿತು. ನಂತರ ಸರ್ಪ ಶಾಂತಿಯ ಅಂಗವಾಗಿ ವಿಶೇಷ ಹೋಮ ಹವನಗಳು ನಡೆದವು.
(ಮೊದಲ ಪುಟದಿಂದ) ವಿಶೇಷ ಪೂಜಾ ಕೈಂಕರ್ಯಗಳು ದೇವಾಲಯ ಪ್ರಮುಖ ಅರ್ಚಕ ನವೀನ್ ಭಟ್ ನೇತೃತ್ವದಲ್ಲಿ ನಡೆಯಿತು. ನಾಗರಪಂಚಮಿ ಪೂಜಾ ಕಾರ್ಯಕ್ರಮದಲ್ಲಿ ಕೂಡಿಗೆ, ಕೂಡುಮಂಗಳೂರು, ಕೂಡ್ಲೂರು, ಹುದುಗೂರು, ಹಾರಂಗಿ ಮದಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು.