ಮಡಿಕೇರಿ, ಆ. ೨೧: ನಗರದ ಹೊರವಲಯದಲ್ಲಿರುವ ಕೊಡಗು ವೈದ್ಯಕೀಯ ಬೋಧಕ ಮತ್ತು ವಿಜ್ಞಾನಗಳ ಸಂಸ್ಥೆಯಲ್ಲಿ (ಮೆಡಿಕಲ್ ಕಾಲೇಜು) ಸೂಕ್ತ ಭದ್ರತೆ ಇಲ್ಲ ಎಂದು ಆರೋಪಿಸಿ ವೈದ್ಯಕೀಯ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಕಳೆದ ಕೆಲವು ದಿನದ ಹಿಂದೆ ರಾತ್ರಿ ಅಪರಿಚಿತನೋರ್ವ ಕಾಲೇಜು ಆವರಣಕ್ಕೆ ಬಂದು ವಿದ್ಯಾರ್ಥಿಗಳ ಎದುರು ಅನುಚಿತ ವರ್ತನೆ ತೋರಿದ್ದಾನೆ. ಘಟನೆ ಬಗ್ಗೆ ಆಡಳಿತ ಮಂಡಳಿಯ ಗಮನಕ್ಕೆ ತಂದರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಅಪರಿಚಿತರು ಕಾಲೇಜು ಆವರಣಕ್ಕೆ ಬಂದು ನಮ್ಮೊಂದಿಗೆ ಗಲಾಟೆ

ಮಾಡುತ್ತಾರೆ. ಕಾಲೇಜಿನ ಪ್ರವೇಶ ದ್ವಾರದಲ್ಲಿ ಗೇಟ್ ಹಾಗೂ ಭದ್ರತಾ ಸಿಬ್ಬಂದಿ ಗಳಿಲ್ಲದ ಪರಿಣಾಮ ಕಿಡಿಗೇಡಿಗಳು ಬರುತ್ತಿದ್ದಾರೆ. ತಾ. ೧೮ ರಂದು ಬಂದ ಓರ್ವ ಅಪರಿಚಿತ ವಿದ್ಯಾರ್ಥಿನಿ ಜೊತೆಗೆ ಅಸಭ್ಯ ವರ್ತನೆ ತೋರಿದ್ದಾನೆ. ಇದನ್ನು ಪ್ರಶ್ನಿಸಿದವರ ಮೇಲೆ ಹಲ್ಲೆಗೂ ಮುಂದಾಗಿದ್ದಾನೆ; ಬೀದಿ ದೀಪ ವ್ಯವಸ್ಥೆಯೂ ಇಲ್ಲ ಎಂದು ದೂರಿದರು.

ಕಾಲೇಜು ಮುಖ್ಯಸ್ಥ ಡಾ. ಕಳ್ಳಿಚಂಡ ಕಾರ್ಯಪ್ಪ ಮಾತನಾಡಿ, ಘಟನೆ ಸಂಬAಧ ಪೊಲೀಸ್ ದೂರು ದಾಖಲಿಸಲಾಗಿದೆ. ತಪ್ಪಿತಸ್ಥರ

(ಮೊದಲ ಪುಟದಿಂದ) ವಿರುದ್ಧ ಕ್ರಮದ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ಬೀಟ್ ಪೊಲೀಸರು ರಾತ್ರಿ ವೇಳೆಯಲ್ಲಿ ಕಾಲೇಜು ವ್ಯಾಪ್ತಿಯಲ್ಲಿ ಸಂಚರಿಸುತ್ತಾರೆ. ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು. ಗೇಟ್ ನಿರ್ಮಿಸಿ ಉತ್ತಮ

ಗುಣಮಟ್ಟದ ಸಿಸಿ ಕ್ಯಾಮರ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.

ಡಿವೈಎಸ್‌ಪಿ ಜಗದೀಶ್ ಘಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿ ವಿದ್ಯಾರ್ಥಿಗಳ ಭದ್ರತೆಯ ಸಂಬAಧ ಸೂಕ್ತ ಕ್ರಮಕೈಗೊಳ್ಳ ಲಾಗುವುದು ಎಂದರು.