ಮಡಿಕೇರಿ, ಆ. ೨೧: ಬೆಂಗಳೂರಿನ ಶ್ರೀ ಕಾವೇರಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿಯಮಿತದ ೨೦೨೨-೨೩ರ ಸಾಲಿನ ೨೧ನೇ ವಾರ್ಷಿಕ ಸದಸ್ಯರ ಮಹಾಸಭೆಯನ್ನು ತಾ. ೧೩ರಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ಐತಿಚಂಡ ಎಂ. ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಆಡಳಿತ ಮಂಡಳಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಸೇರಿದ್ದರು. ಸಂಘದ ಬೆಳವಣಿಗೆಯ ಬಗ್ಗೆ ಹಲವಾರು ವಿಚಾರಗಳನ್ನು ಪ್ರಸ್ತಾಪ ಮಾಡಲಾಯಿತು. ಸಂಘವೂ ಲಾಭದ ಅಂಚಿನಲ್ಲಿದ್ದು, ಡಿವಿಡೆಂಟನ್ನು ಘೋಷಿಸಲಾಯಿತು.