ಶನಿವಾರಸಂತೆ: ಶನಿವಾರಸಂತೆ ಪಟ್ಟಣದ ಐ.ಬಿ. ಮಾರ್ಟ್ ವತಿಯಿಂದ ನಡೆದ ಸ್ವಾತಂತ್ರö್ಯ ದಿನಾಚರಣೆ ಪ್ರಯುಕ್ತ ಡಾ. ನವೀನ್ ಧ್ವಜಾರೋಹಣ ನೆರವೇರಿಸಿದರು. ಕೆನರಾ ಬ್ಯಾಂಕ್ ನೌಕರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಹಸೈನಾರ್ ಉಸ್ತಾದ್, ಜುಕ್ರಿದ್ ತೆಕ್ಕೆಲ್, ಪಾರೂಖ್ ಕುದ್ರಡ್ಕ, ನಿಶಾಂತ್, ಪ್ರಕಾಶ್ಚಂದ್ರ, ರಫೀಕ್, ಖಾಸಿಂ, ರಜಾಕ್, ಹನೀಫ್, ಗಿರೀಶ್, ವಸೀಂ, ಸುನೀಲ್ ಇದ್ದರು.ಮಡಿಕೇರಿ: ಕಾಟಕೇರಿಯ ಕೂರನಬಾಣೆಯಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿAದ ಆಚರಿಸಲಾಯಿತು.
ನಿವೃತ್ತ ಸೈನಿಕ ತಳೂರು ಕಾಳಪ್ಪ ಧ್ವಜಾರೋಹಣ ನೆರವೇರಿಸಿ ದಿನದ ಮಹತ್ವ ತಿಳಿಸಿದರು. ಸ್ವಾತಂತ್ರೊö್ಯÃತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಬೇಕು, ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಮಹನೀಯರನ್ನು ಪ್ರತಿನಿತ್ಯ ಸ್ಮರಿಸುವಂತಾಗಬೇಕು. ಅವರ ಆದರ್ಶಗಳನ್ನು ಪಾಲಿಸಬೇಕೆಂದು ಕರೆ ನೀಡಿದರು. ಮದೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಬಿ.ಸಿ. ಗಿರಿಜಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರತೀ ವರ್ಷ ಸ್ವಾತಂತ್ರö್ಯ ದಿನಾಚರಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಬೇಕೆಂದು ಹೇಳಿದರು.
ಈ ಸಂದರ್ಭ ಮದೆ ಗ್ರಾ.ಪಂ ಸದಸ್ಯೆ ಪಿ.ಎ. ಚಂದ್ರಾವತಿ, ಅಂಗನವಾಡಿ ಕಾರ್ಯಕರ್ತೆ ನಳಿನಿ ಹಾಗೂ ಶ್ರೀದೇವಿ, ಶ್ರೀ ಲಕ್ಷಿö್ಮಸ್ವಸಹಾಯ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು, ಪುಟಾಣಿ ಮಕ್ಕಳು ಹಾಜರಿದ್ದರು.
ಮಡಿಕೇರಿ: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ಘಟಕದ ವತಿಯಿಂದ ನಗರದ ಡೈರಿಫಾರಂ ಅಂಗನವಾಡಿಯಲ್ಲಿ ೭೭ನೇ ಸ್ವಾತಂತ್ರೊö್ಯÃತ್ಸವವನ್ನು ಆಚರಿಸಲಾಯಿತು.
ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಕೆ.ಆರ್.ದಿನೇಶ್ ಹಾಗೂ ಉಪಾಧ್ಯಕ್ಷ ಶಶಿ ಅವರುಗಳು ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಕೆ.ಆರ್. ದಿನೇಶ್, ವಿದ್ಯಾರ್ಥಿಗಳಲ್ಲಿ ಮಹಾತ್ಮಗಾಂಧಿ, ಸುಭಾಷ್ ಚಂದ್ರ ಬೋಸ್ ಅವರಂತಹ ಮಹಾತ್ಮರ ಬಗ್ಗೆ ಅರಿವು ಮೂಡಿಸಬೇಕು. ಆ ಮೂಲಕ ದೇಶಪ್ರೇಮ ಬೆಳೆಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ಘಟಕದ ಜಿಲ್ಲಾ ಉಪಾಧ್ಯಕ್ಷ ಕವನ್ ಕೊತ್ತೋಳಿ, ಪ್ರಧಾನ ಕಾರ್ಯದರ್ಶಿ ಕೆ. ಶರಣ್, ಕಾರ್ಯದರ್ಶಿ ಅರ್ಜುನ್, ನಗರಾಧ್ಯಕ್ಷ ನಿರಂಜನ್, ಉಪಾಧ್ಯಕ್ಷ ಫಯಾಜ್, ಸದಸ್ಯರಾದ ಪ್ರೇಮ, ಉದಯ ಚಂದ್ರಿಕ, ಅನು, ಬೇಬಿ, ವೀರನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಹರೀಶ್ ಆಚಾರ್ಯ, ಅಗ್ನಿ ಶಾಮಕ ದಳದ ಠಾಣಾಧಿಕಾರಿ ನಾಗರಾಜು, ಸಿಬ್ಬಂದಿ ವರ್ಗ, ಅಂಗನವಾಡಿ ಕಾರ್ಯಕರ್ತೆ ನಾಗರತ್ನ, ಸಹಾಯಕಿ ಚಂದನ, ಪುಟಾಣಿಗಳು, ಪೋಷಕರು ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಜರಿದ್ದು ರಾಷ್ಟçಧ್ವಜಕ್ಕೆ ಗೌರವ ಸಲ್ಲಿಸಿದರು.ಶನಿವಾರಸಂತೆ: ಶನಿವಾರಸಂತೆಯ ನಿವೃತ್ತ ಸೈನಿಕರ ಸಂಘದ ವತಿಯಿಂದ ನಡೆದ ಸ್ವಾತಂತAತ್ರö್ಯ ದಿನಾಚರಣೆ ಪ್ರಯಕ್ತ ಸಂಘದ ಅಧ್ಯಕ್ಷ ಎ.ಎಸ್. ಮಹೇಶ್ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಪಿ.ಎನ್. ಗಂಗಾಧರ್, ಕಾರ್ಯದರ್ಶಿ ಎಸ್.ಎನ್. ಪಾಂಡು, ನಿರ್ದೇಶಕರಾದ ಕೆ.ಡಿ. ಚಂದ್ರಪ್ಪ, ಬಿ.ಡಿ. ಪರಮೇಶ್, ಕೆ.ಪಿ. ತಿಮ್ಮಯ್ಯ, ಎಚ್.ಪಿ. ಮಹೇಶ್, ಬಿ.ಎಸ್. ಆನಂದ್, ಟಿ.ಎಸ್. ನಾಗರಾಜ್, ಎ.ಎಸ್. ಆನಂದ್, ಸದಸ್ಯರು ಹಾಜರಿದ್ದರು.ಶನಿವಾರಸಂತೆ: ಶನಿವಾರಸಂತೆ ಸಮೀಪದ ಕೊಡ್ಲಿಪೇಟೆ ವಿದ್ಯಾಸಂಸ್ಥೆ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಂಸ್ಥೆ ಉಪಾಧ್ಯಕ್ಷ ಶಂಭುಲಿAಗಪ್ಪ ಧ್ವಜಾರೋಹಣ ನೆರವೇರಿಸಿದರು. ನಿರ್ದೇಶಕ ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದು;ಪ್ರಾಂಶುಪಾಲ ಪವಾರ್, ಮುಖ್ಯಶಿಕ್ಷಕ ಅಬ್ದುಲ್ ರಬ್, ಪದವಿ ಕಾಲೇಜ್ ಉಪನ್ಯಾಸಕರಾದ ಅಭಿಲಾಶ್, ಸೋಮಶೇಖರ್, ಯೋಗೇಂದ್ರ, ಸುನೀಲ್, ದಾನಿ ಶಿವರಳ್ಳಿ ಗಂಗಮ್ಮ ಇದ್ದರು.ಶ್ರೀಮಂಗಲ: ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವತಿಯಿಂದ ೭೭ನೇ ಸ್ವಾತಂತ್ರö್ಯ ದಿನಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಭಾರತೀಯ ಸೆÃನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಿರಿಯ ಮಾಜಿ ಸೈನಿಕರಾದ ಮಾಣೀರ ಟಿ. ನಾಚಪ್ಪ, ಮಾಯಣಮಾಡ ಬೋಪಯ್ಯ, ಚೆಟ್ಟಂಗಡ ಕೆ. ನಾಣಯ್ಯ, ಮನ್ನೆರ ರಮೇಶ್, ಮಚ್ಚಮಾಡ ಸಿ. ಮಾದಪ್ಪ ಇವರನ್ನು ಸನ್ಮಾನ ಮಾಡಲಾಯಿತು.ಸುಂಟಿಕೊಪ್ಪ: ಇಲ್ಲಿನ ಸಂತ ಮೇರಿ ಆಂಗ್ಲ ಮಾಧÀ್ಯಮ ಶಾಲೆಯಲ್ಲಿ ಸ್ವಾತಂತ್ರೊö್ಯÃತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲೆಯ ವ್ಯವಸ್ಥಾಪಕರಾದ ವಂ.ಫಾ. ಅರುಳ್ ಸ್ವೆಲ್ವಕುಮಾರ್ ನೆರವೇರಿಸಿದರು.
ಶಾಲೆಯ ಮಕ್ಕಳು ಧ್ವಜವಂದನೆ ನೆರವೇರಿಸಿದರು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲೆಯ ಮುಖ್ಯೋಪಾಧ್ಯಾಯರಾದ ಸೆಲ್ವರಾಜು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.ಮುಳ್ಳೂರು: ಸಮೀಪದ ಕೊಡ್ಲಿಪೇಟೆ ಸಂಜೀವಿನಿ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ೭೭ನೇ ಸ್ವಾತಂತ್ರö್ಯ ದಿನಾಚರಣೆ ಯನ್ನು ಸಂಭ್ರಮದಿAದ ಆಚರಿಸಲಾಯಿತು. ಸಂಘದ ಅಧ್ಯಕ್ಷ ಕೆ.ಎಸ್.ನಾಗೇಶ್ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತ ನಾಡಿದರು. ಕಾರ್ಯ ಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಶೇಖರ್, ಗೌರವಾಧ್ಯಕ್ಷ ಇಬ್ರಾಹಿಂ, ಕಾರ್ಯದರ್ಶಿ ಡಿ.ಆರ್. ವೇದ ಕುಮಾರ್, ಪದಾಧಿಕಾರಿಗಳಾದ ಇಪ್ತಿಕರ್ ಪಾಷ, ಬಷೀರ್ ಅಹಮ್ಮದ್ ಪ್ರಮುಖರಾದ ಮಹದೇಶ್ವರ್, ಮುನ್ನ, ಗಣೇಶ್, ಜಾವಿದ್, ಭಾಸ್ಕರ್ ಆಚಾರ್ಯ, ಶೇಖರ್ ಮುಂತಾದವರಿದ್ದರು.
ಮಡಿಕೇರಿ: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಪುಟಾಣಿ ನಗರದ ಅಂಗನವಾಡಿ ಕೇಂದ್ರದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಶಿಕ್ಷಕಿ ಹಾಗೂ ನಗರಸಭಾ ಸದಸ್ಯೆ ಮಂಜುಳಾ ಅವರು ನೆರವೇರಿಸಿದರು.
ಈ ಸಂದರ್ಭ ನಗರ ಬಿಜೆಪಿ ಖಜಾಂಚಿ ಮುರುಗನ್, ಮಂಜೇಶ್, ದುರ್ಗಾಪರಮೇಶ್ವರಿ ದೇವಾಲಯದ ಅಧ್ಯಕ್ಷ ತಂಗರಾಜ್, ಬಡಸಾಬ್, ರಮೇಶ್ ಟಿಪಿ, ಕಣ್ಣ, ವೇಣು, ಗೌರಿ ಗಣೇಶ ಸಮಿತಿಯ ಪದಾಧಿಕಾರಿಗಳು ಮತ್ತು ಪಟಾಣಿ ನಗರದ ನಾಗರಿಕರು ಮತ್ತು ಮಕ್ಕಳು ಭಾಗವಹಿಸಿದ್ದರು.ಆಲೂರು ಸಿದ್ದಾಪುರ: ಸಮೀಪದ ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆ ವತಿಯಿಂದ ವಿವಿಧ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ೭೭ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿ¸ Àಲಾಯಿತು.
ಮೊದಲು ರೋಟರಿ ಭವನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸಮೀಪದ ಗೋಣಿಮರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆದ ಸ್ವಾತಂತ್ರö್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಎಚ್.ಆರ್. ಉದಯ್ಕುಮಾರ್ ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಶಾಲೆಯ
ವಿದ್ಯಾರ್ಥಿಗಳಿಗೆ ೪೦ ತಟ್ಟೆಗಳನ್ನು ರೋಟರಿ ಸಂಸ್ಥೆ ವತಿಯಿಂದ ವಿತರಿಸಲಾಯಿತು.
ಈ ಸಂದರ್ಭ ರೋಟರಿ ಕಾರ್ಯದರ್ಶಿ ಸಂಪತ್, ಸದಸ್ಯರಾದ ಎಚ್.ಇ. ತಮ್ಮಯ್ಯ, ವಿಜಯ್, ಎಸ್.ಜೆ. ಪ್ರಸನ್ನಕುಮಾರ್, ಎಂ.ಇ. ವಿಠಲ್, ಲತೇಶ್, ಆನಂದ್ ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಹಾಜರಿದ್ದರು.
ಪೊನ್ನಂಪೇಟೆ: ತಾಲೂಕಿನ ಶಾಲಾ ಕಾಲೇಜುಗಳು ಒಂದೇ ವೇದಿಕೆಯಡಿಯಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯ ಆಚರಣೆ ಮಾಡಲು ಚಮ್ಮಟೀರ ಪ್ರವೀಣ್ ಉತ್ತಪ್ಪ ಕರೆ ನೀಡಿದರು
ಜಿಲ್ಲೆಯ ಆಯಾಯ ತಾಲೂಕಿನ ಶಾಲಾ ಕಾಲೇಜುಗಳು ಒಂದೇ ವೇದಿಕೆಯಡಿಯಲ್ಲಿ ಸೇರಿ ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ವಿವಿಧ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವಂತಾಗಬೇಕು. ಈ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಇತರರಿಗೂ ಪಸರಿಸಲು ಸಹಕಾರಿಯಾಗುತ್ತದೆ ಹಾಗೂ ಸ್ವಾತಂತ್ರ್ಯ ದಿನಾಚರಣೆಗೂ ಒಂದು ಅರ್ಥ ಬರುತ್ತದೆ ಎಂದು ಅಖಿಲ ಕೊಡವ ಸಮಾಜ ಯೂತ್ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಅಭಿಪ್ರಾಯಪಟ್ಟರು.
ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ನಿನಾದ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಪೊನ್ನಂಪೇಟೆ ತಾಲೂಕಿನಲ್ಲಿರುವ ಶಾಲಾ ಕಾಲೇಜುಗಳು ಬೇರೆ ಬೇರೆ ಕಾರ್ಯಕ್ರಮ ಮಾಡುವ ಬದಲು ತಾಲೂಕು ಆಡಳಿತದ ಸಹಕಾರದಲ್ಲಿ ಒಂದೆ ವೇದಿಕೆಯಡಿಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುವ ಮೂಲಕ ಅದ್ದೂರಿಯ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ನೀಡಬೇಕಿದೆ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ನಮ್ಮ ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಬೇಕಿದೆ ಎಂದರು. ಮುಂದುವರಿದು ಮಾತನಾಡಿದ ಅವರು ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ನಾವು ದುರ್ಬಳಕೆ ಮಾಡಿಕೊಳ್ಳದೆ ಸಮಾಜ ನಮಗೇನು ನೀಡಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನೂ ನೀಡುತ್ತಿದ್ದೇವೆ ಎಂದು ಯೋಚಿಸಿ ಹೆಜ್ಜೆ ಹಾಕಬೇಕಿದೆ ಎಂದರು.
ಕೊಡಗಿನಲ್ಲಿ ಸ್ವಾತಂತ್ರö್ಯದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪಂದ್ಯAಡ ಬೆಳ್ಳಿಯಪ್ಪ, ಕೊಳ್ಳಿಮಾಡ ಕರುಂಬಯ್ಯ, ಮಂಡೇಪAಡ ಕಾರ್ಯಪ್ಪ, ಪಡೆಬೀರ ಮಾತಂಡ ಅಪ್ಪಚ್ಚು, ಅಬ್ದುಲ್ ಗಫರ್ ಖಾನ್, ಎಂ.ಎA ಸಿದ್ದಿಕ್, ಪಾರುವಂಗಡ ಕುಶಾಲಪ್ಪ, ಪುತ್ತಮನೆ ಗಣಪಮಯ್ಯ, ಮಂಡೀರ ಉತ್ತಯ್ಯ ಹೀಗೆ ಹೆಸರು ಹೇಳುತ್ತಾ ಹೋದರೆ ಕೊಡಗಿನಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಾಗಿಯೇ ಇತ್ತು ಎಂದರೆ ತಪ್ಪಲ್ಲ. ಆದರೆ ಇದು ಒಂದು ಜನಾಂಗಕ್ಕೆ ಹಾಗೂ ಒಂದು ಪ್ರದೇಶಕ್ಕೆ ಸೀಮಿತವಾಯಿತು ಹೊರತು ವಿದ್ಯಾರ್ಥಿಗಳಿಗೆ ಸೇರಿದಂತೆ ಇತರರಿಗೆ ಪರಿಚಯ ಮಾಡುವ ಕೆಲಸವಾಗಲಿಲ್ಲ. ಇನ್ನಾದರೂ ಈ ನಿಟ್ಟಿನಲ್ಲಿ ಜಿಲ್ಲೆಯ ಶಾಲಾ ಕಾಲೇಜುಗಳು ಸ್ಥಳೀಯ ಹೊರಾಟಗಾರರ ಪರಿಚಯ ಮಾಡಿಕೊಡುವ ಮೂಲಕ ಅವರಿಗೆ ಗೌರವ ನೀಡಬೇಕಿದೆ ಹಾಗೂ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸಬೇಕಿದೆ ಎಂದು ಹೇಳಿದರು.
ಈ ಸಂದರ್ಭ ಉಪಸ್ಥಿತರಿದ್ದ ನಿನಾದ ಶಾಲೆಯ ಆಡಳಿತಾಧಿಕಾರಿ ನಾಗೇಶ್ ಹಾಗೂ ಪ್ರಾಂಶುಪಾಲರಾದ ಅಮ್ಮತೀರ ಶಿಲ್ಪ ದೀಪಕ್ ಮಾತನಾಡಿದರು. ಶಿಕ್ಷಕಿ ಮತ್ರಂಡ ನೇತ್ರಾ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕಿ ದೀಪಿಕಾ ವಂದಿಸಿದರು. ಧ್ವಜಾರೋಹಣ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಸೇರಿದಂತೆ ದೇಶಭಕ್ತಿಯ ವಿವಿಧ ಕಾರ್ಯಕ್ರಮಗಳು, ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ ಗಮನ ಸೆಳೆಯಿತು.
ಸಿದ್ದಾಪುರ: ಹಾಕತ್ತೂರು ಬಿಳಿಗೇರಿ ಬದರ್ ಜಮಾಅತ್ ಸಮಿತಿ ಹಾಗೂ ಹಯಾತುಲ್ ಇಸ್ಲಾಂ ಮದರಸ ಸಹಯೋಗದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಜಮಾಅತ್ ಅಧ್ಯಕ್ಷರಾದ ಮೊಯಿದೀನ್ ಕುಂಜಿ ಮುಸ್ಲಿಯಾರ್ ಹಾಜಿ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸದರ್ ಉಸ್ತಾದ್ ಮೊಹಮ್ಮದ್ ಸಖಾಫಿ ಮತ್ತು ಫಕರುದ್ದೀನ್ ಫೈಜಿ ಸ್ವಾತಂತ್ರ್ಯ ದಿನದ ಸಂದೇಶ ನೀಡಿದರು. ಹಾಗೂ ಮದರಸ ವಿದ್ಯಾರ್ಥಿಗಳಿಂದ ದೇಶಭಕ್ತಿ ಗಾಯನ ನಡೆಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಜಮಾಅತ್ ಉಪಾಧ್ಯಕ್ಷರಾದ ಅಬ್ದುಲ್ ಖಾದರ್, ಸದಸ್ಯರಾದ ಅಬ್ದುಲ್ ರೆಹಮಾನ್, ನಾಸಿರ್, ಲತೀಫ್, ಹುಸೈನಾರ್, ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ಲ ಹಾಜಿ, ಪಿ.ಯಂ. ಅಬ್ದುಲ್ಲ ಹಾಜರಿದ್ದರು. ಜಮಾಅತ್ ಕಾರ್ಯದರ್ಶಿ ಅಬೂಬಕ್ಕರ್ ಸ್ವಾಗತಿಸಿ, ಸಹ ಕಾರ್ಯದರ್ಶಿ ಅಲ್ತಾಫ್ ವಂದಿಸಿದರು.
ನಾಪೋಕ್ಲು : ಕೊಳಕೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧೀನದಲ್ಲಿರುವ ದಾರುಲ್ ಇಸ್ಲಾಂ ಮದ್ರಸದಲ್ಲಿ ೭೭ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣವನ್ನು ಕಾರ್ಯದರ್ಶಿ ರಫೀಕ್ ಎಂ.ಎಚ್. ನೆರವೇರಿಸಿದರು. ಇಬ್ರಾಹಿಂ ಸಅದಿ ಸ್ವಾಗತ ಭಾಷಣ ಮಾಡಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಸಮಿತಿ ಸದಸ್ಯರು, ಮದ್ರಸ ಅಧ್ಯಾಪಕರು ಊರಿನ ಹಿರಿಯರು ಭಾಗಿಯಾಗಿದ್ದರು.ಕೂಡಿಗೆ: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣ ವನ್ನು ಕಾಲೇಜು ಪ್ರಾಂಶುಪಾಲ ಡಾ. ಬಸಪ್ಪ ನೆರವೇರಿಸಿದರು.
ನಂತರ ನಡೆದ ಸಭೆಯ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ ವಹಿಸಿದ್ದರು. ದಿನದ ಮಹತ್ವದ ಬಗ್ಗೆ ಉಪನ್ಯಾಸಕ ರಮೇಶ್ ಅವರು ಮಾತಾನಾಡಿದರು. ಕಾಲೇಜು ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಾಷಣ, ಹಾಡುಗಾರಿಕೆ ಯನ್ನು ನಡೆಸಿಕೊಟ್ಟರು, ಸ್ವಾತಂತ್ರö್ಯ ದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆಗಳು ನಡೆದವು. ಅವುಗಳಲ್ಲಿ ವಿಜೇತ ರಾದವರಿಗೆ ಕೆ.ಕೆ. ನಾಗರಾಜಶೆಟ್ಟಿ ಬಹುಮಾನವನ್ನು ವಿತರಣೆ ಮಾಡಿದರು. ಈ ಸಂದರ್ಭ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಜನಾರ್ಧನ್, ಉಪನ್ಯಾಸಕರಾದ ನಾಗಪ್ಪ, ಕಾವೇರಮ್ಮ, ಸತೀಶ್, ರಮೇಶ್, ಹನುಮರಾಜು, ರವೀಶ್, ಸುಶೀತಂಗಚ್ಛನ್, ಪ್ರೇಕ್ಷಿತ್, ಅನುಷಾ ಹಾಜರಿದ್ದರು.
ಚೆಟ್ಟಳ್ಳಿ : ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ ಮೇಜರ್ ಕೊಂಗೇಟಿರ ಮೊಣ್ಣಪ್ಪ ಅವರು ದ್ವಜಾರೋಹಣ ಮಾಡುವ ಮೂಲಕ ೭೭ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಅವರು ಮಾತನಾಡಿ ವಿದ್ಯಾರ್ಥಿಗಳು ವಿದ್ಯಾರ್ಥಿದೆಸೆಯಲ್ಲಿಯೇ ಸೇನೆಗೆ ಸೇರಲು ಗುರಿಯನ್ನು ಹೊಂದುವ ಮೂಲಕ ಭಾರತಾಂಬೆಯ ಸೇವೆ ಮಾಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷÀ ಪೇರಿಯನ ಜಯಾನಂದ ಅವರು ಮಕ್ಕಳು ದೇಶಪ್ರೇಮವನ್ನು ಮೈಗೂಡಿಸಿ ಕೊಳ್ಳಬೇಕು. ದೇಶದ ಇತಿಹಾಸದ ಸಮರ್ಪಕ ಅರಿವನ್ನು ಪಡೆದು ಕೊಂಡು ದೇಶವನ್ನು ಪ್ರಗತಿ ಪಥದಲ್ಲಿ ಮುನ್ನಡೆಸಬೇಕೆಂದರು. ಶಾಲಾಮುಖ್ಯೋಪಾದ್ಯಾಯಿನಿ ಕೆ.ತಿಲಕ ಅವರು ಭಾರತ ಸ್ವಾತಂತ್ರ್ಯದ ಮೈಲಿಗಲ್ಲುಗಳನ್ನು ಸವಿವರವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು. ಮಕ್ಕಳಿಂದ ದಿನದ ಮಹತ್ವದ ಕುರಿತ ಭಾಷಣ, ಸ್ಪರ್ಧೆ ಹಾಗು ದೇಶ ಭಕ್ತಿಗೀತೆ ಗಾಯನ ಸ್ಪರ್ಧೆ ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ೨೦೨೨-೨೩ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ದತ್ತಿನಿಧಿ ನೀಡಲಾಯಿತು. ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಮೊಹಮದ್ ಮಿದ್ಲಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಸೋಮೆಯಂಡ ದಿಲೀಪ್ ಅಪ್ಪಚ್ಚು, ಕಾರ್ಯದರ್ಶಿ ಬಟ್ಟೀರ ರಕ್ಷುಕಾಳಪ್ಪ, ನಿರ್ದೇಶಕರುಗಳಾದ ಮುಳ್ಳಂಡ ಕಾಶಿ ದೇವಯ್ಯ, ಕೊಂಗೇಟಿರ ಹರೀಶ್ ಅಪ್ಪಣ್ಣ, ಮುಳ್ಳಂಡ ಮಾಯಮ್ಮ, ಪಳಂಗAಡ ಗೀತಾ ಸುಬ್ಬಯ್ಯ, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.