ಕೂಡಿಗೆ, ಆ. ೨೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲ ನಗರ ಪುರಸಭೆಯ ಕಸ ವಿಲೇವಾರಿ ಘಟಕದ ಅಭಿವೃದ್ಧಿಗೆ ಪೂರಕವಾಗಿ ಮತ್ತು ಪಾರಂಪರಿಕ ಕಸದ ಶುದ್ಧೀಕರಣ, ನೂತನ ತಂತ್ರಜ್ಞಾನ ಯಂತ್ರಗಳ ಬಳಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಈಗಾ ಗಲೇ ಪುರಸಭೆಯ ನಿಯಮಾ ನುಸಾರವಾಗಿ ರೂ. ೩ ಕೋಟಿಗೂ ಅಧಿಕ ವೆಚ್ಚದ ಟೆಂಡರ್ ಪ್ರಕ್ರಿಯೆಯು ಆರಂಭಗೊAಡಿದೆ.

ಸ್ವಚ್ಛ ಭಾರತ್ ಮಿಷನ್ ಯೋಜ ನೆಯಡಿಯಲ್ಲಿ ಭುವನಗಿರಿ ಗ್ರಾಮದಲ್ಲಿ ರುವ ಕಸ ವಿಲೇವಾರಿ ಘಟಕದಲ್ಲಿ ಹೊಸ ಯೋಜನೆಯ ಅನುಗುಣ ವಾಗಿ ಮತ್ತು ರಾಷ್ಟಿçÃಯ ಮಟ್ಟದ ಕಸ ವಿಲೇವಾರಿಯ ನೂತನ ತಂತ್ರಜ್ಞಾನ ಯೋಜನೆ ಅಡಿಯಲ್ಲಿ ಯಂತ್ರಗಳ ಅಳವಡಿಕೆ ಮಾಡಿ ಅದರ ಮೂಲಕ ಪಾರಂಪರಿಕ ಕಸ, ಒಣ ಕಸ, ಹಸಿ ಕಸ, ಮತ್ತು ಪ್ಲಾಸ್ಟಿಕ್ ಸೇರಿದಂತೆ ವಿವಿಧ ಕಸಗಳ ವಿಂಗಡಣೆ, ಹಸಿ ಕಸದಲ್ಲಿ ಸಾವಯವ ಗೊಬ್ಬರ ತಯಾರಿಸುವ ಮತ್ತು ಹಳೆಯ ಕಸದಲ್ಲಿರುವ ವಿವಿಧ ತ್ಯಾಜ್ಯಗಳನ್ನು ಸಂಸ್ಕರಿಸುವ ಮೂಲಕ ಬೇರ್ಪಡಿಸುವಿಕೆ ಸೇರಿದಂತೆ ವಿವಿಧ ನೂತನ ಯಂತ್ರಗಳ ಅಳವಡಿಸುವ ಯೋಜನೆಗೆ ಸಂಬAಧಿಸಿದAತೆ ರೂ. ೩ ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲು ಟೆಂಡರ್ ಪ್ರಕ್ರಿಯೆಯು ನಡೆಯುತ್ತಿದೆ ಎಂದು ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಭುವನಗಿರಿ ಕಸ ವಿಲೇವಾರಿ ಘಟಕೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿದರು.

ಕಸ ವಿಲೇವಾರಿ ಘಟಕದಲ್ಲಿ ಸ್ವಚ್ಛ ಭಾರತ್ ಯೋಜನೆ ಸೇರಿದಂತೆ ಇತರೆ ಯೋಜನೆಯಡಿಯಲ್ಲಿ ಈಗಾಗಲೇ ಯಂತ್ರಗಳ ಅಳವಡಿಕೆಗೆ ಸಂಬAಧಿ ಸಿದಂತೆ ಬೃಹತ್ ಪ್ರಮಾಣದ ಕಟ್ಟಡಗಳು ನಿರ್ಮಾಣಗೊಂಡಿವೆ. ಅದರನ್ವಯ ಗ್ರಾಮಸ್ಥರಿಗೆ ಕಸ ವಿಲೇವಾರಿ ಘಟಕದಿಂದ ಯಾವುದೇ ರೀತಿಯ ತೊಂದರೆಗಳು, ಮತ್ತು ದುರ್ವಾಸನೆಗಳು ಬರದ ಹಾಗೆ ಆಧುನಿಕ ತಂತ್ರಜ್ಞಾನದ ಮೂಲಕ ಹೊಸ ಯಂತ್ರಗಳನ್ನು ಅಳವಡಿಸಿ, ಪಾರಂಪರಿಕ ಕಸ ವಿಂಗಡಣೆ ಮಾಡಲಾಗುತ್ತದೆ. ಅದರ ಮುಖೇನ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕೃಷ್ಣ ಪ್ರಸಾದ್ ತಿಳಿಸಿದರು.