ಗೋಣಿಕೊಪ್ಪಲು, ಆ. ೨೧: ಗ್ರಾಮ ಮಟ್ಟದಲ್ಲಿ ಉಚಿತ ಆರೋಗ್ಯ ಶಿಬಿರಗಳು ನಿರಂತರವಾಗಿ ನಡೆಯು ವಂತಾಗಬೇಕು, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿ ಸುವಂತಾಗಬೇಕು. ಇದರಿಂದ ಸ್ಥಳೀಯವಾಗಿ ನಾಗರಿಕರಿಗೆ ಪ್ರಯೋಜನ ದೊರೆಯಲಿದೆ. ತಮ್ಮ ಆರೋಗ್ಯದ ಸಮಸ್ಯೆಯನ್ನು ಇಂತಹ ಶಿಬಿರಗಳಿಂದ ತಿಳಿದುಕೊಳ್ಳಬಹು ದಾಗಿದೆ ಎಂದು ಪೊನ್ನಂಪೇಟೆ ನಾಗರಿಕ ವೇದಿಕೆಯ ಉಪಾಧ್ಯಕ್ಷ ಎ.ಎ.ಎರ್ಮು ಹಾಜಿ ತಿಳಿಸಿದರು.
ಪೊನ್ನಂಪೇಟೆ ಇಗ್ಗುತ್ತಪ್ಪ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಪೊನ್ನಂ ಪೇಟೆ ನಾಗರಿಕ ವೇದಿಕೆ, ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಗ್ರಾಮ ಆರೋಗ್ಯ ಕಾರ್ಯಕ್ರಮ ಗೋಣಿಕೊಪ್ಪ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾ ಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಇವರು, ಪೊನ್ನಂಪೇಟೆ ನಾಗರಿಕ ವೇದಿಕೆಯು ಹಲವು ಜನಪರ ಕಾಳಜಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತ ಬಂದಿದೆ. ಈ ಬಾರಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿ ಸ್ಥಳೀಯ ಮಟ್ಟದಲ್ಲಿನ ನಾಗರಿಕರಿಗೆ ಇದರ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಿದ್ದೇವೆ.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪೊನ್ನಂಪೇಟೆ ದಂತ ವೈದ್ಯ ಡಾ. ಬೊಟ್ಟಂಗಡ ದೀವಿಕ, ಪ್ರಸ್ತುತ ಸನ್ನಿವೇಶದಲ್ಲಿ ವಿವಿಧ ಕಾಯಿಲೆಗಳು ಮನುಷ್ಯನಲ್ಲಿ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಯಾವುದೇ ವಯೋಮಾನದ ಮಿತಿ ಇರುವುದಿಲ್ಲ. ರೋಗ ಪತ್ತೆಗಾಗಿ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡ ವೇಳೆ ನಾಗರಿಕರು ಪರೀಕ್ಷೆ ಮಾಡಿಸಿಕೊಳ್ಳಬಹುದು. ಇದರಿಂದ ತಮ್ಮ ಆರೋಗ್ಯದಲ್ಲಿ ಆಗುತ್ತಿರುವ ವೆತ್ಯಾಸಗಳಿಗೆ ಪರಿಹಾರ ಲಭಿಸಲಿದೆ. ಈ ನಿಟ್ಟಿನಲ್ಲಿ ತಮ್ಮ ಆರೋಗ್ಯವನ್ನು ನಾಗರಿಕರು ಕಾಪಾಡಿಕೊಳ್ಳುವ ಉದ್ದೇಶದಿಂದ ಇಂತಹ ಶಿಬಿರಗಳು ಅವಶ್ಯಕ ಎಂದರು.
ನಾಗರಿಕ ವೇದಿಕೆಯ ಅಧ್ಯಕ್ಷ ಪಿ.ಎನ್. ಬೋಸು ವಿಶ್ವನಾಥ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ನಾಗರಿಕ ವೇದಿಕೆಯು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಈ ಬಾರಿ ಆರೋಗ್ಯ ಶಿಬಿರ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮುಂದಾಗಿ ದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಯ ದರ್ಶಿಗಳಾದ ರಾಜೇಂದ್ರ, ಸಹ ಕಾರ್ಯದರ್ಶಿ ದಿನೇಶ್, ನಿರ್ದೇಶಕ ರುಗಳಾದ ವಾಸು ಉತ್ತಪ್ಪ, ಪಿ.ಬಿ.ಪೂಣಚ್ಚ, ಆಶಾ ಪೂಣಚ್ಚ, ಟಿ.ಬಿ.ಪೂಣಚ್ಚ, ಮೂಕಳೇರ ಲಕ್ಷö್ಮಣ್, ದಿನು ಚಿಣ್ಣಪ್ಪ, ನೆಹರು ಉತ್ತಪ್ಪ, ಸೇರಿದಂತೆ ಮತ್ರಂಡ ಅಪ್ಪಚ್ಚು,ಕಳ್ಳೆಂಗಡ ಗಣಪತಿ, ಅಣ್ಣಳಮಾಡ ದೇವಯ್ಯ, ಗಣ್ಯರಾದ ಮಳವಂಡ ಅರವಿಂದ್ ಕುಟ್ಟಪ್ಪ ಉಪಸ್ಥಿತರಿದ್ದರು.
ಆರೋಗ್ಯ ಇಲಾಖೆಯ ಪ್ರಮುಖರಾದ ಕೆ.ಎನ್. ಸಜಿತ, ಜಿ.ಎಸ್. ಅನಿತ, ಕೆ.ಆರ್. ರುಕ್ಮಿಣಿ, ಎನ್.ಸಿ. ಚಂದ್ರಶೇಖರ್, ಎನ್.ಎಂ. ತ್ರಿಮೂರ್ತಿ, ಟಿ.ಆರ್. ಅವಿನಾಶ್, ಆರ್. ಬ್ರೋಹಿನಿ ಸೇರಿದಂತೆ ಪ್ರಮುಖರು ಹಾಜರಿದ್ದರು. ಸುತ್ತಮುತ್ತಲಿನ ಜನರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. ನಾಗರಿಕ ವೇದಿಕೆಯ ನಿರ್ದೇಶಕಿ ಚೊಟ್ಟೆಕಾಳಪಂಡ ಆಶಾಪ್ರಕಾಶ್ ಪ್ರಾರ್ಥಿಸಿ, ಅಧ್ಯಕ್ಷ ಬೋಸು ವಿಶ್ವನಾಥ್ ಸ್ವಾಗತಿಸಿ ವಂದಿಸಿದರು.