ಸುAಟಿಕೊಪ್ಪ, ಆ. ೨೧: ಮಾದಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘ ೨೦೨೩ನೇ ಸಾಲಿನಲ್ಲಿ ೩೯,೪೩,೭೦೦ ರೂ. ಲಾಭಗಳಿಸಿ ಪ್ರಗತಿಪಥದತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಬಿ.ಎ.ಮೊಣ್ಣಪ್ಪ ಹೇಳಿದರು. ಸಂಘದ ೯೨ನೇ ವಾರ್ಷಿಕ ಮಹಾಸಭೆಯು ಸಂಘದ ಸಭಾಂಗಣದಲ್ಲಿ ನಡೆಯಿತು.

ಸದಸ್ಯರಿಗೆ ೧೩.೮೩ ಕೋಟಿ ಸಾಲ ವಿತರಿಸಲಾಗಿದೆ. ವಾಯಿದೆ ಮೀರಿದ ಸಾಲವನ್ನು ಸದಸ್ಯರುಗಳು ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ಸದಸ್ಯರ ಮಕ್ಕಳು ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಗುತ್ತಿದೆ. ಶೇ.೧೮ ರಷ್ಟು ಡಿವಿಡೆಂಡ್ ನೀಡಲಾಗುವುದೆಂದು ಅಧ್ಯಕ್ಷ ಮೊಣ್ಣಪ್ಪ ಹೇಳಿದರು.

ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ಎಂಬ ಪದ ನಾಮದಿಂದ ರೈತರ ಹಿತಾಸಕ್ತಿಗೆ ಮುಂದಿನ ದಿನಗಳಲ್ಲಿ ಧಕ್ಕೆ ಬರಲಿದ್ದು, ಹಿರಿಯರು ಕೃಷಿಕರಿಗಾಗಿ ಕಟ್ಟಿದ ಸಹಕಾರ ಸಂಘದ ಮೂಲ ಆಶಯಗಳು ಮರೆಯಾಗಲಿವೆ. ವಿವಿಧೋದ್ದೇಶ ಸಹಕಾರ ಸಂಘವಾದರೆ ಎಲ್ಲರೂ ಸಂಘದ ಸದಸ್ಯರಾಗಬಹುದಾಗಿದೆ. ಈ ಬಗ್ಗೆ ಸರಕಾರ ಸಹಕಾರ ಇಲಾಖೆಗೆ ಪತ್ರ ಬರೆದು ಮನವಿ ಮಾಡಬೇಕೆಂದು ಕಾಂಡನಕೊಲ್ಲಿಯ ಕೆ.ಎಂ.ಬಿದ್ದಪ್ಪ ಸಲಹೆ ನೀಡಿದರು. ನಿರ್ದೇಶಕ ನಾಪಂಡ ಉಮೇಶ ಮಾತನಾಡಿ ಸಹಕಾರ ಇಲಾಖೆಯ ಉಪನಿಬಂಧ ಕರೊಂದಿಗೆ ಚರ್ಚಿಸಿದಾಗ ಕೇಂದ್ರ ಸರಕಾರ ಸಂಘದಲ್ಲಿ ಸೇರಬೇಕೆಂಬ ಉದ್ದೇಶದಿಂದ ಹೆಸರು ಬದಲಿಸ ಲಾಗಿದೆ. ಸರಕಾರದ ನಿಯಮ ಉಲ್ಲಂ ಘನೆ ಮಾಡಲು ಸಾಧ್ಯವಾಗುವುದಿಲ್ಲ ಎಂದರು. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆದು ಮೊದಲಿನ ಹೆಸರೇ ಸಂಘ ದಲ್ಲಿ ಇರಿಸಿಕೊಳ್ಳುವಂತೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.

ಸಂಘದಲ್ಲಿ ಕೃಷಿ ಉಪಕರಣಗಳು, ಸಿಮೆಂಟ್ ಸದಸ್ಯರಿಗೆ ಶೇ.೫ ರಷ್ಟು ಕಡಿಮೆ ದರದಲ್ಲಿ ನೀಡುವಂತೆ ಕೊಪ್ಪತಂಡ ಗಣೇಶ ಒತ್ತಾಯಿಸಿದರು. ಸಂಘದ ಗೋದಾಮಿಗೆ ಗೊಬ್ಬರ ಸಾಗಿಸಲು ಮಾರ್ಕೆಟ್ ರಸ್ತೆಯಲ್ಲಿರುವ ಪಂಚಾಯಿತಿ ಕಟ್ಟಡ ಅಡ್ಡಿಯಾಗಿದ್ದು ಅದನ್ನು ತೆರವುಗೊಳಿಸಬೇಕೆಂದು, ಮಂದೆಯAಡ ಗಣೇಶ, ಕೊಪ್ಪತಂಡ ಗಣೇಶ ಆಗ್ರಹಿಸಿ ೧೦ ದಿನದ ಸಮಯ ನೀಡಿದರು. ಸೀಮೆಎಣ್ಣೆಯನ್ನು ಸಂಘದಿAದ ವಿತರಿಸಲು ಸದಸ್ಯರುಗಳು ಆಗ್ರಹಿಸಿದರು. ಪೆಟ್ರೋಲ್‌ಬಂಕ್, ಗ್ಯಾಸ್ ಏಜೆನ್ಸಿಯನ್ನು ತೆರೆಯಲು ಸರಕಾರ ಸಂಘಕ್ಕೆ ಅವಕಾಶ ನೀಡಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಕಾವೇರಪ್ಪ ತಿಳಿಸಿದರು.

ಸಂಘದ ಉಪಾಧ್ಯಕ್ಷ ಪಿ.ಕೆ.ತಿಲಕ್‌ಕುಮಾರ್, ನಿರ್ದೇಶಕರುಗಳಾದ ತಮ್ಮಯ್ಯ, ಎಸ್.ಸಿ.ಕಾಳಪ್ಪ, ಎನ್.ಎಸ್.ಬೆಳ್ಯಪ್ಪ, ಬಿ.ಎ.ಧೂಮಪ್ಪ, ಕೆ.ಎ.ಲತೀಫ್, ಪಿ.ಈ.ನಳಿನಿ ತಮ್ಮಯ್ಯ, ಎಂ.ಪಿ.ಪೊನ್ನಮ್ಮ, ಜೆ.ಆರ್.ಕೃಷ್ಣಪ್ಪ, ಎಂ.ವೈ.ಕೇಶವ, ಕೆಡಿಸಿಸಿ ಬ್ಯಾಂಕ್ ವೃತ್ತಿಪರ ನಿರ್ದೇಶಕ ಜಿ.ಆರ್.ಬಲರಾಂ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾವೇರಪ್ಪ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.