ವೀರಾಜಪೇಟೆ, ಆ. ೧೯: ವೀರಾಜಪೇಟೆ ತಾಲೂಕಿನ ಆರ್ಜಿ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಯಾಗಿದ್ದ ದಿವಂಗತ ಹಂಸ ಮತ್ತು ಆಸೀಯಾ ಅವರ ಪುತ್ರ ಹವಾಲ್ದಾರ್ ಕೆ.ಹೆಚ್.ಅಲ್ತಾಫ್ ಅಹಮದ್ ಕರ್ತವ್ಯದಲ್ಲಿದ್ದ ಸಂದರ್ಭ ಮರಣ ಹೊಂದಿದ್ದು, ಸ್ವಾತಂತ್ರö್ಯ ಉತ್ಸವ ಸಂದರ್ಭ ಅವರ ಕುಟುಂಬಕ್ಕೆ ಗ್ರಾ.ಪಂ.ನಿAದ ಸನ್ಮಾನಿಸಲಾಯಿತು.

ಆರ್ಜಿ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ಸಭಾಂ ಗಣದಲ್ಲಿ ನಡೆದ ಸ್ವಾತಂತ್ರö್ಯ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ದಿವಂಗತ ಅಲ್ತಾಫ್ ಅವರ ಪತ್ನಿ ಜುಬೇರಿಯಾ ಮತ್ತು ತಾಯಿ ಆಸಿಯಾ ಅವರನ್ನು ಗೌರವಿಸಲಾಯಿತು.

ಬಳಿಕ ಮಾತನಾಡಿದ ಕಾರ್ಯ ದರ್ಶಿ ಆರ್. ರಾಜನ್, ಸೈನಿಕರು ದೇಶ ಕಾಯುವ ಯೋಧರು, ಸೈನಿಕರಿಗೆ ಗೌರವ ಸೂಚಿಸುವುದು ಪ್ರತಿಯೊಬ್ಬರ ಕರ್ತವ್ಯ. ದೇಶಕ್ಕೆ ಮಾಡಿರುವ ಸೇವೆ ಎಂದಿಗೂ ಸ್ಮರಣೀಯ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಅದ್ಯಕ್ಷೆ ಫಾತಿಮಾ ಮಾತನಾಡಿದರು.

ಸಭಾ ಕಾರ್ಯಕ್ರಮದ ಬಳಿಕ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಾಯೋಜಿತ ಕಾರ್ಯಕ್ರಮ ವಾದ ಆಜಾದಿ ಕ ಅಮೃತ್ ಮಹೋ ತ್ಸವದ ಅಂಗವಾಗಿ ‘ನಮ್ಮ ನೆಲ ನಮ್ಮ ದೇಶ’ ಕಾರ್ಯಕ್ರಮ ಅಡಿಯಲ್ಲಿ, ಕರ್ತವ್ಯ ಸಾಲಿನಲ್ಲಿ ವೀರ ಮರಣ ಹೊಂದಿದವರ ಶಿಲಾಫಲಕ ಉದ್ಘಾಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹೆಚ್.ಕೆ. ಕವಿತಾ, ಮಾಜಿ ಅಧ್ಯಕ್ಷೆ ಪಾರ್ವತಿ, ವಾರ್ಡಿನ ಚುನಾಯಿತ ಪ್ರತಿನಿಧಿಗಳು, ದಿವಂಗತ ಅಲ್ತಾಫ್ ಅವರ ತಾಯಿ ಅಸೀಯಾ, ಪತ್ನಿ ಜುಬೇರಿಯಾ, ಮಗ ಅಫ್ರೀದ್, ಮಗಳು ಜಾಸ್ಮೀನ್, ಸಂಜೀವಿನಿ ಒಕ್ಕೂಟದ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.