ಗೋಣಿಕೊಪ್ಪಲು, ಆ. ೧೯: ಸ್ವಾತಂತ್ರö್ಯ ದಿನದ ಅಂಗವಾಗಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೩೫ಕ್ಕೂ ಅಧಿಕ ನಿವೃತ್ತ ಯೋಧÀರನ್ನು ಒಂದೇ ವೇದಿಕೆಯಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸುವ ಮೂಲಕ ವಿಶೇಷ ರೀತಿಯ ಕಾರ್ಯಕ್ರಮವನ್ನು ನಡೆಸಲಾಯಿತು. ಇದೇ ಮೊದಲ ಬಾರಿಗೆ ಯೋಧರು ಒಂದೇ ವೇದಿಕೆಯಡಿಯಲ್ಲಿ ಗೌರವ ಸ್ವೀಕರಿಸಿದರು. ಇಂತಹ ಅಪರೂಪದ ಕ್ಷಣವನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಣ್ತುಂಬಿಕೊAಡರು.
ಗೋಣಿಕೊಪ್ಪ ಗ್ರಾಮ ಪಂಚಾ ಯಿತಿ ವತಿಯಿಂದ ಗೋಣಿಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇಶ ಸೇವೆಯಲ್ಲಿ ತಮ್ಮನ್ನು ತೊಡಗಿ ಸಿಕೊಂಡಿದ್ದ ಗ್ರಾಮದ ೩೫ ಯೋಧ ರನ್ನು ಗುರುತಿಸಿ ಸನ್ಮಾನಿಸಿ ದರು. ಯೋಧರ ಸನ್ಮಾನದ ನೆನಪಿ ಗಾಗಿ ಶಾಲೆಯ ಆವರಣದಲ್ಲಿ ಯೋಧರು ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮವು ಹಚ್ಚ ಹಸಿರಾಗಿ ಉಳಿಯುವ ಪ್ರಯತ್ನ ಮಾಡಿದರು.
ಗೋಣಿಕೊಪ್ಪ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ೮ ವಾರ್ಡ್ಗಳಲ್ಲಿ ಸೇನೆಯಿಂದ ನಿವೃತ್ತಿ ಹೊಂದಿದ ಯೋಧರಾದ ಎಸ್.ಕೆ.ನಾಚಪ್ಪ, ವಿ.ವಿ.ರಮೇಶ್, ರಾಮರಾವ್, ಎನ್.ಯು.ಉತ್ತಪ್ಪ, ಬಿ.ಎಸ್. ಪುರುಷೋತ್ತಮ, ಗಣೇಶ್, ಅಪ್ಪಣ್ಣ, ಜಗದೀಶ್, ಸಿ.ಎ.ಅಯ್ಯಣ್ಣ, ಪಿ.ಡಿ.ದಿನೇಶ್, ವಸಂತ್‌ಕುಮಾರ್, ಬಿ.ಎ.ಜನಾರ್ಧನ್, ಕೆ.ಸಿ.ಬಬ್ಬು, ದರ್ಶನ್, ಎನ್.ಆರ್. ಶಿವಾಜಿ. ಹೆಚ್.ಎಂ. ಗೋಪಾಲ್, ಮುತ್ತಣ್ಣ, ಎಂ.ಅಯ್ಯಣ್ಣ, ಪಿ.ಎಂ.ಇಬ್ರಾಹಿA, ಡಾ.ಸತೀಶ್, ಸೋಮಯ್ಯ, ಭೀಮಯ್ಯ,ಪೆಮ್ಮಯ್ಯ, ಮೊಣ್ಣಪ್ಪ, ವತ್ಸಲ, ಟಿ.ಡಿ.ಸುರೇಶ್, ಧರ್ಮಜ, ಸಿ.ಎಸ್.ತಿಮ್ಮಯ್ಯ, ಮೋಹನ್‌ದಾಸ್, ಅಮಿತ, ನಾರಾಯಣ ಹಾಗೂ ಗಿರಿರಾಜುರವರನ್ನು ಗ್ರಾಮ ಪಂಚಾಯಿತಿಯ ಪರವಾಗಿ ಅಧ್ಯಕ್ಷ ಮನ್ನಕ್ಕಮನೆ ಸೌಮ್ಯಬಾಲು, ಹಿರಿಯ ವೈದ್ಯರಾದ ಡಾ.ಶಿವಪ್ಪರವರು ಸನ್ಮಾನಿಸಿ ಗೌರವಿಸಿದರು. ಆ ಮೂಲಕ ನಿವೃತ್ತ ಯೋಧರಿಗೆ ಗೌರವ ಸಮರ್ಪಣೆ ಮಾಡಿದರು.
ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯಬಾಲು ಪ್ರಾಸ್ತವಿಕವಾಗಿ ಮಾತನಾಡಿ, ಸೇನೆಯಲ್ಲಿ ದುಡಿದ ಯೋಧರನ್ನು ಒಂದೇ ವೇದಿಕೆಯಡಿ ಗೌರವಿಸುವ ಸೌಭಾಗ್ಯ ನಮ್ಮದಾಗಿದೆ. ಇಂತಹ ಅವಕಾಶ ನಮಗೆ ಸಂದಿರುವುದು ನಮ್ಮ ಭಾಗ್ಯವಾಗಿದೆ. ಈ ದೇಶವನ್ನು ರಕ್ಷಿಸುವಲ್ಲಿ ಯೋಧರ ಕಾರ್ಯ ಸದಾ ಸ್ಮರಣೀಯ ಎಂದರು.
ಕಾರ್ಯಕ್ರಮವನ್ನು ಗಿಡಗಳಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ನಗರದ ಹಿರಿಯ ವೈದ್ಯರಾದ ಡಾ. ಶಿವಪ್ಪ, ದೇಶ ಸೇವೆಯಲ್ಲಿ ದೇಶದ ಬೆನ್ನೆಲುಬಾಗಿ ನಮ್ಮ ಸೈನಿಕರು ದುಡಿದಿದ್ದಾರೆ. ಸೈನಿಕರು ಮಾಡಿದ ದೇಶ ಸೇವೆಯಿಂದ ಇಂದು ನಾವೆಲ್ಲರೂ ಸುಖ ಜೀವನ ನಡೆಸುತ್ತಿದ್ದೇವೆ. ನಿವೃತ್ತಿಯ ನಂತರ ಯೋಧರನ್ನು ಗುರುತಿಸಿ ಗೌರವಿಸುವ ಸೌಭಾಗ್ಯ ನಮಗೆ ಒದಗಿ ಬಂದಿರುವುದು ಸುಯೋಗ. ನಾನೂ ಕೂಡ ಸೇನೆಯಲ್ಲಿ ಕೆಲಸ ನಿರ್ವಹಿಸಲು ಆಸಕ್ತಿ ವಹಿಸಿದ್ದೇ ಆದರೂ ನನಗೆ ಅಂತಹ ಅವಕಾಶ ಒದಗಿ ಬರಲಿಲ್ಲ. ದೇಶ ಸೇವೆಯಲ್ಲಿ ತೊಡಗಿಸಿಕೊಂಡು ನಿವೃತ್ತಿಗೊಂಡ ಯೋಧರ ಬಗ್ಗೆ ನಾಗರಿಕರು ತಿಳಿದುಕೊಳ್ಳಬೇಕು.
ಕಾರ್ಯಕ್ರಮದ ಅಂಗವಾಗಿ ನಿವೃತ್ತಿ ಹೊಂದಿ ಗೌರವ ಸ್ವೀಕರಿಸಿದ ಹಲವು ಯೋಧರು ತಮ್ಮ ದೇಶ ಸೇವೆಯ ಸಂದರ್ಭಗಳನ್ನು ವಿದ್ಯಾರ್ಥಿಗಳ ಮುಂದೆ ಹಂಚಿಕೊAಡರು.ದೇಶ ಸೇವೆಗೆ ಯುವ ಪೀಳಿಗೆ ಮುಂದಾಗಬೇಕು, ದೇಶದ ರಕ್ಷಣೆ ನಿಮ್ಮ ಕೈಯಲ್ಲಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾ ಯಿತಿಯ ಸದಸ್ಯ ಬಿ.ಎನ್.ಪ್ರಕಾಶ್, ಸೈನ್ಯದಲ್ಲಿ ಸೇವೆ ಸಲ್ಲಿಸಿದ ಯೋಧರನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನ ಫಲ ನೀಡಿದೆ. ಕಾರ್ಯಕ್ರಮವನ್ನು ಸರ್ಕಾರಿ ಶಾಲೆಯಲ್ಲಿ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ದೇಶ ಸೇವೆಯ ವಿಚಾರಗಳನ್ನು ಮನದಟ್ಟು ಮಾಡುವುದು ಗುರಿಯಾಗಿತ್ತು. ಸೇನೆಯ ಯೋಧರನ್ನು ನಮ್ಮ ಆಡಳಿತ ಮಂಡಳಿ ಅವಧಿಯಲ್ಲಿ ಗೌವಿಸುವ ಸೌಭಾಗ್ಯ ಒದಗಿ ಬಂದಿರುವುದು ನಿಜಕ್ಕೂ ಭಾಗ್ಯ ಎಂದರು. ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಗಮನ ಸೆಳೆದರು. ವಿದ್ಯಾರ್ಥಿಗಳು ನಾಡ ಗೀತೆ ಹಾಡುವ ಮೂಲಕ ಪ್ರಸಂಸೆ ಪಡೆದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಕೊಣಿಯಂಡ ಬೋಜಮ್ಮ, ಚೆಪ್ಪುಡಿರ ಧ್ಯಾನ್ ಸುಬ್ಬಯ್ಯ, ಪ್ರಮೋದ್ ಗಣಪತಿ, ನೂರೆರ ರತಿ ಅಚ್ಚಪ್ಪ, ಎಂ.ಮAಜುಳ, ಶರತ್‌ಕಾಂತ್, ಚೈತ್ರ ಬಿ.ಚೇತನ್, ರಾಮಕೃಷ್ಣ, ಹಕೀಮ್, ವಿವೇಕ್ ರಾಯ್ಕರ್,ಸೇರಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀನಿವಾಸ್ ಸಿಬ್ಬಂದಿಗಳಾದ ಗುರುಶ್ರೀ, ಶುಭಾಶ್, ಸತೀಶ, ಇಂದ್ರಮ್ಮ ಸೇರಿದಂತೆ ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯರಾದ ಹೆಚ್.ಎಂ.ಕುಮಾರ್, ಸಹ ಶಿಕ್ಷಕರಾದ ಸತೀಶ್, ರಮಾನಂದ ಮತ್ತಿತರರು ಉಪಸ್ಥಿತರಿದ್ದರು.ಶಾಲಾ ಶಿಕ್ಷಕಿ ಎಂ.ಸಿ.ಇAದಿರಾ, ನಿರೂಪಿಸಿ ಯೋಧರ ಪರಿಚಯ ವಿವರಿಸಿದರು.
-ಹೆಚ್.ಕೆ.ಜಗದೀಶ್