ಆಧುನಿಕ ಭಾರತದ ನಿರ್ಮಾತೃ ದಿ. ರಾಜೀವ್ ಗಾಂಧಿ

ಅತ್ಯAತ ಕಿರಿಯ ವಯಸ್ಸಿನಲ್ಲೇ ಪ್ರಧಾನಿ ಪಟ್ಟವೇರಿ ಅನೇಕ ಸುಧಾರಿತ ಕಾರ್ಯಕ್ರಮಗಳನ್ನು ಜಾರಿಗೆ ತಂದು ಆಧುನಿಕ, ಸಧೃಢ ಭಾರತದ ನಿರ್ಮಾತೃ ಎಂಬ ಕೀರ್ತಿ ದೇಶದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರಿಗೆ ನಿಸ್ಸಂದೇಹ ವಾಗಿ ಸಲ್ಲಬೇಕು. ನಲವತ್ತನೇ ವಯಸ್ಸಿನಲ್ಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟçವಾದ ಭಾರತದ ಪ್ರಧಾನಿಯಾಗಿ ಅವರು ನೀಡಿದ ಆಡಳಿತಾತ್ಮಕ ಕೊಡುಗೆಗಳು ಅನನ್ಯವಾದದ್ದು.

ರಾಜಕೀಯದ ಬಗ್ಗೆ ಅನಾಸಕ್ತಿ ಹೊಂದಿದ್ದ ರಾಜೀವ್ ಗಾಂಧಿಯವರು ೧೯೮೦ರಲ್ಲಿ ತಮ್ಮ ಸಹೋದರ ಸಂಸದ ಸಂಜಯ್ ಗಾಂಧಿ ಯವರ ಅಕಾಲಿಕ ಮರಣದ ನಂತರ ಅನಿವಾರ್ಯವಾಗಿ ರಾಜಕೀಯ ಪ್ರವೇಶಿಸುತ್ತಾರೆ. ತಮ್ಮ ತಾಯಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸಲಹೆ ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ಒತ್ತಡಕ್ಕೆ ಮಣಿದು ಸಂಜಯ್ ರವರ ನಿಧನದಿಂದ ತೆರವಾದ ಆಮೇಥಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿ ಸಂಸತ್ತು ಪ್ರವೇಶ ಮಾಡುತ್ತಾರೆ. ಆರಂಭದಲ್ಲಿಯೇ ತಮ್ಮ ದೂರದೃಷ್ಟಿಯ ಚಿಂತನಗಳ ಪ್ರದರ್ಶನದ ಮೂಲಕ ಸಮರ್ಥ ನಾಯಕರೆನಿಸಿಕೊಳ್ಳುತ್ತಾರೆ. ೧೯೮೨ ರ ಏಷ್ಯನ್ ಕ್ರೀಡಾಕೂಟದ ಆತಿಥ್ಯ ಭಾರತ ವಹಿಸಿಕೊಂಡಾಗ ಅದರ ಮೇಲುಸ್ತುವಾರಿ ವಹಿಸಿಕೊಂಡು ಯಶಸ್ವಿಯಾಗಿ ನಡೆಸಿ ಎಲ್ಲರ ಮೆಚ್ಚುಗೆ ಗಳಿಸುತ್ತಾರೆ.

೧೯೮೪ರ ಅಕ್ಟೋಬರ್ ೩೧ ರಂದು ಅಂದಿನ ಪ್ರಧಾನಿ ತಮ್ಮ ತಾಯಿ ಇಂದಿರಾ ಗಾಂಧಿ ಯವರು ಅಂಗರಕ್ಷಕರ ಗುಂಡಿನ ದಾಳಿಗೆ ಒಳಗಾಗಿ ಹತರಾದಾಗ ೩೯ ವರ್ಷದ ರಾಜೀವ್ ಗಾಂಧಿ ಯವರು ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ. ಇಂದಿರಾ ಹತ್ಯೆಯ ಪರಿಣಾಮ ದೆಹಲಿಯಾದ್ಯಂತ ಸಿಖ್ಖರ ಮಾರಣಹೋಮ ನಡೆಯುತ್ತಿದ್ದಾಗ ಸೈನ್ಯ ವನ್ನು ಬಳಸಿ ಪರಿಸ್ಥಿತಿಯನ್ನು ಹತೋಟಿಗೆ ತಂದು ನೊಂದವರನ್ನು ಸಂತೈಸಿ ರಾಜೀವ್ ಪ್ರಬುದ್ಧ ನಾಯಕತ್ವವನ್ನು ಪ್ರದರ್ಶಿಸುತ್ತಾರೆ. ಪ್ರಧಾನಿಯಾದ ಎರಡೇ ವಾರದಲ್ಲಿ ಭೂಪಾಲ್ ಅನಿಲ ದುರಂತ ಸಂಭವಿಸುತ್ತದೆ. ಆಗಲೂ ಕೂಡ ವಿಚಲಿತರಾಗದೆ ಸಂತಸ್ತರಿಗೆ ನ್ಯಾಯ ದೊರಕಿಸುವಲ್ಲಿ ಸಫಲರಾಗುತ್ತಾರೆ.

ಜನರ ಅನುಕಂಪದ ಪ್ರಧಾನಿಯಾಗದ ಜನರ ಆಯ್ಕೆಯ ಪ್ರಧಾನಿಯಾಗುವ ಎಂಬ ದೃಢ ಸಂಕಲ್ಪ ತೊಟ್ಟು ಅವಧಿಗೆ ಮುನ್ನವೇ ಸರ್ಕಾರ ವಿಸರ್ಜಿಸಿ ೧೯೮೪ ರ ಡಿಸಂಬರ್‌ನಲ್ಲಿ ಚುನಾವಣೆಗೆ ಹೋಗುತ್ತಾರೆ. ಆಗ ನಡೆದ ಚುನಾವಣೆಯಲ್ಲಿ ೫೪೩ ಸ್ಥಾನಗಳಲ್ಲಿ ೪೧೫ ಸ್ಥಾನ ಗೆಲ್ಲುವ ಮೂಲಕ ಸಾರ್ವತ್ರಿಕ ದಾಖಲೆ ನಿರ್ಮಿಸಿ ಮತ್ತೆ ಪ್ರಧಾನಿಯಾಗುತ್ತಾರೆ. ಮುಂದಿನ ಐದು ವರ್ಷಗಳು ಭಾರತದ ಪಾಲಿಗೆ ಸುವರ್ಣಯುಗ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ, ಭಾರತವನ್ನು ವಿಶ್ವವೇ ಅನುಸರಿಸುವಂತೆ ಮಾಡಿದರು. ಚುನಾವಣೆ ಪ್ರಚಾರ ಸಮಯದಲ್ಲಿ ದೇಶದ ಉದ್ದಗಲ ಸಂಚರಿಸಿ ಅಲ್ಲಿನ ಪ್ರಾದೇಶಿಕ ಸಮಸ್ಯೆಗಳು, ಸಂಸ್ಕöÈತಿ, ಪರಿಸರ, ಜನಜೀವನ ಎಲ್ಲವನ್ನೂ ಅರಿತ ಪರಿಣಾಮ ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಮುಂದಾಗುತ್ತಾರೆ. ಆಗಿನ ಕಾಲದಲ್ಲಿ ರಾಜಕೀಯ ಪಕ್ಷದ ಮುಖಂಡರು ನಡೆಸುವ ಆಯಾರಾಂಗಯಾರಾA ಪ್ರಕ್ರಿಯೆಗಳಿಗೆ ಕಡಿವಾಣ ಹಾಕುವ ಸಲುವಾಗಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತಾರೆ. ಪ್ರಸ್ತುತ ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವಂತಹ ಸಮುದಾಯಗಳ ನಡುವಣ ಘರ್ಷಣೆಗಳು ಈಶಾನ್ಯದ ಭಾರತದ ಬಹುತೇಕ ರಾಜ್ಯಗಳಲ್ಲಿ ನಡೆಯುತ್ತಿದ್ದವು. ಅನೇಕ ಕಡೆಗಳಲ್ಲಿ ಪತ್ಯೇಕತೆಯ ಕೂಗು ಕೇಳಿ ಬರುತ್ತಿದ್ದವು. ಆ ಸಂದರ್ಭದಲ್ಲಿ ರಾಜೀವ್ ಗಾಂಧಿ ಚಾಣಾಕ್ಷ ನಡೆಯನ್ನು ಅನುಸರಿಸಿದರು. ರಾಜೀವ್ ಲೋಂಗೋ ವಾಲ ಒಪ್ಪಂದದ ಮೂಲಕ ಪಂಜಾಬಿನಲ್ಲಿ ತೋರಿದ್ದ ಖಲಿಸ್ತಾನ್ ಚಳುವಳಿಯನ್ನು ಸ್ಥಗಿತಗೊಳಿಸುತ್ತಾರೆ. ಅಸ್ಸಾಂನಲ್ಲಿ ಆಲ್ ಅಸ್ಸಾಂ ಸ್ಟೂಡೆಂಟ್ ಯೂನಿಯನ್ ಮತ್ತು ಆಲ್ ಅಸ್ಸಾಂ ಗಣ ಸಂಗ್ರಾಮ ಪರಿಷತ್ ಗಳು ಪರಸ್ಪರ ಹಿಂಸಾಚಾರ ನಡೆಸುತ್ತಿದ್ದು ಅವರನ್ನು ಸಂಧಾನದ ಮೂಲಕ ಸಮಧಾನಪಡಿಸಿ ಶಾಂತಿ ಸ್ಥಾಪಿಸುತ್ತಾರೆ, ಮಿಜೋರಾಂ ಬಂಡುಕೋರ ನಾಯಕ ಲಾಲ್ಡೆಂಗಾನ ಜೊತೆಗೆ ಮಾತುಕತೆ ನಡೆಸಿ ಮಿಜೋರಾಂ ಒಪ್ಪಂದದ ಮೂಲಕ ಮಿಜೋರಾಂ ಸರ್ವಾಂಗೀಣ ಪ್ರಗತಿಗೆ ಕಾರಣರಾಗುತ್ತಾರೆ.

ತ್ರಿಪುರ ರಾಜ್ಯದಲ್ಲಿ ತ್ರಿಪುರ ನ್ಯಾಷನಲ್ ವಾಲೆಂಟೇರ್ಸ್ ಪ್ರತ್ಯೇಕವಾದ ಮುಂದಿಟ್ಟು ಹಿಂಸಾಚಾರ ನಡೆಸುತ್ತಿದ್ದಾಗ ರಾಜೀವ್ ಗಾಂಧಿ ತ್ರಿಪುರ ಒಪ್ಪಂದದ ಮೂಲಕ ಅಲ್ಲಿನ ಜನತೆಯ ನಡುವೆ ಸಾಮರಸ್ಯ ಬೆಳೆಸುತ್ತಾರೆ. ಗೂರ್ಖಾ ನ್ಯಾಷನಲ್ ಲಿಬರೇಶನ್ ಫ್ರಂಟ್ ನ ನಾಯಕ ಸುಭಾಷ್ ಫೀಸಿಂಗ್ ನೇತೃತ್ವದಲ್ಲಿ ನಡೆಯುತ್ತಿದ್ದ ಗೂರ್ಖಾ ಲ್ಯಾಂಡ್ ಬೇಡಿಕೆಯ ಚಳುವಳಿಯನ್ನು ನಿಯಂತ್ರಿಸಲು ಡಾರ್ಜಿಲಿಂಗ್ ಒಪ್ಪಂದ ಮಾಡಿ ಅಲ್ಲಿಯೂ ಕೂಡ ಶಾಂತಿ ನೆಲೆಸಲು ಕಾರಣರಾದರು.

ಸಾರ್ಕ್ ಶೃಂಗಸಭೆಯ ಅಧ್ಯಕ್ಷತೆ ವಹಿಸಿ ‘ದಾರಿದ್ರö್ಯ, ಅನಕ್ಷರತೆ, ಪೌಷ್ಟಿಕ ಆಹಾರದ ಕೊರತೆ ಮತ್ತು ರೋಗರುಜಿನಗಳನ್ನು ಸಾಮೂಹಿಕವಾಗಿ ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಮೂಲಭೂತ ಉದ್ದೇಶವಾಗಿರಬೇಕು" ಎಂದು ಕರೆ ನೀಡಿದ್ದು ಜಾಗತಿಕ ಮಟ್ಟದಲ್ಲಿ ರಾಜೀವ್ ರವರ ಗೌರವವನ್ನು ಹೆಚ್ಚಿಸಿತು.

೧೯೮೫ರ ಸಪ್ಟೆಂಬರ್ ನಲ್ಲಿ ಶಿಕ್ಷಣದ ಸವಾಲುಗಳು (ಅhಚಿಟಟeಟಿge oಜಿ eಜuಛಿಚಿಣioಟಿ) ದಾಖಲೆಯನ್ನು ಎಲ್ಲಾ ಭಾಷೆಗಳಲ್ಲಿ ಪ್ರಕಟಿಸಿ ದೇಶದ ಪ್ರತಿಯೊಬ್ಬ ನಾಗರಿಕನ ಅಭಿಪ್ರಾಯ ಸಲಹೆ ಸೂಚನೆಗಳನ್ನು ಪಡೆದು ೧೯೮೬ ರಲ್ಲಿ ನ್ಯಾಷನಲ್ ಎಜುಕೇಶನ್ ಪಾಲಿಸಿಯನ್ನು ಜಾರಿಗೊಳಿಸುತ್ತಾರೆ. ಇದರಿಂದ ಶಿಕ್ಷಣದ ಮಟ್ಟ ಸುಧಾರಿಸಿ ಸಾಕ್ಷರತೆಯ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ. ಸ್ಯಾಮ್ ಪಿಟ್ರಾಡೋ ಎಂಬ ತಾಂತ್ರಿಕ ತಜ್ಞನನ್ನು ದೇಶಕ್ಕೆ ಮರಳಿಸಿ ತಾಂತ್ರಿಕ ಕ್ರಾಂತಿ ಮಾಡಿ ಡಿಜಿಟಲ್ ಭಾರತದ ನಿರ್ಮಾಣಕ್ಕೆ ಮುನ್ನುಡಿ ಬರೆಯುತ್ತಾರೆ. ದೇಶ ಕಟ್ಟುವಲ್ಲಿ ಯುವಕರ ಪಾತ್ರ ಮುಖ್ಯ ಎಂಬುದನ್ನು ಮನಗಂಡು ಮತದಾನದ ವಯಸ್ಸಿನ ಮಿತಿಯನ್ನು ೨೧ರಿಂದ ೧೮ ವರ್ಷಕ್ಕೆ ಇಳಿಸಿ ಯುವಕರಿಗೆ ರಾಷ್ಟç ನಿರ್ಮಾಣದಲ್ಲಿ ಆದ್ಯತೆ ನೀಡುತ್ತಾರೆ.

ಕೇವಲ ಐದು ಸಾವಿರದಷ್ಟಿರುವ ಸಂಸದರು, ಶಾಸಕರಿಂದ ದೇಶ ಆಳಲು ಸಾಧ್ಯವಿಲ್ಲ ಎಂದು ಮನಗಂಡು ಅಧಿಕಾರದ ವಿಕೇಂದ್ರೀಕರಣಕ್ಕಾಗಿ ಪಿ.ಕೆ.ತುಂಗನ ನೇತೃತ್ವದ ಸಮಿತಿಯ ಶಿಫಾರಸ್ಸಿನ ಮೇರೆಗೆ ಸಂವಿಧಾನದ ೭೩ ಮತ್ತು ೭೪ನೇ ತಿದ್ದುಪಡಿಗೆ ಕಾರಣರಾಗಿ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ೭ ಲಕ್ಷಕ್ಕೂ ಅಧಿಕ ಮಂದಿ ಅಧಿಕಾರವನ್ನು ಹೊಂದುವ ಅವಕಾಶ ನೀಡಿದರು. ಈ ತಿದ್ದುಪಡಿಯಿಂದ ಶೋಷಿತರು ದುರ್ಬಲರು, ಮಹಿಳೆಯರು ಅವಕಾಶ ಪಡೆಯು ವಂತಾಯಿತು. ಈ ತೀರ್ಮಾನವೇ ಸುಭದ್ರ ಭಾರತದ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿದೆ.

ಪ್ರಜಾಹಿತ ಆಡಳಿತದಿಂದ ಕೀರ್ತಿಗೆ ಭಾಜನರಾಗಿದ್ದ ರಾಜೀವ್ ಗಾಂಧಿಯವರು ತಮಿಳುನಾಡಿನ ಶ್ರೀ ಪೆರಂಬದೂರುನಲ್ಲಿ ೧೯೯೧ರ ಮೇ ೩೧ ರಂದು ಎಲ್.ಟಿ.ಟಿ.ಇ. ಧಾಳಿಗೆ ಬಲಿಯಾದಾಗ ಅವರಿಗೆ ಕೇವಲ ೪೬ ವರ್ಷ ಪ್ರಾಯವಾಗಿತ್ತು. ಮಾಹಿತಿ ತಂತ್ರಜ್ಞಾನ ಮತ್ತು ತಾಂತ್ರಿಕ ಅಭಿವೃದ್ಧಿಗೆ ಸಾಧಕ ರಾಜೀವ್ ನೆನಪು ಚಿರಸ್ಥಾಯಿ.

ತೆನ್ನಿರ ಮೈನಾ, ಅಧ್ಯಕ್ಷರು,

ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆ. ೯೪೪೯೧೫೬೨೧೫