ಸೋಮವಾರಪೇಟೆ, ಆ. ೧೯: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಕ್ಯ, ಗರ್ವಾಲೆ, ಕುಂಬಾರಗಡಿಗೆ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದ್ದು, ಸದ್ಯಕ್ಕೆ ಕೂಂಬಿAಗ್ ಸ್ಥಗಿತಗೊಳಿಸಲಾಗಿದೆ.ನಿನ್ನೆ ರಾತ್ರಿ ವೇಳೆಯಲ್ಲಿ ಗರ್ವಾಲೆ ವ್ಯಾಪ್ತಿಯಲ್ಲಿ ಕೂಂಬಿAಗ್ ನಡೆಸುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸಲಾಗಿತ್ತು. ಆದರೆ ರಾತ್ರಿಯಿಂದ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿರುವ ಹಿನ್ನೆಲೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.ಅರಣ್ಯ ಇಲಾಖೆಯ ಸಿಬ್ಬಂದಿಗಳ ತಂಡ ಕಾಡು, ತೋಟಗಳಲ್ಲಿ ಬೀಡುಬಿಟ್ಟಿರುವ ಮರಿಯಾನೆ ಸೇರಿದಂತೆ ಒಟ್ಟು ೪ ಆನೆಗಳನ್ನು ಅರಣ್ಯಕ್ಕೆ ಅಟ್ಟಲು ಮುಂದಾಗಿದ್ದು, ಸುಮಾರು ೧ ಕಿ.ಮೀ.ನಷ್ಟು ದೂರದವರೆಗೆ ಕೂಂಬಿAಗ್ ಕೈಗೊಳ್ಳಲಾಗಿತ್ತು. ಆದರೆ ಇಂದು ಬೆಳಗ್ಗೆಯಿಂದ ಗರ್ವಾಲೆ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಕಾಡಾನೆಗಳು ಕುಂಬಾರಗಡಿಗೆ ವ್ಯಾಪ್ತಿಯಲ್ಲಿದ್ದು, ಸುತ್ತಮುತ್ತಲಿನ ಮಂದಿ ಎಚ್ಚರಿಕೆಯಿಂದಿರಬೇಕೆAದು ಸೂಚಿಸಲಾಗಿದೆ.

ಮಳೆ ಕಡಿಮೆಯಾದ ನಂತರ ಸ್ಥಳೀಯರಿಗೆ ಮತ್ತೊಮ್ಮೆ ಮಾಹಿತಿ ನೀಡಿ ಕೂಂಬಿAಗ್ ನಡೆಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಚೇತನ್ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.