ಮಡಿಕೇರಿ, ಆ. ೧೯: ರಾಷ್ಟಿçÃಯ ಕ್ರೀಡಾ ದಿನಾಚರಣೆ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಗಸ್ಟ್, ೨೮ ರಂದು ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ.

ತಾ. ೨೮ ರಂದು ಬೆಳಿಗ್ಗೆ ೭.೧೫ ಗಂಟೆಗೆ ಗುಡ್ಡ ಗಾಡು ಓಟವನ್ನು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರವೇಶ ಶುಲ್ಕ ಇರುವುದಿಲ್ಲ. ೧೪ ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ೧ ಕಿ.ಮೀ. ಓಟ, ಮುಕ್ತ ಸ್ಪರ್ಧೆ(ಪುರುಷ ಮತ್ತು ಮಹಿಳೆಯರಿಗೆ) ೫ ಕಿ.ಮೀ. ಓಟ. ನಂತರ ೧೮ ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಡಬಲ್ಸ್ ಕ್ರೀಡೆ, ಮುಕ್ತ ಸ್ಪರ್ಧೆ(ಪುರುಷ ಮತ್ತು ಮಹಿಳೆಯರಿಗೆ) ಸಿಂಗಲ್ಸ್/ ಡಬಲ್ಸ್ ಕ್ರೀಡಾ ಸ್ಪರ್ಧೆ ನಡೆಯಲಿದೆ.

ಷಟಲ್ ಬ್ಯಾಡ್ಮಿಂಟನ್ ಆಟಗಾರರು ರಾಕೇಟ್‌ನ್ನು ತಾವೇ ತರಬೇಕು ಹಾಗೂ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರವೇಶ ಶುಲ್ಕ ಇರುವುದಿಲ್ಲ. ಈ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ.೦೮೨೭೨-೨೨೦೯೮೬, ಗುಡ್ಡಗಾಡು ಓಟ ೯೪೮೦೦೩೨೭೧೨ ಮತ್ತು ಷಟಲ್ ಬ್ಯಾಡ್ಮಿಂಟನ್ ತರಬೇತುದಾರರು ೯೪೮೦೪೪೩೦೧೯ ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.