ಪೊನ್ನಂಪೇಟೆ, ಆ. ೧೯: ಹಾಲುಗುಂದ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಪಂದಿಕAಡ ದಿನೇಶ್ (ಕುಶ) ಮತ್ತು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಪಿ. ಎ. ಹನೀಫ್ ಅವರನ್ನು ಕೊಂಡAಗೇರಿಯ ಬುಲ್ಲೆಟ್ ಫ್ರೆಂಡ್ಸ್ ತಂಡದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೊಂಡAಗೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವರಿಬ್ಬರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮಗಳಲ್ಲಿ ಹಾಲುಗುಂದ ಗ್ರಾ.ಪಂ. ಸದಸ್ಯ ಅಬ್ದುಲ್ ರಹಿಮಾನ್ (ಅಂದಾಯಿ), ಕೆದಮುಳ್ಳೂರು ಗ್ರಾ.ಪಂ. ಸದಸ್ಯ ಎಂ.ಎA. ಇಸ್ಮಾಯಿಲ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಕೋಳುಮಂಡ ರಫೀಕ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಆಲೀರ ಎಂ. ರಶೀದ್, ಬೈರಂಬಾಡದ ಕಾಫಿ ಬೆಳಗಾರ ಮುಕ್ಕಾಟಿರ ನಂದ, ಕೊಂಡAಗೇರಿ ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ಪಿ.ಎಚ್. ಝಕರಿಯಾ, ಕಾರ್ಯಕ್ರಮದ ಆಯೋಜಕರಾದ ಶಾಮೀರ್, ಹನೀಫ್, ರಫೀಕ್, ಸಲಾಂ ಮೊದಲಾದವರು ಉಪಸ್ಥಿತರಿದ್ದರು.