ವೀರಾಜಪೇಟೆ, ಆ. ೧೯: ವೀರಾಜಪೇಟೆ ಸಮೀಪದ ಬೇಟೋಳಿ ರಾಮನಗರದ ರಾಷ್ಟಿçÃಯ ಸ್ವಯಂ ಸೇವಕ ಸಂಘ (ರಾಮನಗರ ಮಂಡಲ)ದ ವತಿಯಿಂದ ಬೇಟೋಳಿ ಗ್ರಾಮದ ಬಿ.ಆರ್. ಉದಯ ಶಂಕರ್ ಅವರ ಗದ್ದೆ ಯಲ್ಲಿ ತಾಲೂಕು ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು.ಸ್ವಯಂ ಸೇವಕ ಸಂಘದ ವಿರಾಜಪೇಟೆ ತಾಲೂಕು ವಿವಿಧ ಮಂಡಲದ ಸ್ವಯಂ ಸೇವಕರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ, ಕಬಡ್ಡಿ, ಓಟ, ಮಡಿಕೆ ಒಡೆಯುವುದು, ಕಾಲು ಕಟ್ಟಿ ಓಟ ಮುಂತಾದ ಗ್ರಾಮೀಣ ಕ್ರೀಡಾಕೂಟಗಳು ನಡೆಯಿತು.
ಗದ್ದೆಯ ಸುತ್ತಲೂ ಕೇಸರಿಮಯವಾಗಿತ್ತು. ಸಣ್ಣ ಮಕ್ಕಳಿಂದ ಹಿಡಿದು ಮದ್ಯ ವಯಸ್ಕರೂ ಸಹ ಕ್ರೀಡಾಕೂಟದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಬೇಟೋಳಿ ಮಂಡಲದ ಸ್ವಯಂ ಸೇವಕರು, ವಿರಾಜಪೇಟೆ ತಾಲೂಕಿನ ಹಲವೆಡೆಯಿಂದ ಬಂದಿದ್ದ ಸ್ವಯಂ ಸೇವಕರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.