ಮಡಿಕೇರಿ, ಆ. ೧೮ : ಭೌಗೋಳಿಕವಾಗಿ ವಿಭಿನ್ನವಾಗಿದ್ದು ಮಲೆನಾಡು ಪ್ರದೇಶವಾಗಿರುವ ಕೊಡಗು ಕೃಷಿ ಪ್ರಧಾನ ಜಿಲ್ಲೆಯೂ ಆಗಿದೆ. ಆಗುಂಬೆ, ಚಿರಾಪುಂಜಿಯ ಮಾದರಿಯಲ್ಲಿ ಕೊಡಗೂ ಸಹ ಮಳೆಗಾಲಕ್ಕೆ ಹೆಸರುವಾಸಿಯಾಗಿದೆ. ಬಹುತೇಕ ಜೂನ್ ತಿಂಗಳಿನಿAದ ಸೆಪ್ಟೆಂಬರ್ ತನಕವೂ ಕೊಡಗಿನಲ್ಲಿ ಈ ಹಿಂದಿನ ವರ್ಷಗಳಲ್ಲಿ ಬಿಸಿಲಿನ ವಾತಾವರಣವೇ ಕಂಡು ಬರುತ್ತಿರಲಿಲ್ಲ. ಈ ನಾಲ್ಕು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಧಾರಣವಾಗಿ ೧೫೦ ಇಂಚುಗಳಿಗೂ ಅಧಿಕ ಮಳೆ ಸುರಿಯುವುದು ಸಹಜವಾಗಿತ್ತು. ಏನೇ ಆದರೂ ಕೊಡಗಿನ ಜನತೆ ಈ ನೈಸರ್ಗಿಕ ಸನ್ನಿವೇಶವನ್ನು ಧೈರ್ಯದಿಂದಲೇ ಎದುರಿಸಿಕೊಂಡು ಬರುತ್ತಿದ್ದರಲ್ಲದೆ ತಮ್ಮ ಕೃಷಿ ಕಾಯಕವನ್ನೂ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದರು.
ಇದೀಗ ಜಿಲ್ಲೆಯಲ್ಲಿ ಬರಗಾಲದ ಆತಂಕ ಮೂಡತೊಡಗಿದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ವಿಳಂಬಗೊAಡು ಭತ್ತದ ನಾಟಿ ಕಾರ್ಯ ಕೂಡ ತಡವಾಗಿದೆ. ಜುಲೈ ಮಧ್ಯ ಭಾಗದಲ್ಲಿ ಸುರಿದ ಮಳೆಯಿಂದಾಗಿ ಖುಷಿ ಪಟ್ಟ ರೈತರು ಭತ್ತದ ನಾಟಿ ಕಾರ್ಯ ಪ್ರಾರಂಭಿಸಿದ್ದರು.
ಇನ್ನು ಕೂಡ ಭತ್ತದ ಬೆಳೆ ಕಾರ್ಯ ಪೂರ್ಣಗೊಂಡಿರಲಿಲ್ಲ. ಈ ನಡುವೆ ಮತ್ತೆ ತೀವ್ರ ಬಿಸಿಲಿನ ವಾತಾವರಣದಿಂದಾಗಿ ನಾಟಿಯಾದ ಗದ್ದೆಗಳು ಒಣಗುವುದರೊಂದಿಗೆ ಇನ್ನೂ ಬಹಳಷ್ಟು ಪ್ರದೇಶಗಳಲ್ಲಿ ಆಗಬೇಕಿರುವ ನಾಟಿ ಕಾರ್ಯಗಳು ಸ್ಥಗಿತಗೊಂಡಿವೆ. ಈ ನಡುವೆ ಕಾಫಿ ಮತ್ತು ಇನ್ನಿತರ ಬೆಳೆಗಳಿಗೂ ಈ ವಾತಾವರಣ ಧಕ್ಕೆಯುಂಟು ಮಾಡಲಿದೆ.
ಇದೇ ವಾತಾವರಣ ಮುಂದುವರೆದರೆ ಜಿಲ್ಲೆಯಲ್ಲಿ ಶೀಘ್ರದಲ್ಲಿಯೇ ಕುಡಿಯುವ ನೀರಿಗೂ ಕೂಡ ಬರ ಉಂಟಾಗುವ ಸಾಧ್ಯತೆ ಇರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಇನ್ನೂ ಕೂಡ ಈ ವರ್ಷ ಜಲವೇ ಹುಟ್ಟಿಲ್ಲ. ನದಿ ಮೂಲಗಳು ಬತ್ತುತ್ತಿರುವ ಸನ್ನಿವೇಶ ಎದುರಾಗಿದೆ. ಮೊದಲೇ ಭತ್ತದ ನಾಟಿ ಈ ವರ್ಷ ವಿಳಂಬವಾಗಿ ಪ್ರಾರಂಭಗೊAಡಿದೆ ಆದರೆ, ಇತೀಚಿನ ಕೆಲ ವರ್ಷಗಳಿಂದ ಸಹಜ ಮಳೆಗಾಲದ ವಾತಾವರಣದಲ್ಲಿ ಭಾರೀ ಬದಲಾವಣೆಯಾಗುತ್ತಿದೆ. ಅದರಲ್ಲೂ ೨೦೧೮ ರಿಂದ ಇಲ್ಲಿನ ಪರಿಸ್ಥಿತಿಯೇ ವಿಭಿನ್ನ ಎಂಬAತಾಗಿದೆ. ೨೦೧೮-೨೦೧೯ರಲ್ಲಿ ಆಗಸ್ಟ್ ೧೫ರ ಸ್ವಾತಂತ್ರೊö್ಯÃತ್ಸವ ಸಮಾರಂಭವನ್ನೇ ಆಯೋಜಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿತ್ತು. ಆದರೆ ೨೦೨೩ರಲ್ಲಿ ಸುಡು ಬಿಸಿಲಿನ ನಡುವೆ ಸ್ವಾತಂತ್ರö್ಯ ದಿನಾಚರಣೆ ನಡೆದಿದೆ. ಇದು ಒಂದೆಯಾದರೆ ಆಗಸ್ಟ್ ೧೭ರಂದು ಕೊಡಗಿನ ಮಳೆ ದೇವರು ಎಂದೇ ಪ್ರಸಿದ್ಧಿಯಾಗಿರುವ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ವಿವಿಧ ಸಂಘ-ಸAಸ್ಥೆಗಳ ಸಹಕಾರದೊಂದಿಗೆ ಮಳೆಗಾಗಿ ಪ್ರಾರ್ಥಿಸಿ ಸಾಮೂಹಿಕ ಪ್ರಾರ್ಥನೆಯನ್ನು ನೆರವೇರಿಸಿರುವ ಅನಿವಾರ್ಯತೆ ವಿಭಿನ್ನತೆಗೆ ಸಾಕ್ಷಿಯಾಗಿದೆ.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತಲೂ ಸರಿ ಸುಮಾರು ಶೇಕಡ ೫೦ರಷ್ಟು ಮಳೆಯ ಕೊರತೆ ಎದುರಾಗಿದೆ. ಮುಂಗಾರು ಕ್ಷೀಣವಾಗಿರುವುದು ಈ ವರ್ಷ ಹಲವು ಸಮಸ್ಯೆಗಳಿಗೆ ಎಡೆ ಮಾಡುತ್ತಿರುವ ಆತಂಕ ಈ ಮಲೆನಾಡು ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಈತನಕ ಬಹುತೇಕ ಶೇ. ೮೦ಕ್ಕೂ ಅಧಿಕ ಕೃಷಿ ಪೂರ್ಣಗೊಂಡಿರಬೇಕಿತ್ತು. ಆದರೆ ಇದು ನೆನೆಗುದಿಯಲ್ಲಿದೆ. ಹಲವಾರುÄ ಕಡೆ ಗದ್ದೆಗಳಲ್ಲಿ ನೀರಿಲ್ಲದೆ ಸಮಸ್ಯೆಯಾಗಿದ್ದರೆ, ಕುಡಿಯುವ ನೀರಿನ ಜನಮೂಲಗಳೂ ಬತ್ತುತ್ತಿವೆ. ನದಿ-ತೋಡುಗಳಲ್ಲಿ ನೀರಿನ ಪ್ರಮಾಣ ಮಳೆಗಾಲದ ಈ ಅವಧಿಯಲ್ಲೇ ಕ್ಷೀಣಗೊಳ್ಳುತ್ತಿವೆ. ಇಂತಹ ವಾತಾವರಣದ ನಡುವೆ ಜಿಲ್ಲೆಯ ವಿವಿಧೆಡೆಗಳಲ್ಲಿ ಇದೀಗ ಎದುರಾಗುತ್ತಿರುವ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ‘ಶಕ್ತಿ’ ಇಲ್ಲಿ ಮಾಡಿದೆ.(ಮೊದಲ ಪುಟದಿಂದ) ಕುಶಾಲನಗರ : ಮುಂಗಾರು ಮಳೆ ಬೆನ್ನಲ್ಲೇ ಕುಶಾಲನಗರ ತಾಲೂಕಿನ ಸುತ್ತಮುತ್ತ ಗ್ರಾಮಗಳಲ್ಲಿ ರೈತಾಪಿ ವರ್ಗ ಜುಲೈ ತಿಂಗಳಲ್ಲಿ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಇದೀಗ ಮಳೆಯಾಶ್ರಿತ ಬೆಳೆಯಾದ ಭತ್ತದ ಗದ್ದೆ ಕೆಲಸ ಕಾರ್ಯಗಳು ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಈ ಬೆಳವಣಿಗೆಯಿಂದ ಈ ಭಾಗದ ರೈತಾಪಿ ವರ್ಗ ಆಕಾಶದತ್ತ ಮುಖ ಮಾಡುವುದರೊಂದಿಗೆ ಸಂಪೂರ್ಣ ಕಂಗಲಾಗಿದ್ದಾರೆ.
ಕುಶಾಲನಗರದ ಸಮೀಪದ ಹೆಬ್ಬಾಲೆ, ಶಿರಂಗಾಲ, ಸಿದ್ದಲಿಂಗಪುರ, ಹಾರಂಗಿ ನೆರೆಯ ಕೊಪ್ಪ ಆವರ್ತಿ ಗ್ರಾಮಗಳ ಪ್ರದೇಶಗಳು ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಮುಸುಕಿನ ಜೋಳ, ಭತ್ತದ ಕೃಷಿಯಲ್ಲಿ ರೈತರು ಸನ್ನದ್ಧರಾಗಿದ್ದ ದೃಶ್ಯ ಕಂಡು ಬಂದಿತ್ತು.
ರೈತಾಪಿ ವರ್ಗ ತಮ್ಮ ಹೊಲಗಳ ಹೆಚ್ಚಿನ ಪ್ರಮಾಣದಲ್ಲಿ ಮುಸುಕಿನ ಜೋಳ ಬಿತ್ತನೆ ಕಾರ್ಯ ನಡೆಸಿದ್ದು ಕಳೆದ ಮೂರು ವಾರಗಳಿಂದ ಮಳೆಯ ಕೊರತೆಯಿಂದ ಕಂಗಾಲಾಗಿರುವುದು ಕಂಡು ಬಂದಿದೆ. ಅಶ್ಲೇಷ ಸೇರಿ ವಿವಿಧ ನಕ್ಷತ್ರಗಳ ಮಳೆಗಳು ಭೂಮಿಗೆ ಬರದೆ ಕಣ್ಮರೆಯಾಗಿವೆ. ಕಳೆದ ತಿಂಗಳ ಮಳೆಯ ತತ್ತರದ ನಡುವೆ ಈ ಭಾಗದ ರೈತರು ತಮ್ಮ ಬೆಳೆಗಳ ನಡುವೆ ಕಳೆ ಕೀಳುವುದರ ಜೊತೆಗೆ ಗೊಬ್ಬರ ನೀಡುವುದರಲ್ಲಿ ತಲ್ಲೀನರಾಗಿದ್ದರು.
ಇದರೊಂದಿಗೆ ಮಳೆ ಆಶ್ರಿತ ಮತ್ತು ಹಾರಂಗಿ ಅಣೆಕಟ್ಟು ನೀರಿನ ಅಚ್ಚುಕಟ್ಟು ವ್ಯಾಪ್ತಿಯ ನೂರಾರು ಎಕರೆ ಮಳೆನೀರು ಅವಲಂಬಿತ ಪ್ರದೇಶಗಳಲ್ಲಿ ಭತ್ತದ ಬಿತ್ತನೆಗೆ ಸಸಿಮುಡಿ ತಯಾರಿ ನಡೆಯುತ್ತಿತ್ತು. ಆಗಸ್ಟ್ ತಿಂಗಳ ನಾಟಿ ಕಾರ್ಯದ ಯೋಜನೆಗಳು ರೈತಾಪಿ ವರ್ಗಗಳ ನಡುವೆ ರೂಪಿತಗೊಂಡಿದ್ದವು.
ಕುಶಾಲನಗರ ತಾಲೂಕಿನ ವ್ಯಾಪ್ತಿಯಲ್ಲಿ ೧೭೫೦ ಎಕರೆ ಪ್ರದೇಶದಲ್ಲಿ ಭತ್ತ ಕೃಷಿ ಈಗಾಗಲೇ ನಡೆದಿದ್ದು, ಇನ್ನುಳಿದಂತೆ ಅರೆ ನೀರಾವರಿ ಬೆಳೆಗಳಾದ ಮುಸುಕಿನ ಜೋಳ ಸುಮಾರು ೨೧೦೦ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದೆ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಯಾದವ ಬಾಬು ಶಕ್ತಿಗೆ ಮಾಹಿತಿ ನೀಡಿದ್ದಾರೆ. ಈ ಬೆಳೆಗಳಿಗೆ ಈಗಾಗಲೇ ಹಾರಂಗಿ ಅಣೆಕಟ್ಟಿನಿಂದ ಕಾಲುವೆ ಮೂಲಕ ನೀರು ಬಿಡುಗಡೆಗೊಳಿಸಲಾಗಿದೆ.
ಮಳೆಯಾಶ್ರಿತ ಭತ್ತ ಬೆಳೆಗೆ ಮಿತವಾಗಿ ನೀರಿನ ಬಳಕೆ ಮಾಡುವ ಮೂಲಕ ಜೊತೆಗೆ ಇತರೆ ಮೂಲಗಳಿಂದ ನೀರು ಬಳಸಿ ಭತ್ತ ಕೃಷಿ ಚಟುವಟಿಕೆಗಳನ್ನು ಮುಗಿಸಬಹುದು ಎಂದು ಅವರು ಹೇಳಿದ್ದಾರೆ.
ಮುಸುಕಿನ ಜೋಳಕ್ಕೆ ಕಳೆದ ಬಾರಿ ದರ ಅತಿ ಕಡಿಮೆಯಾಗಿದ್ದು ಈ ಬಾರಿ ಹೆಚ್ಚಾಗುವ ಸಾಧ್ಯತೆಯ ಕನಸು ಹೊತ್ತಿದ್ದ ರೈತಾಪಿ ವರ್ಗ ಇದೀಗ ಆತಂಕಕ್ಕೆ ಈಡಾಗಿರುವುದು ಕಾಣಬಹುದು.
ತೋಟಗಾರಿಕಾ ಬೆಳೆಗಳಾದ ಶುಂಠಿಗೆ ಮಾತ್ರ ಈ ಬಾರಿ ಬಂಪರ್ ಬೆಲೆ ದೊರಕುವ ಭರವಸೆ ಹೊಂದಿದ್ದ ಶುಂಠಿ ಕೃಷಿಕ ಕೂಡ ಮಳೆಯ ಕೊರತೆಯ ನಡುವೆ ಕಂಗಲಾಗಿದ್ದಾನೆ. ಈ ಬೆಳೆಗಳ ನಡುವೆ ಕೆಸ, ಗೆಣಸು ಮತ್ತಿತರ ಬೆಳೆಗಳನ್ನು ಕೂಡ ಹೆಚ್ಚಿನ ಪ್ರದೇಶಗಳಲ್ಲಿ ಬೆಳೆಯಲಾಗಿದೆ.
ಮಳೆ ಕೊರತೆ ನಡುವೆ ಹಾರಂಗಿ ಜಲಾಶಯದಿಂದ ಅರೆಕಾಲಿಕ ಬೆಳೆಗಳಿಗೆ ಅಚ್ಚುಕಟ್ಟು ಪ್ರದೇಶಗಳ ಕಾಲುವೆ ಮೂಲಕ ನೀರು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿರುವ ಹಾರಂಗಿ ಅಣೆಕಟ್ಟು ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ರಘುಪತಿ ಕೆ.ಕೆ. ಕಾಲುವೆಗಳ ಮೂಲಕ ೧೫ ದಿನಗಳಿಗೊಮ್ಮೆ ನೀರು ಬಿಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಈ ನೀರನ್ನು ಸಮರ್ಪಕವಾಗಿ ಅರೆಕಾಲಿಕ ಬೆಳೆಗಳ ರೈತಾಪಿ ವರ್ಗ ಬಳಸಿಕೊಳ್ಳಬೇಕು ಎಂದು ಶಕ್ತಿ ಪ್ರತಿನಿಧಿಯೊಂದಿಗೆ ಹೇಳಿದ್ದಾರೆ.
ತಾಲೂಕಿನಾದ್ಯಂತ ಸುಮಾರು ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು, ರೈತಾಪಿ ವರ್ಗ ಮಳೆಯ ಕೊರತೆ ನಡುವೆ ತಮ್ಮ ಬತ್ತದ ಗದ್ದೆ ಕೆಲಸಗಳ ಚಟುವಟಿಕೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಿರೋದು ಗೋಚರಿಸಿದೆ.
ಆಗಸ್ಟ್ ತಿಂಗಳಲ್ಲಿ ಸುರಿಯುವ ಮಳೆಯಲ್ಲಿ ಬಹುತೇಕ ಭತ್ತ ಕೃಷಿ ನಡೆಯುತ್ತಿತ್ತು ಎನ್ನುತ್ತಾರೆ ಸ್ಥಳೀಯ ರೈತ ಸಣ್ಣಪ್ಪಾಜಿ ಎಂಬವರು.
ಎಕರೆಗಟ್ಟಲೆ ಭತ್ತ ಕೃಷಿ ಮಾಡುತ್ತಿದ್ದ ಆವರ್ತಿ ಗ್ರಾಮದ ವಿಶ್ವೇಶ್ವರಯ್ಯ ಅವರು ಈ ಬಾರಿ ಮಳೆಯ ಕೊರತೆಯಿಂದ ತಮ್ಮ ಗದ್ದೆಯನ್ನು ಭತ್ತ ಕೃಷಿ ಬೆಳೆಯದೇ ಪಾಳು ಬಿಟ್ಟಿರೋದು ಕಂಡು ಬಂದಿದೆ. ಹಾರಂಗಿ ಅಣೆಕಟ್ಟಿನಿಂದ ಕಟ್ ಪದ್ಧತಿಯಲ್ಲಿ ನೀರು ಬಿಡುಗಡೆಗೊಳಿಸಿದರೂ ಕಾಲುವೆಯ ಕೊನೆತನಕ ಇನ್ನೂ ಹರಿದು ಬಂದಿಲ್ಲ ಎನ್ನುತ್ತಾರೆ ಕಾಲುವೆಯ ಕೊನೆ ಭಾಗದ ರೈತರು.
ಜಲಾಶಯದಲ್ಲಿ ನೀರಿನ ಒಳಹರಿವಿನ ಕೊರತೆ ಕಂಡುಬAದಿದ್ದು ಅಣೆಕಟ್ಟು ಅಚ್ಚುಕಟ್ಟು ವ್ಯಾಪ್ತಿಯ ಕಾಲುವೆಗಳ ಮೂಲಕ ಹರಿದು ಬರುತ್ತಿರುವ ನೀರನ್ನು ಸಮರ್ಪಕವಾಗಿ ಮಿತವಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಹಾಗೂ ಹಾರಂಗಿ ಯೋಜನಾ ವೃತ್ತದ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ. ಮಂಥರ್ ಗೌಡ ರೈತರಲ್ಲಿ ಮನವಿ ಮಾಡಿದ್ದಾರೆ.
ಈ ಸಾಲಿನಲ್ಲಿ ಇದುವರೆಗೆ ಸರಾಸರಿ ೩೯೦ ಮಿ.ಮೀ ಮಳೆ ಸುರಿದಿದ್ದು ಕಳೆದ ಬಾರಿಗಿಂತ ೨೩೦ ಮಿ.ಮೀ ಪ್ರಮಾಣದ ಮಳೆ ಕೊರತೆ ಆಗಿರುವುದು ದಾಖಲೆಗಳಲ್ಲಿ ಕಂಡು ಬಂದಿದೆ. ಈ ಕಾರಣದಿಂದ ತಾಲೂಕಿನ ಹೆಬ್ಬಾಲೆ ಮತ್ತು ಇತರ ಗ್ರಾಮಗಳ ವ್ಯಾಪ್ತಿಯಲ್ಲಿ ಬಹುತೇಕ ಕಡೆ ತೋಟಗಾರಿಕಾ ಬೆಳೆಗಳಾದ ಶುಂಠಿ ಮತ್ತಿತರ ಬೆಳೆಗಳಿಗೆ ಕಳೆದ ಹಲವು ದಿನಗಳಿಂದ ಕೊಳವೆ ಬಾವಿಗಳಿಂದ ಸ್ಪಿçಂಕ್ಲರ್ ಮೂಲಕ ನೀರು ಹಾಯಿಸುತ್ತಿರುವ ದೃಶ್ಯವೂ ಬಹುತೇಕ ಕಡೆಗಳಲ್ಲಿ ಗೋಚರಿಸುತ್ತಿದೆ.
ಒಟ್ಟಾರೆ ಈ ಬಾರಿಯ ಮಳೆಯ ಕೊರತೆಯಿಂದ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶಗಳಲ್ಲಿ ನಾಟಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಈಗಾಗಲೇ ಮಾಡಿರುವ ಪೈರನ್ನು ಉಳಿಸುವ ನಿಟ್ಟಿನಲ್ಲಿ ಕೊಳವೆಬಾವಿ ಮತ್ತಿತರ ವ್ಯವಸ್ಥೆಗಳಿಂದ ನೀರನ್ನು ಹಾಯಿಸಿ ಬೆಳೆ ಉಳಿಸುವ ಪ್ರಯತ್ನ ಸಾಗಿದೆ. ಮುಸುಕಿನ ಜೋಳ ಇದೀಗ ಹೂ ಬಿಟ್ಟು ರೈತರ ಕೈಗೆ ಬೆಳೆ ಬರುವ ಮುನ್ನವೇ ಒಣಗಿ ಹೋಗುವ ದುಸ್ಥಿತಿ ಎದುರಾಗಿದೆ . ತೋಟಗಾರಿಕಾ ಬೆಳೆಗಳಾದ ಶುಂಠಿ, ಬಾಳೆ, ಕಬ್ಬು ಮತ್ತಿತರ ತರಕಾರಿ ಕೃಷಿ ಚಟುವಟಿಕೆಗಳು ನೀರಿನ ಕೊರತೆ ನಡುವೆ ಹಾನಿಗೆ ಒಳಗಾಗುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ಸ್ಪಿçAಕ್ಲರ್ ಬಳಕೆ ಮಾಡುವ ಮೂಲಕ ಕೃಷಿ ಚಟುವಟಿಕೆ ನಡೆಸುವಂತೆ ಕೃಷಿ ಅಧಿಕಾರಿ ಯಾದವ ಬಾಬು ರೈತರಿಗೆ ಸಲಹೆ ನೀಡಿದ್ದು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗುವುದು ಬೇಡ, ಈ ತಿಂಗಳ ಅಂತ್ಯದೊಳಗೆ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು 'ಶಕ್ತಿ' ಮೂಲಕ ರೈತರಿಗೆ ಭರವಸೆ ತುಂಬಿದ್ದಾರೆ.ಗೋಣಿಕೊಪ್ಪಲು : ಪ್ರಸ್ತುತ ವರ್ಷದಲ್ಲಿ ಮಳೆರಾಯ ಕೈಕೊಟ್ಟ ಹಿನ್ನೆಲೆಯಲ್ಲಿ ಭತ್ತ ಬೆಳೆಯುವ ರೈತ ಇದೀಗ ಸಂಕಷ್ಟ ಎದುರಿಸುವಂತಾಗಿದೆ. ಮಳೆಯನ್ನೇ ಆಧಾರವಾಗಿಟ್ಟುಕೊಂಡು ಭತ್ತದ ಗದ್ದೆಗಳನ್ನು ಹಸನುಗೊಳಿಸಿ, ನೀರು ನಿಲ್ಲಿಸಿ ವನ್ಯ ಪ್ರಾಣಿಗಳ ಉಪಟಳಗಳ ನಡುವೆ ಬಿತ್ತನೆ ನಡೆಸಿ ನಾಟಿ ಕಾರ್ಯ ನಡೆಸಿದ ರೈತನಿಗೆ ಇದೀಗ ಭತ್ತದ ಬೆಳೆಗೆ ಬೇಕಾದ ಮಳೆ ಇಲ್ಲದೆ ಕಂಗಾಲಾಗಿದ್ದಾನೆ.
ಅನುಕೂಲಸ್ಥ ರೈತರು ತಮ್ಮ ಭತ್ತದ ಗದ್ದೆಗಳನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವುದರಿAದ ಭತ್ತದ ಗದ್ದೆಗೆ ಸಮೀಪವಿರುವ ಕೆರೆಗಳಿಂದ ನೀರನ್ನು ಭತ್ತದ ಗದ್ದೆಗಳಿಗೆ ಹಾಯಿಸುತ್ತಿದ್ದಾರೆ. ಇದರಿಂದ ಒಂದಷ್ಟು ನೀರಿನಾಂಶ ಬೆಳೆಗೆ ಸಿಗುತ್ತಿದೆಯಾದರೂ ಮಳೆ ನೀರಷ್ಟು ಸಮೃದ್ಧವಾಗಿ ಭತ್ತದ ಗದ್ದೆಯನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಸಣ್ಣ ರೈತರು ತಮ್ಮ ಭತ್ತದ ಭೂಮಿಯಲ್ಲಿ ನಾಟಿ ಕಾರ್ಯ ಮಾಡಿದ್ದರೂ ನೀರಿಲ್ಲದೆ ಭೂಮಿಯು ಒಣಗಲಾರಂಭಿಸಿದೆ. ಇದರಿಂದ ಮುಂದೇನು.? ಎಂಬ ಚಿಂತೆ ರೈತರನ್ನು ಕಾಡುತ್ತಿದೆ.
ಪೊನ್ನಂಪೇಟೆ ಸಮೀಪ ಹುದೂರು ಗ್ರಾಮದ ಪ್ರಗತಿಪರ ರೈತ ರವಿಶಂಕರ್ ಅವರು ೩೦ ಎಕರೆ ಭೂಮಿಯಲ್ಲಿ ಭತ್ತ ನಾಟಿಯನ್ನು ವಿವಿಧ ತಳಿಯ ಮೂಲಕ ಬೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಮಳೆ ನೀರಿನ ಸಮಸ್ಯೆ ಇವರನ್ನು ಕಾಡುತ್ತಿದೆ. ಸಮೀಪವಿರುವ ಕೆರೆಯಿಂದ ಭತ್ತದ ಗದ್ದೆಗಳಿಗೆ ನೀರನ್ನು ಹಾಯಿಸುವ ಮೂಲಕ ಭೂಮಿಯನ್ನು ಉಳಿಸಿಕೊಳ್ಳುವ ಅನಿವಾರ್ಯತೆಗೆ ಇವರು ಸಿಲುಕಿದ್ದಾರೆ.
ಭತ್ತದ ಗದ್ದೆಗೆ ಸೆಪ್ಟೆಂಬರ್ ಕೊನೆಯವಾರದವರೆಗೂ ವಾರಕ್ಕೆ ಕನಿಷ್ಟ ಒಂದು ಇಂಚು ಮಳೆ ಅನಿವಾರ್ಯವಾಗಿದೆ. ಪ್ರಸ್ತುತ ಸಾಲಿನಲ್ಲಿ ಈ ಮಳೆಯನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ದ.ಕೊಡಗಿನಲ್ಲಿ ಬೆಳೆದಿರುವ ಭತ್ತದ ಗದ್ದೆಗಳಲ್ಲಿ ಹಾಕಿದ ಪೈರುಗಳನ್ನು ಉಳಿಸಿಕೊಂಡರೂ ಮಳೆಯ ಕೊರತೆಯಿಂದಾಗಿ ಶೇ.೫೦ರಷ್ಟು ಫಸಲನ್ನು ಮಾತ್ರ ನಿರೀಕ್ಷಿಸಬಹುದಾಗಿದೆ ಎಂದು ಪ್ರಗತಿಪರ ರೈತ ರವಿಶಂಕರ್ ತಮ್ಮ ಅನುಭವದ ಮಾತನ್ನು ಹಂಚಿಕೊAಡಿದ್ದಾರೆ.
ಪ್ರತಿವರ್ಷ ಉತ್ತಮ ಮಳೆಯಾಗುತ್ತಿತ್ತು. ನದಿ, ತೊರೆಗಳು ತುಂಬಿ ತುಳುಕುತ್ತಿದ್ದವು. ಈ ಭಾರಿ ಬಹುತೇಕ ನದಿ, ತೊರೆಗಳಲ್ಲಿ ನೀರಿನ ಹರಿವು ತೀರಾ ಕಡಿಮೆಯಾಗಿದೆ. ಕಾಫಿ ಹಾಗೂ ಕರಿಮೆಣಸಿಗೆ ನೀರಿನ ಅವಶ್ಯಕತೆಯಿದ್ದು ಈ ಬೆಳೆಗಳು ಕೂಡ ರೈತನ ಕೈ ಹಿಡಿಯುವ ಹಂತದಲ್ಲಿ ಸಮಸ್ಯೆಯಾಗುವ ಆತಂಕ ದೂರವಿಲ್ಲ.
ಒಟ್ಟಾಗಿ ಈ ಬಾರಿಯ ಮಳೆರಾಯ ನಿರೀಕ್ಷಿತ ಮಟ್ಟದಲ್ಲಿ ಸುರಿಯದೇ ಇರುವುದರಿಂದ ಜಲ ಎದ್ದಿರುವುದು ಎಲ್ಲಿಯೂ ಕೂಡ ಕಂಡು ಬರುತ್ತಿಲ್ಲ. ಭೂಮಿಗೆ ಇಂಗುವಷ್ಟು ನೀರು ಕೂಡ ಪೂರ್ತಿಯಾಗಿ ಲಭಿಸಿಲ್ಲ. ಇದರಿಂದಾಗಿ ಮುಂದಿನ ಕೆಲವು ತಿಂಗಳುಗಳಲ್ಲಿ ಕುಡಿಯುವ ನೀರಿಗೂ ಸಂಚಕಾರ ಬಂದರೂ ಅಚ್ಚರಿ ಇಲ್ಲ. ಇದೇ ಮೊದಲ ಬಾರಿಗೆ ಮಳೆರಾಯನನ್ನು ರೈತರು, ಬೆಳೆಗಾರರು ಹಾಗೂ ನಾಗರಿಕರು ಎದುರು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಭತ್ತದ ಗದ್ದೆಯಲ್ಲಿ ವಿಪರೀತ ಕಳೆ ಕಾಣಿಸಿಕೊಂಡಿರುವುದರಿAದ ಇವುಗಳನ್ನು ಕೀಳಲೆ ಬೇಕಾದ ಅನಿವಾರ್ಯತೆ ರೈತನದ್ದಾಗಿದೆ. ಹೀಗಾಗಿ ಕಾರ್ಮಿಕರು ಈ ಕೆಲಸದಲ್ಲಿ ತೊಡಗಿದ್ದಾರೆ. ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ನೀರನ್ನು ಕೆರೆಯಿಂದ ಹಾಯಿಸಿ ಭತ್ತದ ಗದ್ದೆಗೆ ಬಿಡಲಾಗುತ್ತಿದೆ. ಇದರಿಂದ ರೈತನಿಗೆ ಈ ಬಾರಿ ಹೆಚ್ಚಿನ ಹೊರೆ ಬಿದ್ದಂತಾಗಿದೆ. ಭತ್ತದ ಭೂಮಿಯಲ್ಲಿ ನಿರಂತರ ನಷ್ಟ ಅನುಭವಿಸುತ್ತ ಬರುತ್ತಿರುವ ಕೃಷಿಕನಿಗೆ ಈ ಬಾರಿ ಮಳೆ ಸಮಸ್ಯೆಯಿಂದ ಒಂದಲ್ಲ ಒಂದು ತೊಂದರೆ ಎದುರಿಸುತ್ತಿದ್ದಾನೆ. ಸಿದ್ದಾಪುರ : ಮಳೆಯ ಕೊರತೆಯಿಂದಾಗಿ ಸಿದ್ದಾಪುರ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುತ್ತದೆ. ವರ್ಷಂಪ್ರತಿ ಮಳೆಗಾಲದ ಆಗಸ್ಟ್ ತಿಂಗಳಿನಲ್ಲಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿತ್ತು. ಆದರೆ ಈ ಬಾರಿಯ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ನೀರಿನ ಪ್ರಮಾಣ ಕ್ಷೀಣಗೊಂಡಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಸಿದ್ದಾಪುರ - ನೆಲ್ಲಿಹುದಿಕೇರಿ ಭಾಗದ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿತ್ತು. ಈ ಬಾರಿ ಮುಂಗಾರು ಮಳೆ ಜುಲೈ ತಿಂಗಳಿನಲ್ಲಿ ಒಂದು ವಾರ ರಭಸದಿಂದ ಸುರಿದ ಹಿನ್ನೆಲೆಯಲ್ಲಿ ಮಾತ್ರ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿತ್ತು. ನಂತರದ ದಿನಗಳಲ್ಲಿ ಮಳೆ ಬಾರದೆ ಇದೀಗ ಕಾವೇರಿ ನದಿಯಲ್ಲಿ ದಿನದಿಂದ ದಿನಕ್ಕೆ ನೀರು ಕಡಿಮೆಯಾಗುತ್ತಾ ಬರುತ್ತಿದೆ. ಬಿಸಿಲಿನ ತಾಪದಿಂದಾಗಿ ಭತ್ತದ ಕೃಷಿಕರಿಗೆ ಸಮಸ್ಯೆಯಾಗಿದೆ. ಮಳೆಯನ್ನು ಅವಲಂಭಿಸಿ ಭತ್ತದ ಕೃಷಿ ಮಾಡಿರುವ ಕೃಷಿಕರು ಆಕಾಶದತ್ತ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಮೀನುಗಳನ್ನು ಹದ ಮಾಡಿಕೊಂಡಿದ್ದ ರೈತರು ಮಳೆಯಿಲ್ಲದೆ ತೇವಾಂಶವಿಲ್ಲದೆ ಕಂಗಾಲಾಗಿದ್ದಾರೆ. ಮುಂಗಾರು ದುರ್ಬಲವಾಗಿರುವುದರಿಂದ ವಾಡಿಕೆಗಿಂತ ಮಳೆ ಕೊರತೆಯಿಂದಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರದ ಸ್ಥಿತಿ ನಿರ್ಮಾಣವಾಗುತ್ತಿದೆ. ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ಜಲಮೂಲಗಳು ಉದ್ಭವವಾಗಿ ಕೆಲವ ಕೃಷಿಕರು ಗದ್ದೆಗಳಲ್ಲಿ ನಾಟಿ ಕಾರ್ಯವನ್ನು ಮಾಡಿರುತ್ತಾರೆ. ಆದರೆ ಬಿಸಿಲಿನ ತಾಪಕ್ಕೆ ಗದ್ದೆಗಳು ಇದೀಗ ಒಣಗುತ್ತಿದೆ. ಸಿದ್ದಾಪುರ, ಗುಹ್ಯ, ಕರಡಿಗೋಡು, ಅಭ್ಯತ್ಮಂಗಲ, ವಾಲ್ನೂರು-ತ್ಯಾಗತ್ತೂರು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಈ ನಡುವೆ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಕೃಷಿಕರು ಭತ್ತದ ಬೀಜಗಳನ್ನು ಬಿತ್ತಿದ್ದಾರೆ. ಆದರೆ ಒಂದೆಡೆ ಮಳೆಯ ಕೊರತೆ ಮತ್ತೊಂದೆಡೆ ಕಾರ್ಮಿಕರ ಸಮಸ್ಯೆಯಿಂದಾಗಿ ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ನಿರ್ಮಾಣವಾಗಿದೆಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ. ಕರಿಮೆಣಸು ಬಳ್ಳಿಗಳಲ್ಲಿ ಮೆಣಸುಗಳು ದಪ್ಪ ಆಕಾರದಲ್ಲಿ ಬೆಳೆಯಬೇಕಾದಲ್ಲಿ ಮಳೆ ಅವಶ್ಯಕತೆ ಇದೆ ಮತ್ತು ಚಿಗುರುಗಳು ಮಣಿಕಟ್ಟಲು ಮಳೆ ಬೇಕಾಗಿದ್ದು ಬೆಳೆಗಾರರು ಚಿಂತೆಯಲ್ಲಿದ್ದಾರೆ. ಕಾಫಿ ಹಾಗೂ ಕರಿಮೆಣಸಿನ ಬೆಳೆಗಳಿಗೆ ಮಳೆ ಬಾರದೇ ಸಮಸ್ಯೆಯಾಗಿದೆ. ಬೆಳೆಗಳಿಗೆ ಬೆಲೆ ಅಧಿಕ ಬರುವ ಸಂದರ್ಭದಲ್ಲಿ ಮಳೆ ಕೊರತೆ ಕಾಣಿಸಿಕೊಂಡಿದ್ದು ಬೆಳೆಗಾರರಿಗೆ ಆತಂಕ ಎದುರಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಾಲ್ನೂರು-ತ್ಯಾಗತ್ತೂರು ಗ್ರಾಮದ ಯುವ ಕೃಷಿಕ ಮುಂಡ್ರುಮನೆ ಸುದೀಶ್ ಗದ್ದೆಗಳಲ್ಲಿ ಭತ್ತದ ಬೀಜ ಬಿತ್ತನೆ ಮಾಡಲಾಗಿದ್ದು ನಾಡಿ ಕಾರ್ಯ ಮಾಡಲು ನೀರಿನ ಸಮಸ್ಯೆ ಎದುರಾಗಿದೆ. ಇದೀಗ ಇರುವ ಜಲಮೂಲಗಳಿಂದ ಕೃಷಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾದರೆ ಕೃಷಿಕರಿಗೆ ಇನ್ನಷ್ಟು ಸಮಸ್ಯೆಯಾಗುತ್ತದೆಂದು ಅವರು ತಿಳಿಸಿದರು.
ಪೊನ್ನಂಪೇಟೆ : ಪೊನ್ನಂಪೇಟೆ ತಾಲೂಕಿನಲ್ಲಿ ಪ್ರಸ್ತುತ ವರ್ಷ ವಾಡಿಕೆಯಂತೆ ಮಳೆಯಾಗದಿರುವ ಕಾರಣ ಭತ್ತದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಈ ವರ್ಷ ಆಗಸ್ಟ್ ತಿಂಗಳಿನಲ್ಲಿ ತುಂಬಿ ತುಳುಕುತಿದ್ದ ಗದ್ದೆಗಳು ನೀರಿಲ್ಲದೇ ಬತ್ತಿಹೋಗುತ್ತಿವೆ. ಉತ್ತಮ ಮಳೆಯಾಗದ ಕಾರಣ ಭೂಮಿಯಲ್ಲಿ ಜಲಹುಟ್ಟದೆ ಇರುವ ಕಾರಣ ತೆರೆದ ಬಾವಿಗಳು, ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಈ ವರ್ಷ ಬರಗಾಲದ ಮುನ್ಸೂಚನೆ ಎದ್ದು ಕಾಣುತ್ತಿದೆ.
ದಕ್ಷಿಣ ಕೊಡಗಿನಲ್ಲೇ ಅತಿ ಹೆಚ್ಚು ಭತ್ತದ ಕೃಷಿ ಮಾಡುವ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೇಗೂರು ಗ್ರಾಮದಲ್ಲಿ ಪ್ರತಿ ವರ್ಷ ಈ ಸಮಯಕ್ಕೆ ಗದ್ದೆಗಳು ನೀರಿನಿಂದ ತುಂಬಿ ತುಳುಕುತ್ತಿದ್ದರಿಂದ ನಾಟಿ ಕಾರ್ಯ ನಡೆಸಲು ಕೃಷಿಕರು ಗದ್ದೆಯಲ್ಲಿ ನೀರು ಕಡಿಮೆಯಾಗುವ ವರೆಗೂ ಕಾಯಬೇಕಿತ್ತು. ವಿಪರ್ಯಾಸವೆಂದರೆ ಈ ಬಾರಿ ಮಳೆಯ ಕೊರತೆಯಿಂದ ಗದ್ದೆಗಳಲ್ಲಿ ನೀರು ಇಲ್ಲದಿರುವ ಕಾರಣ ನಾಟಿ ಕಾರ್ಯ ನಡೆಸಲು ರೈತರು ಮಳೆಗಾಗಿ ಕಾಯುತ್ತಾ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇಗೂರು ಗ್ರಾಮದ ರೈತರು ಮಳೆಯ ಪ್ರಮಾಣವನ್ನು ಅವಲಂಬಿಸಿ ಜುಲೈ ೧೫ ರಿಂದ ಸೆಪ್ಟೆಂಬರ್ ೧೫ ರ ವರೆಗೂ ನಾಟಿ ಕಾರ್ಯ ಮಾಡುತ್ತಾರೆ. ಈ ವರ್ಷ ವಾಡಿಕೆಗಿಂತ ಅರ್ಧದಷ್ಟು ಮಾತ್ರ ಮಳೆಯಾಗಿದ್ದು, ಭತ್ತದ ಕೃಷಿಗೆ ಸಮಸ್ಯೆಯಾಗಿದೆ. ಈ ಬಾರಿ ಹಲವು ವರ್ಷಗಳಿಂದ ಗದ್ದೆ ಕೃಷಿ ಮಾಡದ ರೈತರು ಕೂಡ ಗದ್ದೆಯನ್ನು ನಾಟಿಗಾಗಿ ಸಿದ್ದಪಡಿಸಿದ್ದು ಸಸಿ ಮಡಿಗಳು ನಾಟಿಗೆ ತಯಾರಾಗಿವೆ. ಗದ್ದೆಯನ್ನು ಹೊಂದಿರುವ ಬೇಗೂರು ಗ್ರಾಮದ ಎಲ್ಲಾ ರೈತರು ಈ ಭಾರಿ ಭತ್ತದ ಕೃಷಿಗೆ ಮುಂದಾಗಿದ್ದಾರೆ. ಕೆಲವರು ಕೆರೆಯಿಂದ ಗದ್ದೆಗೆ ನೀರು ಹಾಯಿಸಿ ನಾಟಿ ನೆಡಲು ಮುಂದಾಗಿದ್ದಾರೆ. ಮಳೆ ಕೊರ