ಮಡಿಕೇರಿ, ಆ. ೧೮: ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಮಾಡುವ ನಿಟ್ಟಿನಲ್ಲಿ ಪೊಲೀಸರು ಸಮರ ಸಾರಿದ್ದಾರೆ. ಈ ನಡುವೆ ಜಿಲ್ಲೆಯಲ್ಲಿ ಕೊಕೇಯ್ನ್, ಎಂ.ಡಿ.ಎA.ಎ. ಎಂಬ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳ ರಾಜ್ಯದ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೇರಳದ ರವೀಶ್ ಕುಮಾರ್ (೨೬), ಮಹಮ್ಮದ್ ನಾಸೀರ್ (೨೭) ಹಾಗೂ ಜೀಷ್ನು ಮುರುಳಿ (೨೩) ಬಂಧಿತ ಆರೋಪಿಗಳು ಇವರಿಂದ ೨೪.೬೧ ಗ್ರಾಂ ಎಂ.ಡಿ.ಎA.ಎ. ಹಾಗೂ ೩.೪೫ ಗ್ರಾಂ ಕೊಕೇಯ್ನ್, ವಶಪಡಿಸಿಕೊಳ್ಳಲಾಗಿದೆ. ತಾ. ೧೭ ರಂದು ಮಾದಕ ವಸ್ತು ಮಾರಾಟದ ಕುರಿತು ಖಚಿತ ಮಾಹಿತಿ ದೊರೆತ ಮೇರೆಗೆ ಬಲಮುರಿ-ಮೂರ್ನಾಡು ರಸ್ತೆ ಬಳಿ ದಾಳಿ ನಡೆಸಿದ ಪೊಲೀಸರು ಮಾಲು ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾದಕ ವಸ್ತು ತಡೆಗಟ್ಟುವ ನಿಟ್ಟಿನಲ್ಲಿ ಮಡಿಕೇರಿ ಡಿವೈಎಸ್‌ಪಿ ಜಗದೀಶ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನಾಪೋಕ್ಲು ಉಪನಿರೀಕ್ಷಕ ಈ. ಮಂಜುನಾಥ್ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.