ಕುಶಾಲನಗರ, ಆ. ೧೭: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಮಹೋತ್ಸವ ಆಚರಣಾ ಸಮಿತಿ ಇವರ ಸಹಯೋಗದಲ್ಲಿ ಪತ್ರಕರ್ತರ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು, ಕುಶಾಲನಗರದ ಜಂಪ್ ಸ್ಮಾಷ್ ಬ್ಯಾಡ್ ಮಿಂಟನ್ ಅಕಾಡೆಮಿಯ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯಾವಳಿಯ ಸಿಂಗಲ್ಸ್ ವಿಭಾಗದಲ್ಲಿ ಆದರ್ಶ್ ಅವರು ಪ್ರಥಮ ಸ್ಥಾನ ಪಡೆದು, ಟ್ರೋಫಿ ಹಾಗೂ ೫ ಸಾವಿರ ನಗದನ್ನು ಸ್ವೀಕರಿಸಿದರು. ಸಿಂಗಲ್ಸ್ನಲ್ಲಿ ಲೋಕೇಶ್ ಕಾಟಕೇರಿಯವರು ದ್ವಿತೀಯ ಸ್ಥಾನ ಪಡೆದು, ಟ್ರೋಫಿ ಹಾಗೂ ರೂ. ೩ ಸಾವಿರ ನಗದನ್ನು ಸ್ವೀಕರಿಸಿದರು. ಸುಬ್ರಮಣಿಯವರು ಮೂರನೇ ಸ್ಥಾನಕ್ಕೆ ಟ್ರೋಫಿ ಹಾಗೂ ೧ ಸಾವಿರ ನಗದನ್ನು ಪಡೆದು ಕೊಂಡರು. ನಾಲ್ಕನೇ ಸ್ಥಾನ ಪಡೆದ ವಿನೋದ್ ಅವರು, ಟ್ರೋಫಿ ಹಾಗೂ ೫೦೦ ರೂ. ನಗದನ್ನು ಪಡೆದುಕೊಂಡರು.
ಡಬಲ್ಸ್ನಲ್ಲಿ ನವೀನ್ ಹಾಗೂ ವಿಶ್ವ ಕುಂಬೂರು ಅವರು ಪ್ರಥಮ ಸ್ಥಾನವನ್ನು ಪಡೆದು, ಟ್ರೋಫಿ ಹಾಗೂ ೫ ಸಾವಿರ ನಗದನ್ನು ಸ್ವೀಕರಿಸಿದರು. ಸುಬ್ರಮಣಿ ಹಾಗೂ ಶಿವರಾಜ್ ಅವರು ದ್ವಿತೀಯ ಸ್ಥಾನ ಪಡೆದು, ಟ್ರೋಫಿ ಹಾಗೂ ೩ ಸಾವಿರ ಟ್ರೋಫಿ ಸ್ವೀಕರಿಸಿದರು. ಲೋಕೇಶ್ ಹಾಗೂ ಸವಿತಾ ರೈ ಅವರು ತೃತೀಯ ಸ್ಥಾನ ಪಡೆದು, ಟ್ರೋಫಿ ಹಾಗೂ ೧೫೦೦ ರೂ. ನಗದನ್ನು ಪಡೆದುಕೊಂಡರು. ವಿನೋದ್ ಕೆ.ಎಂ. ಹಾಗೂ ಕೆ.ಬಿ. ಷಂಶುದ್ದೀನ್ ಅವರು ನಾಲ್ಕನೇ ಸ್ಥಾನಕ್ಕೆ ಟ್ರೋಫಿ ಹಾಗೂ ೧ ಸಾವಿರ ನಗದನ್ನು ತಮ್ಮದಾಗಿಸಿಕೊಂಡರು.
ಸಿಂಗಲ್ಸ್ ವಿಭಾಗದಲ್ಲಿ ಜಿಲ್ಲೆಯ ೨೪ ಪತ್ರಕರ್ತರು ಭಾಗವಹಿಸಿದ್ದರು. ನಾಲ್ಕು ಪೂಲ್ಗಳಾಗಿ ಆಟಗಾರರನ್ನು ವಿಂಗಡಿಸಿ, ಲೀಗ್ ಮಾದರಿಯಲ್ಲಿ ಪಂದ್ಯಾವಳಿಯನ್ನು ನಡೆಸಲಾಯಿತು. ಡಬಲ್ಸ್ನಲ್ಲಿ ೨೪ ಕೊಡಗಿನ ಆಟಗಾರರು ಭಾಗವಹಿಸಿದ್ದರು. ನಾಲ್ಕು ಪೂಲ್ಗಳಾಗಿ ಆಟಗಾರರನ್ನು ವಿಂಗಡಿಸಲಾಯಿತು. ಅಂರ್ರಾಷ್ಟಿçÃiÀÄ ಶಟಲ್ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ ಪಂದ್ಯಾವಳಿಯನ್ನು ನಡೆಸಿಕೊಟ್ಟರು. ನಿಲೀಶ ಜೋಜೋ ಹಾಗೂ ದ್ರುವ್ ಅವರು, ಪಂದ್ಯಾವಳಿಯಲ್ಲಿ ತೀರ್ಪುಗಾರಿಕೆಯನ್ನು ನೀಡಿದರು.
ಉದ್ಘಾಟನೆ: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಇವರ ಸಹಯೋಗದಲ್ಲಿ ಕುಶಾಲ ನಗರದ ಜಂಪ್ ಸ್ಮಾಷ್ ಬ್ಯಾಡ್ಮಿಂಟನ್ ಅಕಾಡೆಮಿಯ ಕ್ರೀಡಾಂಗಣದಲ್ಲಿ ನಡೆದ ಪತ್ರಕರ್ತರ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾ ವಳಿಯನ್ನು ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಎ.ಆರ್. ಕುಟ್ಟಪ್ಪ ನೆರವೇರಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಸುದ್ದಿಯ ಜಂಜಾಟದ ನಡುವೆ ಪತ್ರಕರ್ತರು ಶಟಲ್ ಬ್ಯಾಡ್ ಮಿಂಟನ್ ಪಂದ್ಯಾ ವಳಿಯಲ್ಲಿ ಭಾಗವಹಿಸಿದ್ದಾರೆ. ಇದು ಪತ್ರಕರ್ತರ ಸುದ್ದಿಯ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಕಾರ್ಯ ಕ್ರಮವನ್ನು ಉತ್ತಮವಾಗಿ ಆಯೋ ಜಿಸಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಪಂದ್ಯಾವಳಿಯ ಸಂಚಾಲಕ ಕೆ.ಬಿ. ಷಂಶುದ್ದೀನ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೆöÊಡ್ ಪ್ರಾಮರ್ಟೀಸ್ ಹಾಗೂ ಡೆವಲಪ್ಪರ್ಸ್ನ ಮಾಲೀಕರಾದ ಹೆಚ್.ಪಿ. ರಂಜನ್ ಮಾತನಾಡಿ, ಸದಾ ಸುದ್ದಿಯಲ್ಲಿ ನಿರತರಾಗಿರುವ ಪತ್ರಕ ರ್ತರು ಕ್ರೀಡೆಯಲ್ಲಿ ತೊಗಗಿರುವುದು ಸಂತಸದ ವಿಷಯ ಎಂದರು.
ಅಂರ್ರಾಷ್ಟಿçÃಯ ಶಟಲ್ ಬ್ಯಾಡ್ಮಿಂಟನ್ ಆಟಗಾರ್ತಿ ಜ್ಯೋತಿ ಸೋಮಯ್ಯ ತಾತಪಂಡ ಮಾತನಾಡಿ, ಆಟಗಾರರಿಗೆ ಕ್ರೀಡೆಗೆ ಸಂಬAಧಿಸಿದAತೆ ಸಲಹೆಗಳನ್ನು ನೀಡಿದರು. ಅಂರ್ರಾಷ್ಟಿçÃಯ ಶಟಲ್ ಬ್ಯಾಡ್ಮಿಂಟನ್ ಆಟಗಾರ್ತಿ ಹಾಗೂ ತರಬೇತುದಾರರಾದ ಜ್ಯೋತಿ ಸೋಮಯ್ಯ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಪ್ರೆöÊಡ್ ಪ್ರಾಪರ್ಟೀಸ್ ಐಂಡ್ ಡೆವಲ ಪರ್ಸ್ನ ಮಾಲೀಕರಾದ ಹೆಚ್.ಪಿ. ರಂಜನ್ ಹಾಗೂ ಕಲಾವಿದರು ಹಾಗೂ ಚಲನಚಿತ್ರ ನಿರ್ದೇಶಕರಾದ ಗಯಾಜರ್ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.
ನಂತರ ಬಹುಮಾನ ವಿಜೇತರಿಗೆ ವೇದಿಕೆಯಲ್ಲಿ ಬಹುಮಾನ ವಿತರಿಸಿದರು. ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್ ಸ್ವಾಗತಿಸಿದರು. ಸದಸ್ಯರಾದ ನಂಜುAಡಸ್ವಾಮಿ ನಿರೂಪಿಸಿದರು. ಸಂಘದ ನಿರ್ದೇಶಕ ಶಿವರಾಜು ವಂದಿಸಿದರು.
ವೇದಿಕೆಯಲ್ಲಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಎ.ಆರ್. ಕುಟ್ಟಪ್ಪ, ಕೊಡಗು ಪ್ರೆಸ್ ಕ್ಪಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಕ್ರೀಡಾ ಸಂಚಾಲಕರಾದ ಸಂತೋಷ್ ರೈ, ಸದಸ್ಯರಾದ ಹೆಚ್.ಸಿ. ಜಯಪ್ರಕಾಶ್, ಕ್ರೀಡಾ ಸಂಚಾಲಕ ಬಿ.ಜಿ. ಮಂಜು, ಪ್ರಮುಖ ಮಹದೇವ್ ಇದ್ದರು.