ಕೂಡಿಗೆ, ಆ. ೧೭: ಹಾಸನ-ಕುಶಾಲನಗರ ರಾಜ್ಯ ಹೆದ್ದಾರಿ ರಸ್ತೆಯಾಗಿರುವ ಕೂಡ್ಲೂರು ಗ್ರಾಮದಲ್ಲಿ ಹೆದ್ದಾರಿ ಮೂಲಕ ತೆಗೆದುಕೊಂಡು ಹೋಗಿರುವ ಏತ ನೀರಾವರಿ ಯೋಜನೆಯ ನೀರು ಸರಬರಾಜು ಮಾಡುವ ಪೈಪ್‌ಲೈನ್ ಹೆದ್ದಾರಿ ಮಧ್ಯ ಭಾಗದಲ್ಲಿ ಒಡೆದು ಹೋಗಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ನೀರು ಪೋಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಮೂಲಕ ಏತ ನೀರಾವರಿ ಯೋಜನೆಯ ಘಟಕದಿಂದ ಈ ವ್ಯಾಪ್ತಿಯ ನೂರಾರು ಎಕರೆಗಳಷ್ಟು ಪ್ರದೇಶಕ್ಕೆ ಬೇಸಾಯ ಮಾಡಲು ನೀರು ಒದಗಿಸಲಾಗುತ್ತಿದೆ. ಆದರೆ, ಘಟಕದ ಕಾಮಗಾರಿಯು ನಡೆಯುವ ಸಂದರ್ಭಗಳಲ್ಲಿ ಹೆದ್ದಾರಿಯ ಸಂಪರ್ಕದ ನೀರಿನ ಪೈಪ್‌ಲೈನ್ ಸಮರ್ಪಕವಾಗಿ ಜೋಡಣೆಯಾಗದ ಹಿನ್ನೆಲೆಯಲ್ಲಿ ಹೆದ್ದಾರಿ ಮಧ್ಯಭಾಗದಲ್ಲಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಓಡಾಡುವ ನೂರಾರು ವಾಹನ ಚಾಲಕರಿಗೆ ಚಾಲನೆ ಮಾಡಲು ಕಷ್ಟಕರವಾಗಿದೆ. ಸಾರ್ವಜನಿಕರಿಗೂ ಸಮಸ್ಯೆ ಆಗುತ್ತಿದೆ. ಸಂಬAಧಿಸಿದ ಇಲಾಖೆಯವರು ತುರ್ತಾಗಿ ಸರಿಪಡಿಸುವಂತೆ ವಾಹನ ಚಾಲಕರು ಆಗ್ರಹಿಸಿದ್ದಾರೆ.