ಸೋಮವಾರಪೇಟೆ, ಆ. ೧೭: ಕಳೆದ ಒಂದು ತಿಂಗಳಿನಿAದ ಪಟ್ಟಣದ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಭುವನೇಶ್ವರಿ ಸನ್ನಿಧಿಯಲ್ಲಿ ಜರುಗಿದ ಕರ್ಕಾಟಕ (ಆಟಿ) ಮಾಸದ ಕೊನೆಯ ಪೂಜೆಯು ಚಂಡಿಕಾ ಹೋಮದೊಂದಿಗೆ ಸಂಪನ್ನಗೊAಡಿತು.
ಕ್ಷೇತ್ರದಲ್ಲಿ ತ್ರಿಶಕ್ತಿ ಸ್ವರೂಪಿಣಿಯಾಗಿ ನೆಲೆ ನಿಂತಿರುವ ಭುವನೇಶ್ವರಿ ದೇವಿಗೆ ಜುಲೈ ೧೭ ರಿಂದ ಆಟಿ ಮಾಸದ ದುರ್ಗಾದೀಪ ನಮಸ್ಕಾರ ಪೂಜೆಯು ಆರಂಭಗೊAಡಿದ್ದು, ಪ್ರತಿನಿತ್ಯ ಶ್ರದ್ಧಾಭಕ್ತಿಯಿಂದ ಒಂದು ತಿಂಗಳ ಕಾಲ ನಡೆಯಿತು.
ಕೊನೆಯ ದಿನದಂದು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಆರಂಭವಾಗಿ, ನಂತರ ಸಂಜೆ ದೇವಿಗೆ ೨೧ ವರ್ಷಗಳ ಆಟಿ ಪೂಜೆಯ ಅಂಗವಾಗಿ ಚಂಡಿಕಾ ಹೋಮವನ್ನು ನೂರಾರು ಭಕ್ತರ ಸಮ್ಮುಖದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಮಣಿಕಂಠನ್ ನಂಬೂದರಿ ಮತ್ತು ಅರ್ಚಕರಾದ ಜಗದೀಶ್ ಉಡುಪ ಅವರ ನೇತೃತ್ವದಲ್ಲಿ ನಡೆಯಿತು. ನಂತರ ಸುಹಾಸಿನಿ ಪೂಜೆಯನ್ನು ಅರ್ಚಕ ಬೆಂಗಳೂರಿನ ಸೋಮನಾಥ್ ಹೊಳ್ಳ ನಿರ್ವಹಿಸಿದರು. ಈ ಸಂದರ್ಭ ಪೂಜಾ ಕೈಂಕರ್ಯಗಳಿಗೆ ಅರಕಲಗೂಡಿನ ಹರಿಭಟ್, ಕೋಲಾರ ಮುಳಬಾಗಿಲಿನ ಶ್ರೀರಂಗ ಭಟ್, ಅಶೋಕ್ ಭಟ್, ಕೇರಳದ ಪಯ್ಯನೂರಿನ ಕೃಷ್ಣಕುಮಾರ್, ಹಾಸನದ ಚಂದ್ರಶೇಖರ್ ಭಟ್, ಕುಶಾಲನಗರದ ಯೋಗೇಶ್ ಭಟ್, ಸೋಮವಾರಪೇಟೆಯ ಚಂದ್ರಹಾಸ್‌ಭಟ್, ಪ್ರಸಾದ್‌ಭಟ್, ಜಯರಾಮ ಉಡುಪ, ವೆಂಕಟೇಶ್ ಅಯ್ಯರ್, ಬಜೆಗುಂಡಿ ಮಣಿ ಮತ್ತಿತರರು ಸಹಕರಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್‌ಕುಮಾರ್, ಕಾರ್ಯದರ್ಶಿ ಪ್ರಸನ್ನ ನಾಯರ್ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಹಲವು ವಿಶೇಷ ಪೂಜೆಗಳು, ಭಕ್ತರಿಂದ ಸಾಮೂಹಿಕ ಭಜನೆ, ನಿತ್ಯ ಲಲಿತ ಸಹಸ್ರನಾಮ ಪಠಣೆ, ಪುಷ್ಪಾಲಂಕಾರ, ವೇದ ಮಂತ್ರಘೋಷದೊAದಿಗೆ ಪೂಜೆ ಸಂಪನ್ನಗೊAಡಿತು. ಪೂಜೆಯ ಅಂಗವಾಗಿ ನಿತ್ಯ ಅನ್ನದಾನವನ್ನು ಏರ್ಪಡಿಸಲಾಗಿತ್ತು.