ಮಡಿಕೇರಿ, ಆ. ೧೭ : ರೋಟರಿ ಮಡಿಕೇರಿ ವುಡ್ಸ್ ವತಿಯಿಂದ
ತಾ. ೧೯ ರಂದು ನಗರದಲ್ಲಿ ಆಟೋ ಚಾಲಕ, ಮಾಲೀಕ ಮತ್ತು ಕುಟುಂಬಸ್ಥರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ನಗರದ ರೆಡ್ ಕ್ರಾಸ್ ಭವನದಲ್ಲಿ ಆಯೋಜಿತ ಶಿಬಿರವನ್ನು ಬೆಳಿಗ್ಗೆ ೧೦ ಗಂಟೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿ. ನಾಗರಾಜಾಚಾರ್ ಉದ್ಘಾಟಿಸಲಿದ್ದಾರೆ. ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಬಿ.ಕೆ. ರವೀಂದ್ರ ರೈ, ಶಿಬಿರದ ವೈದ್ಯರಾದ ಡಾ. ಚೇತನ್, ಡಾ. ಕೃಷ್ಣದೀಪ್, ಡಾ. ಹರ್ಷ ಮೂಗೂರ್, ಡಾ. ಶಿಲ್ಪಾ , ಡಾ. ಕಿರಣ್ ಭಟ್, ರೋಟರಿ ವುಡ್ಸ್ ಕಾರ್ಯದರ್ಶಿ ಹರೀಶ್ ಕಿಗ್ಗಾಲು, ಸಹಾಯಕ ಗವರ್ನರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್. ಸಂಪತ್ ಕುಮಾರ್ ಪಾಲ್ಗೊಳ್ಳಲಿದ್ದು ಅಮೃತ್ ಸಿಂಚನ ಪ್ರಯೋಗಾಲಯದ ಸಹಕಾರ ಶಿಬಿರಕ್ಕಿದೆ. ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ರೋಟರಿ ವುಡ್ಸ್ ಅಧ್ಯಕ್ಷ ಕೆ. ವಸಂತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೋಂದಣಿಗಾಗಿ ಸಂಪರ್ಕ ಸಂಖ್ಯೆ - ೭೩೪೮೯೩೩೭೮೨