ಮಡಿಕೇರಿ, ಆ. ೧೭: ಕಾಡಾನೆ ದಾಳಿಗೆ ಸಿಲುಕಿ ಗಾಯಗೊಂಡಿದ್ದ ಕಕ್ಕಬ್ಬೆಯ ಅನು ಸುಬ್ಬಯ್ಯ ಅವರನ್ನು ಮೈಸೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಂಬೆಯAಡ ಅನು ಸುಬ್ಬಯ್ಯ ನಿನ್ನೆ ಗ್ರಾಮದ ದಾರಿಯಲ್ಲಿ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಕಾಡಾನೆ ದಾಳಿ ಮಾಡಿದ್ದು, ಸುಬ್ಬಯ್ಯ ಪ್ರಾಣಪಾಯದಿಂದ ಪಾರಾಗಿದ್ದರು.
ಈ ಬಗ್ಗೆ ಶಾಸಕ ಪೊನ್ನಣ್ಣ ಅವರು ಸ್ಪಂದಿಸಿ ಸಹಕರಿಸಿದ್ದಾರೆ. ಇಂದು ಶಾಸಕರ ಸೂಚನೆಯಂತೆ ಕಾಂಗ್ರೆಸ್ ವಕ್ತಾರ ಸಂಕೇತ್ ಪೂವಯ್ಯ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸೇರಿ ಗಾಯಾಳುವನ್ನು ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಿದ್ದಾರೆ. ನಿನ್ನೆ ಸಂಜೆ ನಡೆದ ಘಟನೆಯಲ್ಲಿ ಸುಬ್ಬಯ್ಯ ಅವರ ಕಾಲು ಮುರಿತವಾಗಿದೆ.
ವಿಷಯ ತಿಳಿದ ತಕ್ಷಣ ಶಾಸಕರು ಸಂಕೇತ್ ಪೂವಯ್ಯ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಸಹಾಯ ಮಾಡುವಂತೆ ಸೂಚನೆ ನೀಡಿದ್ದರು, ಇದೀಗ ಇವರನ್ನು ಮೈಸೂರು ಅಪೋಲೊ ಆಸ್ಪತ್ರೆಗೆ ಸೇರಿಸಲಾಗಿದೆ. ಕಾಡಾನೆಗಳ ದಾಳಿ ತಡೆಯಲು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸುವುದಾಗಿ ಶಾಸಕ ಪೊನ್ನಣ್ಣ ತಿಳಿಸಿದ್ದಾರೆ.