ಸೋಮವಾರಪೇಟೆ, ಆ. ೧೬: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಲ್ಲೇಖದಂತೆ ಪ್ರವರ್ಗ ೧ರ ಉಪ ಜಾತಿಯ ಪಟ್ಟಿಯಲ್ಲಿರುವ ಮೊಗೇರ್ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈಬಿಡುವ ಬಗ್ಗೆ ಸರ್ಕಾರ ಕ್ರಮವಹಿಸುತ್ತಿದ್ದು, ಇದಕ್ಕೆ ತಾಲೂಕು ಮೊಗೇರ ಸೇವಾ ಸಮಾಜದ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿ ಇಲಾಖಾಧಿಕಾರಿಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರವರ್ಗ ೧ರಲ್ಲಿ ಇರುವ ಮೊಗೇರ್ ಜಾತಿಯು ಪರಿಶಿಷ್ಟ ಜಾತಿಯ ಮೊಗೇರ್(ಮೊಗೇರ) ಎಂದು ಕರೆಯಲ್ಪಡುವ ಜಾತಿಯ ಜೊತೆಗೆ ಯಾವುದೇ ರೀತಿಯ ಸಂಬAಧ ಹೊಂದಿಲ್ಲ. ಕೊಡಗಿನಲ್ಲಿ ಸರಿಸುಮಾರು ೩೮ ಸಾವಿರಕ್ಕೂ ಅಧಿಕ ಮೊಗೇರ ಸಮುದಾಯದವರಿದ್ದಾರೆ. ಪ್ರವರ್ಗ ೧ರ ಮೊಗೇರ್ ಜಾತಿಯು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಂದುವರೆದಿದ್ದು, ಪರಿಶಿಷ್ಟ ಜಾತಿಯ ಮೊಗೇರ್(ಮೊಗೇರ) ಸಮುದಾಯ ಹಿಂದುಳಿದಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮೊಗೇರ್ ಮತ್ತು ಪರಿಶಿಷ್ಟ ಜಾತಿಯ ಮೊಗೇರ್(ಮೊಗೇರ) ಜಾತಿಗಳ ಆಚರಣೆಯಲ್ಲೂ ಸಾಕಷ್ಟು ಭಿನ್ನತೆಯಿದೆ. ಒಂದು ವೇಳೆ ಪ್ರವರ್ಗ ೧ರಲ್ಲಿರುವ ಮೊಗೇರ್ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈಬಿಟ್ಟರೆ ಪರಿಶಿಷ್ಟ ಜಾತಿಯ ಮೊಗೇರ ಸಮುದಾಯದ ಸವಲತ್ತುಗಳಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆ ಮೊಗೇರ್ ಜಾತಿಯನ್ನು ಪರಿಶಿಷ್ಟ ಜಾತಿ ಎಂದು ಪರಿಗಣಿಸಬಾರದು ಎಂದು ಮನವಿ ಸಲ್ಲಿಸಲಾಗಿದೆ.
ಈ ಸಂಬAಧಿತ ಮನವಿಯನ್ನು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸ್ವಾಮಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸುವ ಸಂದರ್ಭ ತಾಲೂಕು ಮೊಗೇರ ಸೇವಾ ಸಮಾಜದ ಅಧ್ಯಕ್ಷ ದಿನೇಶ್, ರಾಜ್ಯ ಸಮಿತಿ ಸದಸ್ಯ ಪಿ.ಕೆ. ಚಂದ್ರು, ಜಿಲ್ಲಾ ಗೌರವಾಧ್ಯಕ್ಷ ಗೌತಮ್ ಶಿವಪ್ಪ, ಉಪಾಧ್ಯಕ್ಷ ದಾಮೋಧರ್, ಜಿಲ್ಲಾ ಕಾರ್ಯದರ್ಶಿ ಹರೀಶ್, ತಾಲೂಕು ಉಪಾಧ್ಯಕ್ಷ ನಂದ, ಖಜಾಂಚಿ ಜಯಪ್ರಕಾಶ್, ಬಿಳಿಕಿಕೊಪ್ಪ ಹರೀಶ್, ಕುಶಾಲಪ್ಪ, ಕುಸುಬೂರು ಶಿವಪ್ಪ ಗಣೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.