ಮಡಿಕೇರಿ, ಆ. ೧೫ : ಸ್ವಾತಂತ್ರö್ಯಕ್ಕಾಗಿ ಶ್ರಮಿಸಿದ ಮಹನೀಯರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಾವೆಲ್ಲ ಒಂದಾಗಿ ನಡೆಯಬೇಕಿದೆ. ಸ್ವಾತಂತ್ರö್ಯದ ಪರಿಕಲ್ಪನೆಯ ಸಮಗ್ರತೆಯನ್ನು ಅರ್ಥೈಸಿಕೊಂಡು ಭೇದ ಭಾವವಿಲ್ಲದೆ ಸಮಾನತೆಯ ಬದ್ಧತೆ ಯೊಂದಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣವೆಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ನಾಡಿನ ಜನತೆಗೆ ಕರೆ ನೀಡಿದರು.

ಕೊಡಗು ಜಿಲ್ಲಾಡಳಿತದ ವತಿಯಿಂದ ಕೋಟೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೭ನೇ ಸ್ವಾತಂತ್ರೊö್ಯÃತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು. ಪ್ರಾಣವನ್ನೇ ಮುಡಿಪಾಗಿಟ್ಟು ಹೋರಾಡಿದ ಹೋರಾಟಗಾರರ ಪ್ರಯತ್ನದಿಂದಾಗಿ ಸೌಹಾರ್ದತೆ, ಬ್ರಾತೃತ್ವದ ಅಡಿಗಲ್ಲಿನ ಮೇಲೆ ಸ್ವಾತಂತ್ರö್ಯ ಲಭಿಸಿದೆ. ಸ್ವಾತಂತ್ರö್ಯಕ್ಕಾಗಿ ಪ್ರಾಣ ಬಲಿದಾನಗೈದ ರಾಷ್ಟಿçÃಯ ಹಾಗೂ ಕೊಡಗು ಜಿಲ್ಲೆಯ ಹೋರಾಟಗಾರರನ್ನು ಸ್ಮರಿಸಬೇಕಿದೆ. ನಮ್ಮ ದೇಶದ ಐಕ್ಯತೆ, ಸಮಗ್ರತೆ, ಶಾಂತಿ, ಸೌಹಾರ್ದತೆ, ಸಂಸ್ಕೃತಿಗಳ ರಕ್ಷಣೆಗೆ ಕೈಜೋಡಿಸುವದಾಗಿ ಪಣತೊಡಬೇಕಿದೆ. ಸ್ವಾತಂತ್ರö್ಯ ಹೋರಾಟದ ಇತಿಹಾಸ ಇಂದಿನ ಅಭಿವೃದ್ಧಿಗೆ ಮುನ್ನೋಟವಾಗಲಿ ಎಂದು ಸಚಿವರು ಆಶಿಸಿದರು.

ಅಭಿವೃದ್ಧಿಗೆ ಬದ್ಧ

ಮುಖ್ಯಮಮತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಸಾರ್ವಜನಿಕರಿಗೆ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಬಹುಜನರ ಹಿತಕಾಪಾಡುವಲ್ಲಿ ಮುಂದಾಗಿದೆ. ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ನೀಡಿದ್ದ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನರ ಮನ ಗೆದ್ದಿದೆ. ಶಕ್ತಿ ಯೋಜನೆಯಡಿ ೯,೦೮,೨೨೩ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದು, ೩.೩೪ ಕೋಟಿ ಮೊತ್ತದ ಟಿಕೆಟ್ ಹಣ ಭರಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಜುಲೈ ತಿಂಗಳಲ್ಲಿ ರೂ. ೪.೨೪ ಕೋಟಿ ಹಣ ಗ್ರಾಹಕರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಗೃಹಲಕ್ಷಿö್ಮ ಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ ೧,೦೧,೬೬೭ ಮಂದಿ ಹೆಸರು ನೋಂದಾಯಿಸಿಕೊAಡಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ೧,೨೯,೫೩೭ ಮಂದಿ ಹೆಸರು ನೋಂದಾಯಿಸಿದ್ದು, ೨,೯೦,೪೫,೦೯೯ ವೆಚ್ಚವನ್ನು ಸರಕಾರ ಭರಿಸಿರುವದಾಗಿ ಸಚಿವರು ಮಾಹಿತಿ ನೀಡಿದರು.

ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರವಾಸೋದ್ಯಮ, ಕಾಫಿ ಬ್ರಾಂಡಿAಗ್, ರೈತರ ವಾಹನ ಖರೀದಿಗೆ ಸಾಲ, ಏರ್‌ಸ್ಕಿçಪ್ಟ್, ಕಾಡಾನೆ ಹಾವಳಿ ತಡೆಗೆ ರೈಲ್ವೇ ಬ್ಯಾರಿಕೇಡ್ ಸೇರಿದಂತೆ ಹಲವು ಯೋಜನೆಗಳಿಂದ ಇಲ್ಲಿಯ ಜನತೆಗೆ ಉಪಯೋಗವಾಗಲಿದೆ. ಇದರೊಂದಿಗೆ ಕೊಡಗರು ಎಂಬ ಪದದ ಬದಲಾಗಿ ಕೊಡವರು ಎಂದು ಸಚಿವ ಸಂಪುಟದಲ್ಲಿ ಬದಲಾವಣೆ ಮಾಡಿರುವದು ಕೊಡಗು ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಯನ್ನು ಪರಿಹರಿಸಿದಂತಾಗಿದೆ ಎಂದು ಹೇಳಿದರು.

(ಮೊದಲ ಪುಟದಿಂದ) ಶಿಕ್ಷಣ, ಆರೊಗ್ಯ, ಮಹಿಳೆಯರ ಸಬಲೀಕರಣ, ಅಲ್ಪಸಂಖ್ಯಾತರ ಅಭಿವೃದ್ಧಿ, ಅಸಂಘಟಿತ ವಲಯಕ್ಕೆ ಪ್ರಾಧಾನ್ಯತೆ, ಮೀನುಗಾರಿಕೆ, ನೀರಾವರಿ, ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಹೀಗೇ ಹಲವು ಕ್ಷೇತ್ರಗಳಲ್ಲಿ ಮುಖ್ಯಮಂತ್ರಿಗಳು ಒತ್ತು ನೀಡಿದ್ದಾರೆಂದು ಸಚಿವರು ಹೇಳೀದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಮಂಥರ್ ಗೌಡ ಮಾತನಾಡಿ; ಕೊಡಗು ಜಿಲ್ಲೆಯಲ್ಲಿ ೧೮೩೭ರಲ್ಲಿಯೇ ಸ್ವಾತಂತ್ರö್ಯ ಹೋರಾಟ ಆರಂಭವಾಗಿದೆ. ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರಂತಹವರು ಹೋರಾಟದಲ್ಲಿ ದುಮುಕಿದ್ದರು. ಎಲ್ಲರ ಹೋರಾಟದಿಂದಾಗಿ ಸ್ವಾತಂತ್ರö್ಯ ಲಭಿಸಿದೆ. ಇಂದಿಗೂ ನಾವು ಹೋರಾಡುತ್ತಲೇ ಇದ್ದೇವೆ. ಆದರೆ ಅಂದಿನ ಹಾಗೂ ಇಂದಿನ ಹೋರಾಟಕ್ಕೂ ವ್ಯತ್ಯಾಸವಿದೆ. ಇಂದು ಜೀವನಕ್ಕಾಗಿ, ಶಿಕ್ಷಣ, ರಾಜಕಾರಣ, ಆಹಾರ, ಶಾಂತಿ ಸೌಹಾರ್ಧತೆಗಾಗಿ ಹೋರಾಟ ಮಾಡುತ್ತಿದ್ದೇವೆ. ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ನೀಡುವದು ನಮಗಳ ಜವಾಬ್ದಾರಿಯಾಗಿದೆ. ಈಗಿನ ಸರಕಾರ ಎಲ್ಲರಿಗೂ ಅನುಕೂಲಕರ ವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಎಲ್ಲರೂ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕೆಂದು ಕೋರಿದರು.

ಇದೇ ಸಂದರ್ಭದಲ್ಲಿ ಸರಕಾರದ ಪ್ರಗತಿಪರ ಅಭಿವೃದ್ಧಿ ಕುರಿತಾದ ಕಿರು ಹೊತ್ತಿಗೆಯನ್ನು ಉಸ್ತುವಾರಿ ಸಚಿವರು ಬಿಡುಗಡೆಗೊಳಿಸಿದರು. ಡಿಎಆರ್ ಇನ್ಸ್ಪೆಕ್ಟರ್ ಚೆನ್ನನಾಯಕ್ ನೇತೃದಲ್ಲಿ ನಡೆದ ಪಥಸಂಚಲನದ ಗೌರವ ರಕ್ಷೆಯನ್ನು ಸಚಿವರು ಸ್ವೀಕಾರ ಮಾಡಿದರು. ಪಥ ಸಂಚಲನದಲ್ಲಿ ಮಡಿಕೇರಿ ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಸೇವಾದಳ ತಂಡ ಪ್ರಥಮ ಸ್ಥಾನ ಪಡೆದರೆ, ಸಂತ ಮೈಕಲರ ಶಾಲೆಯ ಗೈಡ್ಸ್ ತಂಡ ದ್ವಿತೀಯ, ಸಂತ ಜೋಸೆಫರ ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗ

ತಂಡ ತೃತೀಯ ಸ್ಥಾನ ಪಡೆದುಕೊಂಡಿತು.

ವೇದಿಕೆಯಲ್ಲಿ ಮಡಿಕೇರಿ ನಗರ ಸಭಾಧ್ಯಕ್ಷೆ ಅನಿತಾ ಪೂವಯ್ಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾದಿಕಾರಿ ನಂಜುAಡೇಗೌಡ, ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರ್‌ರಾಜ್, ಜಿ.ಪಂ. ಸಿಇಓ ವರ್ಣಿತ್ ನೇಗಿ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಸೇರಿದಂತೆ ಇತರರು ಇದ್ದರು. ಸಂತ ಮೈಕಲರ ಶಾಲಾ ವಿದ್ಯಾರ್ಥಿನಿಯರು ನಾಡಗೀತೆ, ರೈತ ಗೀತೆ ಹಾಡಿದರೆ, ಶಿಕ್ಷಕರಾದ ಊ.ರ. ನಾಗೇಶ್, ಕೆ.ಯು. ರಂಜಿತ್ ನಿರೂಪಿಸಿದರು. ಸದಾಶಿವ ಪಲ್ಲೇದ್ ವಂದಿಸಿದರು.