ಸೋಮವಾರಪೇಟೆ, ಆ. ೧೫ : ಜೆಸಿಐ ಭಾರತ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ರಾಷ್ಟಿçÃಯ ಪ್ರತಿಭಾ ಅನ್ವೇಷಣಾ ಪರೀಕ್ಷೆಯನ್ನು ಸೋಮವಾರಪೇಟೆಯ ವಿವಿಧ ಶಾಲೆಗಳಲ್ಲಿ ನಡೆಸಲಾಯಿತು.
ಈ ಹಿಂದೆ ಪಟ್ಟಣಕ್ಕೆ ಹೊಂದಿಕೊAಡಿರುವ ಕೆಲವೊಂದು ಶಾಲೆಗಳಲ್ಲಿ ಮಾತ್ರ ಈ ಪರೀಕ್ಷೆಯು ನಡೆಯುತ್ತಿತ್ತು. ಆದರೆ ಈ ಬಾರಿ ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ಅಧ್ಯಕ್ಷೆ ರುಬೀನಾ ಎಂ.ಎ. ಅವರು ತಮ್ಮ ಘಟಕದಿಂದ ತಾಲೂಕಿನ ಸರಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಿಗೆ ತೆರಳಿ ಪರೀಕ್ಷೆಯಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದು, ಅದರಂತೆ ೧೪ ಶಾಲೆಗಳಿಂದ ೭೦೭ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಮತ್ತು ಯಶಸ್ವಿಯಾಗಿ ಪರೀಕ್ಷೆ ಎದುರಿಸಲು ಪ್ರತಿಭಾನ್ವೇಷಣಾ ಪರೀಕ್ಷೆಯು ಪ್ರೇರಣೆಯಾಗಿದೆ. ಈ ನಿಟ್ಟಿನಲ್ಲಿ ಗ್ರಾಮಾಂತರ ಭಾಗದಲ್ಲೂ ಪರೀಕ್ಷೆ ಆಯೋಜಿಸಲಾಗಿದೆ ಎಂದು ರುಬೀನಾ ತಿಳಿಸಿದರು.
ಪರೀಕ್ಷೆಯಲ್ಲಿ ರಾಷ್ಟçಮಟ್ಟದಲ್ಲಿ ವಿಜೇತರಾದವರಿಗೆ ಪ್ರಥಮ ರೂ.೪೦ ಸಾವಿರ, ದ್ವಿತೀಯ ರೂ. ೨೦ಸಾವಿರ, ತೃತೀಯ ರೂ.೧೦ಸಾವಿರ ನಗದು ಮತ್ತು ಬಹುಮಾನವನ್ನು ಜೆಸಿಐ ಭಾರತ ನೀಡಿದರೆ, ರಾಜ್ಯಮಟ್ಟದಲ್ಲಿ ವಿಜೇತರಾದವರಿಗೆ ಪ್ರಥಮ ರೂ.೭೫೦೦, ದ್ವಿತೀಯ ರೂ. ೫೦೦೦, ತೃತೀಯ ರೂ. ೩೦೦೦ ಮತ್ತು ಆಕರ್ಷಕ ಟ್ರೋಫಿಯನ್ನು ಜೆಸಿಐ ವಲಯ ಮಟ್ಟದಲ್ಲಿ ನೀಡಲಾಗುವುದು ಎಂದು ಪರೀಕ್ಷೆಯ ನೇತೃತ್ವವನ್ನು ವಹಿಸಿಕೊಂಡಿದ್ದ ರುಬೀನಾ ಮಾಹಿತಿ ನೀಡಿದರು.
ಶಾಲೆಯ ಶಿಕ್ಷಕ ವೃಂದ ಮತ್ತು ಜೆಸಿಐನ ಕಾರ್ಯದರ್ಶಿ ಜಗದಾಂಭ ಗುರುಪ್ರಸಾದ್, ಜೂನಿಯರ್ ಜೆಸಿ ಚೇರ್ ಪರ್ಸನ್ ರಿಶಾ, ಪ್ರಕಾಶ್ ಕೆ ಎ, ವಿನುತ ಸುದೀಪ್, ರವಿಕುಮಾರ್, ನೆಲ್ಸನ್, ಲಿಕ್ಕಿ ಮತ್ತು ವಿಕೇಶ್ ಅವರುಗಳು ಪರೀಕ್ಷೆಗೆ ಸಹಕರಿಸಿದರು.