ನಾಪೋಕ್ಲು, ಆ. ೧೫: ಸಮೀಪದ ಕುಂಜಿಲ- ಕಕ್ಕಬ್ಬೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಿಂಚಣಿದಾರರಿಗೆ ಪಿಂಚಣಿ ಆದೇಶ ಪತ್ರವನ್ನು ಶಾಸಕ ಎ.ಎಸ್.ಪೊನ್ನಣ್ಣ ವಿತರಿಸಿದರು. ಸಾಮಾಜಿಕ ಭದ್ರತೆ ಯೋಜನೆಯಡಿ ಪಂಚಾಯಿತಿ ವ್ಯಾಪ್ತಿಯ ೧೪ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರವನ್ನು ವಿತರಿಸಲಾಯಿತು. ಇದಕ್ಕೂ ಮುನ್ನ ಕಕ್ಕಬ್ಬೆ ಆರೋಗ್ಯ ಕೇಂದ್ರದ ಬಳಿ ಇರುವ ಯೋಗ ಕೇಂದ್ರದ ಉದ್ಘಾಟನೆಯನ್ನು ಶಾಸಕ ಎಸ್ ಪೊನ್ನಣ್ಣ ನೆರವೇರಿಸಿದರು. ಈ ಸಂದರ್ಭ ಕಂದಾಯ ಅಧಿಕಾರಿ ರವಿಕುಮಾರ್ ,ಗ್ರಾಮ ಲೆಕ್ಕಿಗರು, ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಜರಿದ್ದರು.

ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿದ ಶಾಸಕರು ಮುತ್ತವ್ವ ಸಭಾಂಗಣದಲ್ಲಿ ಜರುಗಿದ ಸನ್ಮಾನ ಕಾರ್ಯಕ್ರಮದಲ್ಲಿ ಪಂಚಾಯಿತಿ ಹಾಗೂ ಗ್ರಾಮಸ್ಥರ ವತಿಯಿಂದ, ನಾಲ್ಕೇರಿ ಭಗವತಿ ದೇವಾಲಯದ ವತಿಯಿಂದ, ಅಮ್ಮಂಗೇರಿ ಸುಬ್ರಹ್ಮಣ್ಯ ಯುವಕ ಸಂಘದ ವತಿಯಿಂದ, ಸಂಜೀವಿನಿ ಒಕ್ಕೂಟದ ವತಿಯಿಂದ ಶಾಸಕ ಪೊನ್ನಣ್ಣನವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಶಾಸಕರ ಸಾರ್ವಜನಿಕರಿಂದ ಮನವಿ ಪತ್ರವನ್ನು ಸ್ವೀಕರಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್, ಅಯ್ಯಪ್ಪ , ಪ್ರಮುಖರಾದ ಬಾಚಮಂಡ ಪೂವಣ್ಣ, ಕಲ್ಯಾಟಂಡ ಮುತ್ತಪ್ಪ , ಪೊನ್ನಾಳ್ ತಂಡ ರಘು ಚಿನ್ನಪ್ಪ, ಪಾಂಡಡ ನರೇಶ್, ಕೇಟೋಳಿರ ಸನ್ನಿ ಸೋಮಣ್ಣ, ಕುಡಿಯರ ಮುತ್ತಪ್ಪ, ಪೊಂಗೇರ ಉಲ್ಲಾಸ್ , ಕೋಡಿರ ವಿನೋದ್, ಲವ ಚಿನ್ನಪ್ಪ, ಭರತ್, ಮಚ್ಚೂರ ರವೀಂದ್ರ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.