ಮಡಿಕೇರಿ, ಆ. ೧೫: ಕೊಡಗು ಸೇರಿದಂತೆ ೮ ಜಿಲ್ಲೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನಲಾ ಗುತ್ತಿರುವ ಕಸ್ತೂರಿ ರಂಗನ್ ವರದಿ ಜಾರಿಗೆ ಹಲವು ವರ್ಷಗಳಿಂದ ಕೊಡಗಿನಲ್ಲಿ ವಿರೋಧ ವ್ಯಕ್ತ ವಾಗುತ್ತಿದ್ದು, ಇಲ್ಲಿಂದಲೇ ಹೋರಾಟದ ಹೆಜ್ಜೆ ಆರಂಭ ಗೊಂಡಿತ್ತು. ಇದೀಗ ಈ ವಿಚಾರ ಮತ್ತೊಮ್ಮೆ ಮುನ್ನಲೆಗೆ ಬಂದಿರುವ ಹಿನ್ನೆಲೆ ಪಕ್ಷಾತೀತವಾಗಿ ಒಗ್ಗೂಡಿ ಹೋರಾಟಕ್ಕೆ ಮುನ್ನುಡಿ ಇಡಲಾಗುತ್ತಿದೆ.
ಇಂದು ನಗರದ ಖಾಸಗಿ ಸಭಾಂಗಣದಲ್ಲಿ ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಹಾಲಿ-ಮಾಜಿ ಶಾಸಕರು ಪಾಲ್ಗೊಂಡು ಸಂಘಟನಾತ್ಮಕ ಹೋರಾಟದ ಸಂದೇಶ ನೀಡಿದರು.
ಮಾಜಿ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೋರಾಟಕ್ಕೆ ಸಹಕರಿಸಿ ನಿಧನರಾದವರನ್ನು ಸ್ಮರಿಸಿ ಮೌನಾಚರಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಾಲಿ ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂಥರ್ ಗೌಡ, ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಮಾಜಿ ವಿಧಾನ ಪರಿಷತ್ತು ಸದಸ್ಯರಾದ ಶಾಂತೆಯAಡ ವೀಣಾ ಅಚ್ಚಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಕಾಂಗ್ರೆಸ್ ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಶಾಸಕರ-ಸಂಸದರ ಒಗ್ಗೂಡಿಸುವಿಕೆ
ಪರಿಣಾಮ ಬೀರುವ ೮ ಜಿಲ್ಲೆಗಳ ಶಾಸಕರು ಹಾಗೂ ಸಂಸದರನ್ನು ಒಗ್ಗೂಡಿಸಿ ಬೆಂಗಳೂರಿನಲ್ಲಿ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ತೀರ್ಮಾನ ಕೈಗೊಳ್ಳಲಾಯಿತು.
ಕಸ್ತೂರಿ ರಂಗನ್ ವರದಿ ಅನುಸಾರ ಪಶ್ಚಿಮಘಟ್ಟ ಪ್ರದೇಶಗಳನ್ನು ಪರಿಸರ ಸೂಕ್ಷö್ಮ ವಲಯ ಎಂದು ಘೋಷಿಸಿ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಹಿನ್ನೆಲೆ ಎಚ್ಚೆತ್ತು ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗಿದೆ. ವರದಿಯ ಪುನರ್ ಪರಿಶೀಲನೆಗೆ ಕೇಂದ್ರ ಸರಕಾರಕ್ಕೆ ಒತ್ತಡ ಹೇರುವುದು. ಅಗತ್ಯ ಬಿದ್ದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ
ಅಧ್ಯಕ್ಷ (ಮೊದಲ ಪುಟದಿಂದ) ತೀತಿರ ಧರ್ಮಜ ಉತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ವರದಿ ಜಾರಿಯ ವಿಚಾರದಲ್ಲಿ ಮೊದಲಿನಿಂದ ನಾವು ವಿರೋಧ ವ್ಯಕ್ತಪಡಿಸುತ್ತಲೆ ಬರುತ್ತಿದ್ದೇವೆ. ಹಲವು ಸಂಘಟನೆ ನಮಗೆ ಬೆಂಬಲ ಸೂಚಿಸಿದೆ. ೫ ಅಧಿಸೂಚನೆಗಳಿಗೆ ವಿರೋಧಿಸಿದ್ದೇವೆ. ಇದೀಗ ಮತ್ತೇ ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷö್ಮವಲಯ ಮಾಡಲು ಹುನ್ನಾರ ನಡೆಯುತ್ತಿದೆ. ಇದು ಜಾರಿಯಾದರೆ ಜಿಲ್ಲೆಯ ಜನರು ಬದುಕಲಾಗುವುದಿಲ್ಲ. ಅಭಿವೃದ್ಧಿ ಕಾರ್ಯಗಳಾಗುವುದಿಲ್ಲ. ಈ ನಿಟ್ಟಿನಲ್ಲಿ ಸಂಘಟಿತ ಹೋರಾಟ ಅನಿವಾರ್ಯ ಎಂದರು.
ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ವರದಿ ಜಾರಿ ವಿರುದ್ಧ ಕಾನೂನು ಹೋರಾಟದ ಅಗತ್ಯತೆ ಇದೆ. ಇದಕ್ಕೆ ನನ್ನ ಸಂಪೂರ್ಣ ಸಹಕಾರ ಇರಲಿದೆ. ಇದರಿಂದಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸರಕಾರಕ್ಕೆ ಈ ಬಗ್ಗೆ ಒತ್ತಡ ಹಾಕಿ ನೈಜಾಂಶ ಮುಂದಿಡಬೇಕಾಗಿದೆ. ಸೂಕ್ಷö್ಮ ಪ್ರದೇಶ ಘೋಷಣೆಯಿಂದ ಜನಜೀವನಕ್ಕೆ ಸಂಕಷ್ಟವಾಗುತ್ತದೆ. ಬೌಗೋಳಿಕವಾಗಿ ಭಿನ್ನ ಜಿಲ್ಲೆಯಾಗಿರುವ ಕೊಡಗಿಗೆ ಈ ವರದಿಯ ಜಾರಿ ಅಗತ್ಯವಿಲ್ಲ ಎಂದರು.
ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಈ ಬಗ್ಗೆ ಸಂಸದರೊAದಿಗೆ ಮಾತನಾಡಿದ್ದೇನೆ. ವರದಿ ಜಾರಿ ವಿರುದ್ಧ ನಾವು ಹಲವು ವಿರೋಧ ಮಾಡಿದ್ದೇವೆ. ಮುಂದೆಯೂ ಸಂಘಟಿತ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದರು. ಕೊಡಗು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಈ ವರದಿ ಜಾರಿಗೆ ಹಲವರು ವಿರೋಧ ವ್ಯಕ್ತಪಡಿಸಿದರು.
ಸಭೆಯಲ್ಲಿ ಪ್ರಮುಖರಾದ ಮಾಚಿಮಾಡ ರಾಜ ತಿಮ್ಮಯ್ಯ, ಬೊಟ್ಟಂಗಡ ರಾಜು, ನಂದಾ ಸುಬ್ಬಯ್ಯ, ಇ.ರಾ. ದುರ್ಗಾಪ್ರಸಾದ್ ಸೇರಿದಂತೆ ಇನ್ನಿತರರು ಹಾಜರಿದ್ದರು.