ಇತ್ತೀಚಿನ ದಿನಗಳಲ್ಲಿ ಯುವಕರು ಮಕ್ಕಳು PUಃಉ ಎಂಬ ಆಟಕ್ಕೆ ಏಕೆ ವ್ಯಸನಿಗಳಾಗಿದ್ದಾರೆ ಎಂಬುದು ಪೋಷಕರ ಪ್ರಶ್ನೆಯಾಗಿದೆ. PUಃಉ ಎಂಬುದು ಠಿಟಚಿಥಿeಡಿ uಟಿಞಟಿoತಿಟಿs ಃಚಿಣಣಟegಡಿouಟಿಜ ನ ಒಂದು ಸಂಕ್ಷಿಪ್ತ ರೂಪವಾಗಿದೆ.
PUಃಉ ಎಂಬುದು "ಒuಟಣiಠಿಟಚಿಥಿeಡಿ gಚಿme" ಆಗಿದೆ. ಇದೊಂದು ರೀತಿಯ "muಟಣiಠಿಟಚಿಥಿeಡಿ bಚಿಣಣಟe ಡಿoಥಿಚಿಟ meಜiಚಿ gಚಿme " ಈ ಆಟವು ಬಹಳಷ್ಟು ಕಡೆ ಹಬ್ಬಿದೆ.
PUಃಉ ಹೆಚ್ಚು ಜನಪ್ರಿಯವಾಗಲು ಪ್ರಮುಖ ಕಾರಣವೆಂದರೆ ಇದರ ಆಟದ ವಿಭಿನ್ನ ಸನ್ನಿವೇಶಗಳು. ಈ ಆಟವನ್ನು ಮೊಬೈಲ್‌ನಲ್ಲಿ ಆಡಲಾಗುತ್ತದೆ. ಇದೊಂದು ವ್ಯವಹಾರ ಮಾದರಿ ರೂಪ ಎಂದು ಹೇಳಿದರೆ ತಪ್ಪಗಲಾರದು. ಈ ಬಹುದೊಡ್ಡ ವ್ಯವಹಾರವನ್ನು ನಡೆಸಿಕೊಂಡು ಹೋಗುತ್ತಿರುವುದು ಒಬ್ಬ ಸಾಮಾನ್ಯ ವ್ಯಕ್ತಿ. ಈ ಆಟವು ಸ್ನೇಹಿತರೊಂದಿಗೆ ಲಾಬಿ ಮಾಡುವ ಸಾಮರ್ಥ್ಯವನ್ನು ಕೂಡ ಹೊಂದಿದೆ. ಮಾತ್ರವಲ್ಲದೆ ದೊಡ್ಡ ರಣರಂಗದಲ್ಲಿ ಹೋರಾಟ ನಡೆಸಿದ ರೀತಿಯಲ್ಲಿ ಭಾಸವಾಗುತ್ತದೆ. ಪ್ರಪಂಚದ ಇತರ PUಃಉ ಆಡುವ ಆಟಗಾರರೊಂದಿಗೂ ಸ್ಪರ್ಧಿಸುವ ಸಾಮರ್ಥ್ಯವನ್ನು ಕೂಡ ಹೊಂದಿದೆ. ಮಾತ್ರವಲ್ಲದೆ ಕೋಟ್ಯಂತರ ಯುವಕರು/ಮಕ್ಕಳು ಈ ಆಟವನ್ನು ಆಡುತ್ತಾರೆ. ಆಡುವುದು ಮಾತ್ರವಲ್ಲದೆ ಈ ಆಟಕ್ಕೆ ವ್ಯಸನಿಗಳಾಗಿರುವುದನ್ನು ನಾವು ಗಮನಿಸಬಹುದು.
ಈ ಆಟವು ಬಿಡುಗಡೆಗೊಂಡಾಗ ಅನೇಕ ವಿಮರ್ಶೆಗಳನ್ನು ಪಡೆಯಿತು. ಅದಲ್ಲದೆ ಮೊಬೈಲ್ ಫೋನ್‌ಗಳಲ್ಲಿ ಬಿಡುಗಡೆಯ ನಂತರ ಅದು ಮತ್ತಷ್ಟು ಕಾಡ್ಗಿಚ್ಚಿನ ರೀತಿಯಲ್ಲಿ ಪ್ರತಿಯೊಬ್ಬರನ್ನು ಸೆಳೆಯಿತು. ಈ ಆಟವು ಯುವಕರು ಮಾತ್ರವಲ್ಲದೆ ಎಲ್ಲಾ ವಯೋಮಾನದವರಲ್ಲಿ ಹೆಚ್ಚಿರುವುದನ್ನು ನೋಡಬಹುದು. ರಿಕ್ರೀಯೇಕ್ಷನ್ ಆಗಿ ಶುರುವಾದಂತಹ ಈ ಆಟವು ಚಟವಾಗಿ ಪರಿವರ್ತಿತವಾಗಿದೆ. ಇದರಿಂದ ಆಟಗಾರರ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅಲ್ಲದೆ ವಿವಿಧ ರೀತಿಯ ಅಪರಾಧಗಳಿಗೆ ಕಾರಣವಾಗುತ್ತದೆ.
ಉದಾಹರಣೆಗೆ : ಈ PUಃಉ ಆಟದಿಂದ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ನಾವು ಸಮೂಹ ಮಾಧ್ಯಮಗಳಲ್ಲಿ ಕೇಳಿರುತ್ತೇವೆ ಮತ್ತು ನೋಡಿರು ತ್ತೇವೆ. PUಃಉ ನಿಷೇಧದ ನಂತರ ಭಾರತದ ಕೆಲವು ಪ್ರದೇಶಗಳಲ್ಲಿ ಆಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಈ ಆಟವು ಹೆಚ್ಚಾಗಿ ಓದುವ ವಿದ್ಯಾರ್ಥಿಗಳ ಮೇಲೆ ಭಯಾನಕ ಪರಿಣಾಮ ಬೀರುತ್ತದೆ. ಅದರಲ್ಲೂ ಹೆಚ್ಚಾಗಿ ಓದುವ ವಿದ್ಯಾರ್ಥಿಗಳು ಈ ಆಟಕ್ಕೆ ವ್ಯಸನಿಗಳಾಗಿರುವುದು ತುಂಬಾ ಬೇಸರವಾದ ವಿಷಯವಾಗಿದೆ. ಈ ಆಟದಿಂದ ಓದುವ ಆಸಕ್ತಿ ಮತ್ತು ಏಕಾಗ್ರತೆ ಕುಂದುತ್ತದೆ. ಏಕೆಂದರೆ ಈ PUಃಉ ಆಟವು ನಿಧಾನವಾಗಿ ಮೆದುಳಿನ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತದೆ.
ಯುವಕರು ಮತ್ತು ಮಕ್ಕಳ ಮನಸ್ಥಿತಿಯನ್ನು ಮಾನಸಿಕವಾಗಿ ಹದಗೆಡಲು ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಆಟವು ಮಕ್ಕಳ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದರೆ ೫ ನೇ ತರಗತಿ ಓದುವ ವಿದ್ಯಾರ್ಥಿಯು PUಃಉ ಆಟಕ್ಕೆ ವ್ಯಸನಿಯಾಗಿ ಇದರ ಪರಿಣಾಮ ಶಾಲೆಗೆ ಹೋಗಲು ನಿರಾಕರಿಸುವ ಪರಿಸ್ಥಿತಿ ಬಂದೊದಗಿದೆ ಯುವಕರ ಪರಿಸ್ಥಿತಿ ನೋಡುವುದಾದರೆ ಒಬ್ಬಂಟಿಯಾಗಿ ಕೊಠಡಿಯ ಬಾಗಿಲು ಮುಚ್ಚಿಕೊಂಡು ಆಡುವುದು ವಿಪರ್ಯಾಸವೇ ಸರಿ.
ಯುವಕರೇ ಮತ್ತು ಮಕಳೇ ನಿಮಗೆ ಮುಂದೆ ಉತ್ತಮ ಜೀವನವಿದೆ; ಈ ಜೀವನವನ್ನು ಹೇಗೆ ರೂಪಿಸಬೇಕು ಎಂಬುದರ ಬಗ್ಗೆ ಆಲೋಚಿಸಿ ನಂತರ ನಿಮ್ಮ ಗುರಿ ಕಡೆಗೆ ಗಮನಹರಿಸಿ. ಬೇಸರವೆನಿಸಿದಾಗ ಗ್ರಾಮಗಳಲ್ಲಿ ಡಿಜಿಟಲ್ ಗ್ರಂಥಾಲಯಗಳಿವೆ, ಅಲ್ಲಿ ಅನೇಕ ಜೀವನ ಮೌಲ್ಯ ಆಧಾರಿತ ಪುಸ್ತಕಗಳು ಲಭ್ಯವಾಗುತ್ತದೆ. ಅಂತಹ ಪುಸ್ತಕಗಳನ್ನು ಓದಿದರೆ ಜ್ಞಾನವು ವೃದ್ಧಿಯಾಗುತ್ತದೆ. ಆದರೆ ಈ PUಃಉ ಆಟದಿಂದ ಯಾವ ಜ್ಞಾನವನ್ನೂ ಪಡೆಯಲು ಸಾಧ್ಯವಿಲ್ಲ. ಜೊತೆಗೆ ಜೀವನಕ್ಕೆ ಬೇಕಾದ ಸಲಹೆ ಸಿಗಲು ಸಾಧ್ಯವೇ ಇಲ್ಲ; ಬದಲಿಗೆ ನಿಮ್ಮ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಬರುವುದಂತು ಖಚಿತ. ಇಂದಿನಿAದಲೇ ಈ PUಃಉ ಆಟವನ್ನು ಬಿಟ್ಟು ಪುಸ್ತಕದ ಕಡೆ ಹೆಚ್ಚು ಒಲವು ನೀಡುವಂತರಾಗಿ.
-ಪೂರ್ಣಿಮ ಚಾರ್ಲಿ
ಕರಡಿಕೊಪ್ಪ ತಿತಿಮತಿ