ವೀರಾಜಪೇಟೆ, ಆ. ೧೫: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗೋಣಿಕೊಪ್ಪಲು ಘಟಕದ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಕಳತ್ಮಾಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಸ್ವಯಂ ಸೇವಕರು ಶಾಲೆಯ ಸುತ್ತ ಬೆಳೆದಿದ್ದ ಕಾಡನ್ನು ಕಡಿದು ಸ್ವಚ್ಛಗೊಳಿಸಿದರು. ಕಳೆದ ವರ್ಷವೂ ಕೂಡ ಇದೇ ತಂಡದವರು ಸುಮಾರು ೧೫೦ಕ್ಕೂ ಹೆಚ್ಚು ಗಿಡಗಳನ್ನು ಶಾಲಾ ಜಾಗದಲ್ಲಿ ನೆಟ್ಟಿದ್ದರು. ಇದೀಗ ಗಿಡಗಳ ಸುತ್ತ ಬೆಳೆದಿರುವ ಕಾಡನ್ನು ಕಡಿಯುವುದರ ಮೂಲಕ ಸ್ವಚ್ಛತೆಯನ್ನು ಮಾಡಿದರು. ಸ್ವಚ್ಛತಾ ಅಭಿಯಾನದಲ್ಲಿ ಸಂಘದ ಸದಸ್ಯರು ಹಾಗೂ ಸ್ವಯಂ ಸೇವಕರುಗಳಾದ ಜಯಪ್ರಕಾಶ್, ಕಿರಣ್ ಕುಮಾರ್, ಅವ್ವಿ, ಚಂದ್ರು, ಕಾಳು, ಉಮೇಶ್, ಸುರೇಶ್ ಹಾಜರಿದ್ದರು.