ಶ್ರೀಮಂಗಲ: ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ಪಟ್ಟು ಅಧ್ಯಕ್ಷೆಯಾಗಿ ಹಾಗೂ ಉಪಾಧ್ಯಕ್ಷರಾಗಿ ಬೊಳ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಚ್ಚಮಾಡ ಸುಮಂತ್, ಕುಞ್ಞಂಗಡ ಕೃಷ್ಣ, ಬಾಬು, ಸರಿತಾ ಪ್ರವೀಣ್, ಕಟ್ಟೇರ ದೇವಮಾಜಿ, ರಾಮು, ಮರಡ ವನಿತ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಞ್ಞಂಗಡ ಅರುಣ್ ಭೀಮಯ್ಯ ಟಿ. ಶೆಟ್ಟಿಗೇರಿ ಶಕ್ತಿ ಕೇಂದ್ರ ಪ್ರಮುಖ್ ಮಾಣೀರ ಉಮೇಶ್, ಸಹ ಪ್ರಮುಖ್ ನಾಗವಂಡ ಕೃಪ, ಬಿಜೆಪಿ ಕಾರ್ಯಕರ್ತರಾದ ಚೆಟ್ಟಂಗಡ ಉಲ್ಲಾಸ್, ಕುಞ್ಞಂಗಡ ಸಜಿ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವಿತಾ ಮತ್ತು ಪುಗ್ಗೇರ ರೇವತಿ ಉಪಸ್ಥಿತರಿದ್ದರು.ಶನಿವಾರಸಂತೆ: ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕಾಗಿ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಗೀತಾ ಹರೀಶ್ ಅಧ್ಯಕ್ಷೆಯಾಗಿ ಹಾಗೂ ಸರ್ದಾರ್ ಅಹಮ್ಮದ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಸೋಮವಾರಪೇಟೆ ತಾಲೂಕು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಶಿವು ಬಾದಾಮಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯಲ್ಲಿ ಒಟ್ಟು ೧೦ ಮಂದಿ ಸದಸ್ಯರಿದ್ದು ೨ ನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂಎ (ಮಹಿಳೆ) ಮೀಸಲು ಸ್ಥಾನದಿಂದ ಗೀತಾ ಹರೀಶ್ ಮಾತ್ರ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂಎ ಮೀಸಲು ಸ್ಥಾನದಿಂದ ಸರ್ದಾರ್ ಅಹಮ್ಮದ್ ನಾಮಪತ್ರ ಸಲ್ಲಿಸಿದ್ದರು. ಬೇರೆ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಇಬ್ಬರ ಅವಿರೋಧ ಆಯ್ಕೆ ಘೋಷಿಸಿದರು. ಚುನಾವಣಾ ಪ್ರಕ್ರಿಯೆ ಸಂದರ್ಭ ಪಿಡಿಓ ಬಿ.ಜೆ.ಮೇದಪ್ಪ ಹಾಜರಿದ್ದರು. ನಂತರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಪAಚಾಯಿತಿ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಡಿ.ಪಿ.ಬೋಜಪ್ಪ, ಮಹಮ್ಮದ್ ಪಾಶ, ಜಿ.ಎಂ.ಕಾAತರಾಜ್, ಚೆಯ್ಯಂಡಾಣೆ: ಪಾರಾಣೆ (ಕೊಣಂಜಗೇರಿ) ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಪಾಡೆಯಂಡ ಕಟ್ಟಿ ಕುಶಾಲಪ್ಪ ಹಾಗೂ ಉಪಾಧ್ಯಕ್ಷೆಯಾಗಿ ಸುಮತಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಶಿಕ್ಷಣಾಧಿಕಾರಿ ಅಕ್ಷರದಾಸೋಹದ ಹೇಮಂತ್ ಕುಮಾರ್ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಉಷಾ ದೇವಮ್ಮ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಉಮಾ ಪ್ರಭು, ಬಿಜೆಪಿ ಸ್ಥಾನಿಯ ಸಮಿತಿ ಅಧ್ಯಕ್ಷ ಅಪ್ಪನೆರವಂಡ ರಾಜ ಪೂವಯ್ಯ, ಗಾ.ಪಂ. ಅಭಿವೃದ್ಧಿ ಅಧಿಕಾರಿ ಸೆಬಾಸ್ಟಿಯನ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.
ರಂಗಸ್ವಾಮಿ, ಎನ್.ಕೆ.ಅಪ್ಪಸ್ವಾಮಿ, ಮಹೇಂದ್ರ, ಸಿ.ಜೆ. ಗಿರೀಶ್, ಬಿ.ಕೆ.ಚಂದ್ರು, ಸುಬ್ರಮಣಿ, ಭಾಗ್ಯಲಕ್ಷಿö್ಮÃ, ಸುನಂದಾ ಇತರರು ಇದ್ದರು.ಗೋಣಿಕೊಪ್ಪಲು: ಹೊಸೂರು ಗ್ರಾಮ ಪಂಚಾಯಿತಿಯ ೨ನೇ ಅವಧಿಗೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿ ಬೆಂಬಲಿತ ಸದಸ್ಯರು ಅಲಂಕರಿಸಿದ್ದಾರೆ. ಅಧ್ಯಕ್ಷರಾಗಿ ಪರಿಶಿಷ್ಟ ಜಾತಿಯ ಹೆಚ್.ಎಸ್. ಮಧು, ಉಪಾಧ್ಯಕ್ಷರಾಗಿ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಶಾಂತಿ ಸೋಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಗಳಾಗಿ ಕೃಷಿ ಇಲಾಖೆಯ ನಿರ್ದೇಶಕ ಶಿವಮೂರ್ತಿ ಚುನಾವಣಾ ಪ್ರಕ್ರಿಯೆ ನಡೆಸಿದರು. ೨ ಸ್ಥಾನಗಳಿಗೂ ತಲಾ ಒಂದೊAದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ನಿಯಮಾನುಸಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೊಲ್ಲೀರ ಧನು ಪೂಣಚ್ಚ, ಎಸ್.ಎ. ರತ್ನ ಸುಬ್ಬಯ್ಯ, ಪಿ. ವಿಶಾಲಾಕ್ಷಿ, ಪಿ.ಎನ್. ಮಾದೇವ, ಎಂ.ಎನ್. ಮಾದಯ್ಯ, ವಿ.ವಿ. ಪ್ರಕಾಶ್, ಟಿ.ಎಂ. ಸುಶೀಲ, ಪಿ.ಎ. ಲಕ್ಷಿö್ಮ, ವೈ.ಎಂ. ಸುಮ, ಹೆಚ್.ಆರ್. ಮಹೇಶ್ವರಿ ಭಾಗವಹಿಸಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎಂ.ಡಿ. ಶ್ರೀನಿವಾಸ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಘೋಷಣೆಯಾದ ನಂತರ ಪಂಚಾಯಿತಿಯ ಹೊರ ಭಾಗದಲ್ಲಿದ್ದ ಬಿಜೆಪಿ ಪಕ್ಷದ ಮುಖಂಡರುಗಳಾದ ಕೊಲ್ಲೀರ ಗೋಪಿ ಚಿಣ್ಣಪ್ಪ, ಧರ್ಮಜ, ಪಂದ್ಯAಡ ಮನು ಸೋಮಯ್ಯ, ಕತ್ರಿಕೊಲ್ಲಿ ನಂಜುAಡ ಕುಮಾರ್ ಸೇರಿದಂತೆ ಪ್ರಮುಖರು ಹಾಜರಿದ್ದು ಹಸ್ತಲಾಘವ ನೀಡಿದರು.