ಮಡಿಕೇರಿ, ಆ. ೧೫: ಮಡಿಕೇರಿ ರೋಟರಿ ವತಿಯಿಂದ ಆಜಾದ್ ನಗರ ಅಂಗನವಾಡಿ ಕೇಂದ್ರಕ್ಕೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

ರೋಟರಿ ಅಧ್ಯಕ್ಷೆ ಗೀತಾ ಗಿರೀಶ್ ಮಾತನಾಡಿ, ರೋಟರಿ ಸಂಸ್ಥೆಯ ಜಿಲ್ಲಾ ಯೋಜನೆಗಳಲ್ಲಿ ಅಂಗನವಾಡಿ ಪುನಶ್ಚೇತನ ಪ್ರಮುಖವಾಗಿದೆ ಎಂದರು.

ಅತಿಥಿ ಬಿ.ಜಿ. ಅನಂತ ಶಯನ, ನಿರ್ದೇಶಕರಾದ ಲಲಿತಾ ರಾಘವನ್, ಮಲ್ಲಿಗೆ ಪೈ, ಅಂಗನವಾಡಿ ಮುಖ್ಯಸ್ಥೆ ಪಾರಿಜಾತ ಹಾಜರಿದ್ದರು.

ಈ ಸಂದರ್ಭ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಅಶ್ವಿನಿ ಸ್ತನ್ಯಪಾನ ಸಪ್ತಾಹದ ಅಂಗವಾಗಿ, ಅದರ ವಿಶೇಷತೆ ಕುರಿತು ತಾಯಂದಿರಿಗೆ ಮಾಹಿತಿ ನೀಡಿದರು.