*ಗೋಣಿಕೊಪ್ಪ, ಆ. ೧೩: ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ನಿಟ್ಟೂರು ಗ್ರಾಮದ ಗದ್ದೆಯಲ್ಲಿ ಆಗಸ್ಟ್ ೨೦ ರಂದು ಪೊನ್ನಂಪೇಟೆ ತಾಲೂಕು ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ತಿಳಿಸಿದ್ದಾರೆ.
ಮಕ್ಕಳು, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಪಾಲ್ಗೊಳ್ಳಲು ಅವಕಾಶವಿದೆ. ೬ ವಯಸ್ಸಿನಿಂದ ವೃದ್ಧರವರೆಗೂ ಮುಕ್ತ ಅವಕಾಶ ನೀಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಿರಿಯರ ವಿಭಾಗದಲ್ಲಿ ೧೦-೧೬, ೧೭-೨೫, ೨೫-೬೦ ವಯೋಮಿತಿಗೆ ಓಟ ಸ್ಪರ್ಧೆ ನಡೆಯಲಿದೆ. ೬೦ ಮೇಲ್ಪಟ್ಟವರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ. ಹಗ್ಗಜಗ್ಗಾಟದಲ್ಲಿ ೭+೨ ನಿಯಮದಂತೆ ತಂಡಕ್ಕೆ ಅವಕಾಶ ನೀಡಲಾಗುತ್ತದೆ. ಮೊದಲ ೨೦ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಮಹಿ ಳೆಯರು ಕೂಡ ಭಾಗವಹಿಸ ಬಹುದಾಗಿದೆ. ಪುರುಷರಿಗೆ ವಾಲಿಬಾಲ್ ಟೂರ್ನಿ ನಡೆಯ ಲಿದ್ದು, ೬+೨ನಿಯಮದಲ್ಲಿ ತಂಡ ರಚನೆ ಮಾಡಬಹುದಾಗಿದೆ. ಮೊದಲು ಬಂದ ೨೦ ತಂಡಗಳಿಗೆ ಮಾತ್ರ ಸ್ಥಾನ ದೊರೆಯಲಿದೆ ಎಂದು ತಿಳಿಸಿದರು.
ನಗದು ಮತ್ತು ಟ್ರೋಫಿ ಬಹುಮಾನವಾಗಿ ನೀಡಲಾಗು ವುದು. ಕ್ರೀಡಾಪಟುಗಳು ಕಡ್ಡಾಯವಾಗಿ ಆಧಾರ್ ಪ್ರತಿ ತರಬೇಕಿದೆ. ಭತ್ತ ಕೃಷಿ ನಶಿಸುತ್ತಿರುವ ಬೆನ್ನಲ್ಲೇ, ಹಿರಿಯರು ಮತ್ತು ಕಿರಿಯರನ್ನು ಗದ್ದೆಗೆ ಸ್ವಾಗತ ಕೋರುವ ಸಂದರ್ಭ ಬಂದಿದೆ. ಇದೇ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು, ಭತ್ತ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಆರ್ಥಿಕ ಕ್ರೋಢೀಕರಣಕ್ಕಿಂತ ಅಕ್ಕಿ ಉತ್ಪಾದನೆಯ ಪ್ರಾಮುಖ್ಯತೆಯನ್ನು ಜನತೆಗೆ ತಿಳಿಸಲು ಕ್ರೀಡಾಕೂಟ ಸಹಕಾರಿ ಎಂದರು. ಹೆಚ್ಚಿನ ಮಾಹಿತಿಗೆ ೯೪೪೯೧೧೮೭೩೭ ಸಂಖ್ಯೆಯಲ್ಲಿ ಸಂಪರ್ಕಿ ಸಬಹುದಾಗಿದೆ. ಗೋಷ್ಠಿಯಲ್ಲಿ ಕಾರ್ಯದರ್ಶಿ ಆದೇಂಗಡ ಪಟ್ಟು ಮಂದಣ್ಣ, ಖಜಾಂಚಿ ಆದೇಂಗಡ ಕೆ. ಶೇಖರ್ ಇದ್ದರು.