ಸೋಮವಾರಪೇಟೆ, ಆ. ೧೩: ಜೆಸಿಐ ಸೋಮವಾರಪೇಟೆ ಪುಷ್ಪಗಿರಿಯ ಜೂನಿಯರ್ ಜೆಸಿ ವಿಭಾಗದಿಂದ ಒಂದು ವಾರಗಳ ಕಾಲ ವಿವಿಧ ಕಾರ್ಯ ಕ್ರಮಗಳೊಂದಿಗೆ ಜೆಜೆಸಿ ಸಪ್ತಾಹವನ್ನು ಆಚರಿಸಲಾಯಿತು.
ಜೂನಿಯರ್ ಜೆಸಿ ಚೇರ್ ಪರ್ಸನ್ ರಿಶಾ ಎಸ್. ಎ. ಅವರು ಸಂಕಷ್ಟದ ಲ್ಲಿದ್ದ ಕುಟುಂಬವೊAದಕ್ಕೆ ದಿನಸಿ ಕಿಟ್ ನೀಡುವ ಮೂಲಕ ಜೆಜೆಸಿ ಸಪ್ತಾಹಕ್ಕೆ ಚಾಲನೆ ನೀಡಿದರು. ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಬಗ್ಗೆ ತರಬೇತಿ, ಡ್ರಾಯಿಂಗ್, ಮಕ್ಕಳ ಸಂತೆ, ಸ್ವಚ್ಛತಾ ಕಾರ್ಯಕ್ರಮ, ಚೌಡೇಶ್ವರಿ ಬ್ಲಾಕ್'ನ ಅಂಗನವಾಡಿ ಮಕ್ಕಳಿಗೆ ಬಿಸ್ಕತ್ ವಿತರಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆದವು. ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶಾಲೆಯ ಗಣಿತ ಶಿಕ್ಷಕರಾದ ಹ್ಯೂಬರ್ಟ್ ಅವರನ್ನು ಸನ್ಮಾನಿಸಲಾಯಿತು. ಜೆಸಿಐ ಅಧ್ಯಕ್ಷೆ ರುಬೀನಾ ಎಂ.ಎ, ಶಾಲೆಯ ಮುಖ್ಯೋಪಾಧ್ಯಾಯರಾದ ಹ್ಯಾರಿ ಮೊರಸ್, ಜೆಸಿ ಪದಾಧಿಕಾರಿಗಳಾದ ನಯನ ಪುರುಷೋತ್ತಮ್, ಪ್ರಕಾಶ್ ಕೆ.ಎ. ಮತ್ತು ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.