ಭಾಗಮಂಡಲ, ಆ. ೧೩: ಭಾಗಮಂಡಲದ ಕಾವೇರಿ ಆಟೋ ಚಾಲಕರ ಸಂಘದ ವತಿಯಿಂದ ಅನಾರೋಗ್ಯಕ್ಕೆ ಒಳಗಾದ ಆಟೋ ಚಾಲಕನಿಗೆ ನೆರವು ನೀಡಲಾಯಿತು.

ಭಾಗಮಂಡಲದ ಆಟೋ ಚಾಲಕ ಕುಯ್ಯಮುಡಿ ಪ್ರವೀಣ್ (ಮನು) ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದರು. ಸಂಘದ ಸದಸ್ಯರು ಅವರ ಮನೆಗೆ ತೆರಳಿ ನೆರವು ನೀಡಿದರು. ಸಂಘದ ಅಧ್ಯಕ್ಷ ಸಿರಕಜೆ ಭವನ್ ಕುಮಾರ್, ಉಪಾಧ್ಯಕ್ಷ ಮತ್ತಾರಿ ಅಜಿತ್, ಕಾರ್ಯದರ್ಶಿ ಶ್ರೀನಾಥ್, ಪ್ರಧಾನ ಕಾರ್ಯದರ್ಶಿ ನಿಡುಬೆ ವೆಂಕಟರಮಣ, ಖಜಾಂಚಿ ಚೊಕ್ಕಾಡಿ ಅಜಯ್ ಹಾಗೂ ವಿಜಯ್ ಪೂಜಾರಿ ಒಟ್ಟಾಗಿ ಸಹಾಯಧನ ವಿತರಿಸಿದರು.