ಗುಡ್ಡೆಹೊಸೂರು, ಆ. ೧೩: ಗುಡ್ಡೆಹೊಸೂರಿನ ಅಭಿಲಾಷ್ ಪೂವಯ್ಯ ಅವರು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಜಿ.ಕೆ.ವಿ.ಕೆ.ಯಲ್ಲಿ ಎಂ.ಎಸ್ (ಏ.ಜಿ) ಪೂರೈಸಿ ಕೃಷಿ ವಿಜ್ಞಾನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಕೃಷಿ ವಿಶ್ವವಿದ್ಯಾಲಯ ಪಿ.ಹೆಚ್.ಡಿ ನೀಡಿದೆ. ಇವರು ‘ಮರಗಳ ಸಂಯೋಜನೆಯ ಮೌಲ್ಯಮಾಪನ ಮತ್ತು ನಗರ ಪರಿಸರದ ವ್ಯವಸ್ಥೆಯಲ್ಲಿ ಪರಿಸರದ ಗುಣಮಟ್ಟವನ್ನು ನಿಯಂತ್ರಿಸುವಲ್ಲಿ ಅವುಗಳ ಪಾತ್ರ’ ಎಂಬ ವಿಷಯದ ಮೇಲೆ ಡಾ. ಎ.ಎಸ್. ದೇವಕುಮಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾಪ್ರಭಂಧ ಮಂಡಿಸಿದ್ದರು. ಕೋಡಿ ಅಭಿಲಾಷ್ ಅವರು ಗುಡ್ಡೆಹೊಸೂರು ಗ್ರಾಮದ ಕೋಡಿ ಪೂವಯ್ಯ ಮತ್ತು ಪ್ರೇಮ ದಂಪತಿ ಪುತ್ರರಾಗಿದ್ದಾರೆ.