ಕೂಡಿಗೆ, ಆ. ೧೩: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಕೃಷಿ ಭೂಮಿಯಲ್ಲಿ ಭತ್ತದ ಬೀಜೋತ್ಪದನೆಗೆ ಸಂಬAಧಿಸಿದAತೆ ಭತ್ತದ ನಾಟಿ ಕಾರ್ಯವು ಆರಂಭಗೊAಡಿದೆ. ಕೃಷಿ ಕ್ಷೇತ್ರದ ೧೩ ಎಕರೆಗಳಷ್ಟು ಜಮೀನಿನಲ್ಲಿ ಈಗಾಗಲೇ ಇಲಾಖೆಯ ನಿಯಮಾನುಸಾರ ಬಿ.ಆರ್. ೨,೬೫೫, ಹೈಬ್ರೀಡ್ ಭತ್ತದ ತಳಿಯ ಸಸಿಮಡಿಗಳನ್ನು ಸಿದ್ಧತೆ ಮಾಡಲಾಗಿದೆ. ಅದರನ್ವಯ ಭೂಮಿಯನ್ನು ನಾಟಿ ಕಾರ್ಯಕ್ಕೆ ಉಳುಮೆ ಮಾಡಲಾಗಿದೆ. ನಾಟಿ ಕಾರ್ಯ ಆರಂಭಗೊAಡಿದೆ.